ಶ್ರೀ ಅಥರ್ವಣ ಪ್ರಥ್ಯಂಗಿರ ಚಿತ್ರಕ್ಕೆ ಯು ಸರ್ಟಿಫಿಕೆಟ್
Posted date: 07 Thu, Mar 2019 04:31:29 PM

ಶ್ರೀ ಅಂಗಾಳ ಪರಮೇಶ್ವರಿ ಫಿಲಂ ಪ್ರೊಡಕ್ಷನ್ಸ್ ಲಾಂಛನದಲ್ಲಿ  ಶ್ರೀ ಶ್ರೀ ಶ್ರೀ ಸಪ್ತಗಿರಿ ಅಮ್ಮ (ಏಳುಮಲೈ ಸ್ವಾಮೀಜಿ) ರರು ನಿರ್ಮಿಸಿ  ನಿರ್ದೇಶಿಸಿರುವ ಶ್ರೀ ಅಥರ್ವಣ ಪ್ರಥ್ಯಂಗಿರ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ದೊರೆತಿದೆ.  ಈ ಚಿತ್ರದ ಛಾಯಾಗ್ರಹಣ -  ಹರಿದಾಸ್, ಶ್ರೀಧರ್ ಕೆ,  ಸಂಗೀತ & ಸೌಂಡ್ ಎಫೆಕ್ಟ್ -  ಕರುಣಾ (ಕೆ.ಜಿ.ಎಫ್), ಸಂಕಲನ - ಅರುಣ್ ವಿಐಎಲ್‌ಸಿ, ನಿರ್ವಹಣೆ - ಕುಮಾರ್, ಗೋವಿಂದರಾಜು.ಕೆ, ತಾರಾಗಣದಲ್ಲಿ ಅನುಕೃಷ್ಣ, ಸೀತಾ, ಗಿರೀಶ್ ಜಟ್ಟಿ, ಮಹಾನದಿ ಶಂಕರ್, ಕಾವ್ಯ, ಮರಿಸ್ವಾಮಿ ಮುಂತಾದವರಿದ್ದಾರೆ.   ಈ ಚಿತ್ರದಲ್ಲಿ ಪ್ರಥ್ಯಂಗಿರ ದೇವಿ ಮಹಾ ಶಕ್ತಿ ದೇವತೆ, ಈ ದೇವತೆಯು ಹೊಸೂರಿನ ಯವಧಿಕ್ಕಿನಲ್ಲಿ ಮುಖ ಮಾಡಿ ನೆಲೆಸಿರುತ್ತಾಳೆ. ಹಾಗೆಯೇ ಜನಗಳು ನಿಷ್ಠೆ ಭಕ್ತಿಯಿಂದ ಬೇಡಿದರೆ ಅವರ ಬಯಕೆಗಳು ಈಡೇರುವುದೆಂದು ಜನರು ನಂಬುತ್ತಾರೆ.  ಈ ದೇವಿಯ ಪವಾಡಗಳು ನಡೆಯುವ  ಕುರಿತಾದ ಚಿತ್ರವಿದು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶ್ರೀ ಅಥರ್ವಣ ಪ್ರಥ್ಯಂಗಿರ ಚಿತ್ರಕ್ಕೆ ಯು ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.