ಶುರುವಾಯ್ತು ನಿಮಗೊಂದು ಸಿಹಿ ಸುದ್ದಿ!
Posted date: 08 Sun, Nov 2020 06:08:00 PM

ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸಿನ ಕಥೆ ವೆಬ್ ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆದಿದೆ. ಕನ್ನಡದ ಮಟ್ಟಿಗೆ ಇದು ಹೊಚ್ಚಹೊಸ ಕಾನ್ಸೆಪ್ಟ್ ಆಗಿರುವುದರಿಂದ ನೋಡಿದ ಎಲ್ಲರ ಗಮನ ಸೆಳೆದಿದೆ.
ಎಂಟು ಎಪಿಸೋಡುಗಳನ್ನು ಹೊಂದಿರುವ ಈ ಫ್ಯಾಮಿಲಿ ಎಂಟರ್ಟೈನ್ಮೆಂಟ್ ವೆಬ್ ಸಿರೀಸ್ ಗೆ ಮುಹೂರ್ತ ಪೂಜೆ ನೆರವೇರಿದೆ. ಪರ್ಪಲ್ ರಾಕ್ ಎಂಟರ್ಟೈನರ್ಸ್ ಮತ್ತು ಗೋಲ್ಡ್ ಚೈನ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ತಯಾರಾಗುರ್ತಿರುವ ಈ ವೆಬ್ ಸರಣಿಗೆ ಗೋವಾದಲ ಶಾಂತದುರ್ಗ ದೇವಸ್ಥಾನದಲ್ಲಿ ನವೆಂಬರ್ 5ರಂದು ಆರಂಭವಾಯಿತು. ಇಲ್ಲಿಂದ ಮೂವತ್ತು ದಿನಗಳ ಒಂದೇ ಶೇಡ್ಯೂಲಿನಲ್ಲಿ ಚಿತ್ರೀಕರಣ ಸಾಗಲಿದೆ.
ಭಿನ್ನ ಚಿತ್ರದ ಗೆಲುವಿನ ನಂತರ ಮತ್ತು ಬಿಡುಗಡೆಗೆ ತಯಾರಾಗಿರುವ ಡಿಯರ್ ಸತ್ಯ ಸಿನಿಮಾದ ಬಳಿಕ ಪರ್ಪಲ್ ರಾಕ್ ಎಂಟರ್ಟೈನರ್ಸ್ ರೂಪಿಸುತ್ತಿರುವ ವೆಬ್ ಸಿರೀಸ್ ನಿಮಗೊಂದು ಸಿಹಿಸುದ್ದಿ. ಎನ್ಎಸ್ಎಸ್ ಮೂಲಕ ಪರಿಚಯಿಸಲಾಗುತ್ತಿರುವ ರಘು ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡಲ್ ಮತ್ತು ನಟಿ ಕಾವ್ಯ ಶೆಟ್ಟಿ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಉರ್ವಿ ಸಿನಿಮಾದ ಆನಂದ್ ಸುಂದರೇಶ ಕ್ಯಾಮಾರವನ್ನು ನಿಭಾಯಿಸಿದ್ದಾರೆ. ಉಪೇಂದ್ರ ಅವರ ಟೋಪಿವಾಲಾ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಸುಧೀಂದ್ರ ನಾಡಿಗರ್ ಆರ್ ಈ ವೆಬ್ ಸಿರೀಸ್ ಮೂಲಕ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed