ಶ್ರೀ ಶಾಂತಿಸಾಗರ ಮಹಾರಾಜರ ಜೀವನಾಧಾರಿತ ಚಿತ್ರ ಸ್ವಸ್ತಿ
Posted date: 10 Mon, Sep 2018 10:13:11 AM

ಇಪ್ಪತ್ತನೆ ಶತಮಾನದ ಜೈನ ಧರ್ಮದ ಪ್ರಥಮಾಚಾರ್ಯರಾದ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಜೀವನಾಧಾರಿತ ಸ್ವಸ್ತಿ ಎಂಬ ಚಲನಚಿತ್ರದ ಚಿತ್ರೀಕರಣವು ಇತ್ತೀಚೆಗೆ ಮುಕ್ತಾಯಗೊಂಡಿತು. ಸುನಾಮಿ ಚಿತ್ರದ ನಟ ನಿರ್ಮಾಪಕರಾದ ರಾಜು ಪಾಟೀಲ್‌ರ ಶ್ರೀ ಪದ್ಮಾವತಿ ಮೂವೀಸ್ ಬ್ಯಾನರ್‌ನ ಅಡಿಯಲ್ಲಿ ಚಿತ್ರೀಕರಣವು ಪೂರ್ಣಗೊಂಡಿತು. ಈ ಸ್ವಸ್ತಿ ಚಿತ್ರದ ನಿರ್ದೇಶನದ ಹೊಣೆಯನ್ನು ಸ್ವತಃ ರಾಜು ಪಾಟೀಲ್‌ರೇ ಹೊತ್ತಿದ್ದಾರೆ. ಕನ್ನಡ, ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಶಾಂತಿಸಾಗರ ಮಹಾರಾಜರ ಜನ್ಮ 1872-1955 ರ ಮಧ್ಯದಲ್ಲಿ ನಡೆಯುವ ಕಥೆಯ ಹಂದರದ ವಿಷಯವಾಗಿದೆ.
ಬೆಳಗಾವಿ ಜಿಲ್ಲೆಯ, ಚಿಕ್ಕೋಡಿ ತಾಲ್ಲೂಕಿನ ಭೋಜ್ ಗ್ರಾಮದವರಾದ ತಂದೆ ಭೀಮಗೌಡ ಹಾಗೂ ತಾಯಿ ಸತ್ಯವತಿ ಇವರ ಸುಪತ್ರನೇ ಸಾತಗೌಡ ಪಾಟೀಲ್‌ರು. ಇವರೇ ಮುಂದೆ ತಮ್ಮ ಸಂಸಾರವನ್ನು ತ್ಯಾಗ ಮಾಡಿ ಮುನಿ ದೀಕ್ಷೆ ಪಡೆದು ಆಚಾರ್ಯ ಶಾಂತಿಸಾಗರರಾಗುತ್ತಾರೆ. ಈ ಚಿತ್ರದಲ್ಲಿ ಶಾಂತಿಸಾಗರ ಮಹಾರಾಜರ ಪಾತ್ರವನ್ನು ಸ್ವತಃ ರಾಜು ಪಾಟೀಲರೇ ನಿರ್ವಹಿಸುತ್ತಾರೆ. ಉಳಿದ ಪಾತ್ರಗಳಲ್ಲಿ ಖ್ಯಾತ ನಟರಾದ ಜಯಣ್ಣ, ದತ್ತಣ್ಣ, ಬಿರಾದರ್, ಡಿಂಗ್ರಿ ನಾಗರಾಜ್, ಶಂಕರ್ ಪಾಟೀಲ್, ಶೃಂಗೇರಿ ರಾಮಣ್ಣ ಹಾಗೂ ಕೆ.ಎಲ್.ಕುಂದರಗಿ, ವಿದ್ಯಾ, ಮಾಧುರಿ ಹಾಗೂ ಶೃತಿ ಮತ್ತು ಇತರರು ತಾರಬಳಗದಲ್ಲಿದ್ದಾರೆ. ಚಿತ್ರದ ಚಿತ್ರೀಕರಣವು ಬೆಂಗಳೂರು, ತುಮಕೂರು, ಶ್ರವಣಬೆಳಗೊಳ, ಹುಕ್ಕೇರಿ, ಎಲಿಮುನೋಳ್ಳಿ, ಹಳಿಂಗಳಿಯ ಭದ್ರಗಿರಿ, ಬಾಹುಬಲಿ ಹಾಗೂ ಕುಂತುಗಿರಿಯಲ್ಲಿ ಚಿತ್ರೀಕರಣವು ಪೂರ್ತಿಗೊಂಡಿತು.  
ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಪಿ.ಎಸ್. ಧರಣೇಂದ್ರಕುಮಾರ್ ಹಾಗೂ ಪ್ರಸನ್ನ ಜೈನ್, ಸಾಹಿತ್ಯ ಬರೆದು, ಚಿತ್ರಕ್ಕೆ ಕುಮಾರ್ ಈಶ್ವರ್‌ರವರು ಸಂಗೀತ ನೀಡಿದ್ದಾರೆ. ಈ ಚಿತ್ರದ ಕಥೆಗೆ ಅನುಗುಣವಾಗಿ ರಾಜು ಪಾಟೀಲ್‌ರು ತಮ್ಮ ದೇಹದ ತೂಕವನ್ನು
20 ಕೆ.ಜಿ. ಕಡಿಮೆ ಮಾಡಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶ್ರೀ ಶಾಂತಿಸಾಗರ ಮಹಾರಾಜರ ಜೀವನಾಧಾರಿತ ಚಿತ್ರ ಸ್ವಸ್ತಿ - Chitratara.com
Copyright 2009 chitratara.com Reproduction is forbidden unless authorized. All rights reserved.