ಸಿನೆಮಾ ಕಪ್ಪು ಚಿಪ್ಪಾಗಿದ್ದೇಕೆ? ಬಾಗ ೧
Posted date: 11 Tue, Sep 2018 07:54:10 AM
ಯಾರು ticket ಬೇಕು ಕೊಡಿಸಿ ಅಂತ ಕೇಳಲಿಲ್ಲ. Stadium ನಲ್ಲಿ ಯಾವ ಉಚಿತ ticket ಕೊಟ್ಟ ಸ್ಟ್ಯಾಂಡ್ ಕೂಡ fill ಆಗಲಿಲ್ಲ. ಯಾವ paper ನಲ್ಲೂ (official sponsor ಹೊರತುಪಡಿಸಿ) ಸುದ್ದಿಯಾಗಲಿಲ್ಲ. ವ್ಯವಸ್ಥಾಪಕರು ದುಡ್ಡು ಮಾಡಿರಬಹುದು, ಆದರೆ ಕನ್ನಡ ಚಲನಚಿತ್ರ ಕಪ್ಪಿನ ಎರಡನೇ ಆವೃತ್ತಿ ಕನ್ನಡ ಸಿನೆಮಾ ಪ್ರೇಕ್ಷಕನಿಗೆ ಈ ವರ್ಷ ಇದುವರೆಗೂ ಬಂದು ಹೋದ 150 flop ಸಿನೆಮಾಗಳಲ್ಲಿ ಒಂದು. 

ಆಟದಲ್ಲಿ ಮೀನುಗದ ನಕ್ಷತ್ರಗಳು

ಕನ್ನಡ ಚಿತ್ರರಂಗದ ಬಹುತೇಕ ಅತಿರಥ ಮಹಾರಥ ನಟರ ಉಪಸ್ಥಿತರಿದ್ದರು, ಕನ್ನಡ ಚಲನಚಿತ್ರ ಕಪ್ನ ಎರಡನೇ ಆವೃತ್ತಿ ಕಂಡಿದ್ದು ದೊಡ್ಡ ಸೋಲು! ಶಿವರಾಜ್ಕುಮಾರ್, ಪುನೀತ್, ಸುದೀಪ್, ಯಶ್, ಉಪೇಂದ್ರ, ಗಣೇಶ್ ರಂತ ದೊಡ್ಡ ತಾರಾ ಬಳಗವೇ ಪಂದ್ಯಗಳಲ್ಲಿ ಆಡಿದರು, ಚಿನ್ನಸ್ವಾಮಿ ಕ್ರೀಡಾಂಗಣದ ಕಾಲು ಭಾಗದಷ್ಟು ಪ್ರೇಕ್ಷಕರು ತುಂಬಲಿಲ್ಲ. ಫಿಲ್ಮ್ ಹಿಟ್ Theatre ಖಾಲಿ ಅನ್ನೊ ಗಾದೆ ತರ. ಇದಲ್ಲದೆ, ನಿವೃತ್ತ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಟುಗಳಾದ ಆಡಮ್ ಗಿಲ್ಕ್ರಿಸ್ಟ್, ದಿಲ್ಶಾನ್ ಸಹ ಕೈ ಜೋಡಿಸಿದರಿಂದ, ಪಂದ್ಯಗಳ ನೀರೀಕ್ಷೆ ಹೆಚ್ಚಾಗಿ, ಪಂದ್ಯದ ಟಿಕೆಟ್ ಗಳು ನೀರೀಕ್ಷೆಗೂ ಮೀರಿ ಬಿಕರಿ ಆಗಬೇಕಿತ್ತು. 

ಆದರೆ ಆಗಬೇಕಿದ್ದು ಮಾತ್ರ ಆಗಿತ್ತು. ಪಂದ್ಯದ ಪ್ರಸಾರದ ಹಕ್ಕುಗಳು ಮಾರಾಟವಾಗಿತ್ತು. ಮಾಡಬೇಕಿದ್ದವರು ದುಡ್ಡು ಮಾಡಿ ಆಗಿತ್ತು. 

ಎಷ್ಟರ ಮಟ್ಟಿಗೆ ಸದ್ದು ಮಾಡಿತ್ತು KCC online ನಲ್ಲಿ ಅಂದರೆ, ತಿಕೆಟ್ಗಳು ಕಳ್ಳ ಮರತವಾಗಬೇಕಿತ್ತು, ಸಿನವೀಯ ರೀತಿಯಲ್ಲಿ houseful ಆಗಬೇಕಾಗಿತ್ತು. ಇನ್ನೇನು ಪಂದ್ಯ ದೊಡ್ಡ ಯಶಸ್ಸು ಕಾಣಲಿದೆ ಎಂಬ ಆಸೆಗೆ ಪ್ರೇಕ್ಷರು ಕೊನೆಗೂ ತಣ್ಣೀರು ಎರಚಿದರು. ಒಟ್ಟಾರೆ ಪಂದ್ಯ ವೀಕ್ಷಿಸಿದ್ದು ಕೇವಲ ಮೂರು ಸಾವಿರ ಚಿಲ್ಲರೆ ಪ್ರೇಕ್ಷಕರು ಮಾತ್ರ. ಕಾರಣ? ದರ್ಶನ್ ಗು ಹೆಚ್ಚಿನ ಕಾರಣ ಇದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಿನೆಮಾ ಕಪ್ಪು ಚಿಪ್ಪಾಗಿದ್ದೇಕೆ? ಬಾಗ ೧ - Chitratara.com
Copyright 2009 chitratara.com Reproduction is forbidden unless authorized. All rights reserved.