ಸಾಮಾನ್ಯ ಜನರು ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ
Posted date: 06 Wed, Feb 2019 04:46:30 PM

ಶ್ರೀಮಂತರು ಮಾತ್ರ ವಿಮಾನದಲ್ಲಿ ಪ್ರಯಾಣ ಮಾಡಬಹುದೆಂಬ ಪ್ರತೀತಿ ಇದೆ. ನಿಜ ಎನ್ನುವಂತೆ  ಸಾಮಾನ್ಯರು ಇದರಲ್ಲಿ ಪ್ರಯಾಣಿಸಬಹುದು. 2007 ರಲ್ಲಿ 10 ಕಾರುಗಳೊಂದಿಗೆ ಪ್ರಾರಂಭವಾದ ಎಲ್.ವಿ.ಟ್ರಾವಲ್ಸ್ ಇಂದು 40 ಟೆಕ್ಕಿ ಕಂಪೆನಿಗಳಿಗೆ ಕಾರುಗಳನ್ನು ಸರಬರಾಜು ಮಾಡುತ್ತಾ 1800 ವಾಹನಗಳನ್ನು ಹೊಂದಿದೆ.  ಇದರ ಮಾಲೀಕರಾದ ಪರಮಶಿವಯ್ಯ ಒಮ್ಮೆ ವಿಮಾನ ನಿಲ್ದಾಣದಿಂದ ಮನೆಗೆ ಬರುವ ಸಂದರ್ಭದಲ್ಲಿ  ಚಾಲಕನೊಂದಿಗೆ  ಹಾಗೇ ಸುಮ್ಮನೆ ಚರ್ಚೆ ಮಾಡಿದ್ದಾರೆ. ಆತ ನಮ್ಮಂತವರಿಗೆ  ಏರೋಪ್ಲೇನ್‌ನಲ್ಲಿ ಹೋಗುವುದು ಆಗದ ಕೆಲಸವೆಂದು ಖೇದ ವ್ಯಕ್ತಪಡಿಸಿದ್ದಾನೆ.  ಇದನ್ನು ಗಂಭೀರವಾಗಿ  ತೆಗೆದುಕೊಂಡು ಇಂತಹವರಿಗಂತಲೇ  ಕಡಿಮೆ ದರದಲ್ಲಿ  ವಿಮಾನ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲು ಚಿಂತಿಸಿದ್ದಾರೆ.
ಅದರಂತೆ  ವಿದೇಶಕ್ಕೆ  ಭೇಟಿ ನೀಡಿದಾಗ ಅಲ್ಲಿನವರು ನಾವು ಇಂಡಿಯಾದಿಂದ ಬಂದವೆಂದು  ಪರಿಚಯಿಸಿಕೊಂಡರೆ, ದೆಹಲಿ, ಚೆನ್ನೈ, ಬಾಂಬೆ ಹೆಸರನ್ನು ಸೂಚಿಸುತ್ತಾರೆ.  ಇದರಿಂದ ರೋಷಗೊಂಡು ಕರ್ನಾಟಕ, ಬೆಂಗಳೂರು  ಹೇಳುವಂತೆ ಮಾಡಲು ಪ್ರಪಂಚದಾದ್ಯಂತ ೧೪ ಶಾಖೆಗಳನ್ನು  ತೆರೆದು  ರಾಜ್ಯದ ಬಗ್ಗೆ ಗಮನ ಸೆಳೆಯುವಂತೆ ಮಾಡುವಲ್ಲಿ ಸಪಲರಾಗಿದ್ದಾರೆ.  ಇದೆಲ್ಲಾ ಬೆಳವಣಿಗೆಯಿಂದ ಜನರಿಗೆ ಸುಲಭವಾಗಿ ಮಾಹಿತಿ ಸಿಗುವಂತೆ ಆಪ್ ಶುರು ಮಾಡಿದ್ದಾರೆ.  ಸದರಿ ಆಪ್‌ನ್ನು ಚಂದನವನದ ತಾರೆಯರಾದ ವಿಜಯ್‌ರಾಘವೇಂದ್ರ, ಸೋನುಗೌಡ ಚಾಲನೆ ನೀಡಿ ಶುಭ ಹಾರೈಸಿದರು. ಹೆಚ್ಚಿನ ವಿವರಗಳಿಗೆ 
www.lvtravels.com ನ್ನು  ನೋಡಬಹುದು.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಾಮಾನ್ಯ ಜನರು ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ - Chitratara.com
Copyright 2009 chitratara.com Reproduction is forbidden unless authorized. All rights reserved.