ಸದ್ಯದಲ್ಲೇ ತೆರೆಗೆ ಮೂರ್ಕಲ್ ಎಸ್ಟೇಟ್
Posted date: 04 Thu, Oct 2018 06:01:23 PM

ಶ್ರೀಭದ್ರಾವತಿ ಮೂವೀ ಮೇಕರ್ಸ್ ಲಾಂಛನದಲ್ಲಿ ಕುಮಾರ್ ಎನ್ ಭದ್ರಾವತಿ ಅವರು ನಿರ್ಮಿಸಿರುವ, ಕೃಷ್ಣ ಎಲ್ ಹಾಗೂ ಮುನಿಸ್ವಾಮಿ ಎಸ್.ಡಿ ಅವರ ಸಹ ನಿರ್ಮಾಣವಿರುವ ‘ಮೂರ್ಕಲ್ ಎಸ್ಟೇಟ್‘ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಚಿತ್ರದ ಹಾಡುಗಳು ಈಗಾಗಲ್ಲೇ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ.

ಪ್ರಮೋದ್ ಕುಮಾರ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರವಿಚಂದ್ರನ್ ಹಾಗೂ ಫಣೀಶ್ ಅವರ ಜೊತೆ ಕೆಲಸ ಮಾಡಿದ ಅನುಭವ ಪ್ರಮೋದ್ ಕುಮಾರ್ ಅವರಿಗಿದೆ. ‘ಲೂಸ್ ಕಲೆಕ್ಷನ್‘ ಖ್ಯಾತಿಯ ಸುದ್ದು ರಾಯ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರಾಖಿ ಛಾಯಾಗ್ರಹಣ ಹಾಗೂ ಮರಿಸ್ವಾಮಿ ಅವರ ಸಂಕಲನ ಈ ಚಿತ್ರಕ್ಕಿದೆ.  ಚಿತ್ರಕ್ಕೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ ಚಿತ್ರಕ್ಕೆ ೩೫ದಿನಗಳ ಚಿತ್ರೀಕರಣ ನಡೆದಿದೆ. ಪ್ರವೀಣ್ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ಪ್ರಕೃತಿ(ಡೇಸ್ ಆಫ಼್ ಬೋರಾಪುರ) ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸದ್ಯದಲ್ಲೇ ತೆರೆಗೆ ಮೂರ್ಕಲ್ ಎಸ್ಟೇಟ್ - Chitratara.com
Copyright 2009 chitratara.com Reproduction is forbidden unless authorized. All rights reserved.