ಸೆನ್ಸಾರ್ ಅಂಗಳದಲ್ಲಿ``ಬ್ಯಾಕ್ ಬೆಂಚರ್ಸ್``!
Posted date: 29 Sat, Jun 2024 02:36:50 PM
ಭಿನ್ನ ಕಂಟೆಂಟಿನ ಮನ್ಸೂಚನೆಯೊಂದಿಗೆ ಕ್ರೇಜ್ ಹುಟ್ಟುಹಾಕಿರುವ ಚಿತ್ರ `ಬ್ಯಾಕ್ ಬೆಂಚರ್ಸ್’. ಈಗಾಗಲೇ ಟೀಸರ್ ಮೂಲಕ ಈ ಚಿತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಕಾಲೇಜು ಕೇಂದ್ರಿತ ಕಥೆ ಮತ್ತು ಬೇರೆ ಹೊಸತನದ ನಿರೂಪಣೆಯ ಸುಳಿವಿನೊಂದಿಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನೂ "ಬ್ಯಾಕ್ ಬೆಂಚರ್ಸ್" ಆಕರ್ಷಿಸಿದ್ದಾರೆ. ಹೀಗೆ ತಾನೇತಾನಾಗಿ ಎಲ್ಲರನ್ನು ಆವರಿಸಿಕೊಂಡಿರುವ ಈ ಚಿತ್ರ ಇದೇ ಜುಲೈ 19ರಂದು ರಾಜ್ಯಾದ್ಯಂತ ತೆರೆಗಾಣಲಿದೆ.  ಆರಂಭಿಕ ಹೆಜ್ಜೆಯಲ್ಲಿಯೇ ಸಕಾರಾತ್ಮಕ ವಾತಾವರಣ ಸೃಷ್ಟಿಸಿಕೊಂಡಿರುವ ಈ ಸಿನಿಮಾ ಈಗ ಸೆನ್ಸಾರ್ ಅಂಗಳ ತಲುಪಿಕೊಂಡಿದೆ.
 
ಇದು ರಾಜಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ನಿರ್ಮಾಪಕರಾಗಿ, ನಿರ್ದೇಶಕರಾಗಿ ಪ್ರೇಕ್ಷಕರ ನಾಡಿಮಿಡಿತವನ್ನು ಅರಿತಿರುವವರು ರಾಜಶೇಖರ್. ಅನುಭವವನ್ನೆಲ್ಲ ಒಟ್ಟುಗೂಡಿಸಿಕೊಂಡು, ಹೊಸಬರ ತಂಡವನ್ನಿಟ್ಟುಕೊಂಡು ಈ ರಾಜಶೇಖರ್ ಈ ಚಿತ್ರವನ್ನು ರೂಪಿಸಿದ್ದಾರೆ. ಸಾಮಾನ್ಯವಾಗಿ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಲು ಬಹುತೇಕರು ಹಿಂದೇಟು ಹಾಕುತ್ತಾರೆ.  ರಾಜಶೇಖರ್ ಅವರು ಸಂಪೂರ್ಣವಾಗಿ ಹೊಸಬರ ತಂಡದೊಂದಿಗೆ ಈ ಚಿತ್ರವನ್ನು ತಯಾರಿಸಿದ್ದಾರೆಂದರೆ ಅಚ್ಚರಿ ಮೂಡದಿರುವುದಿಲ್ಲ. ಹೊಸಬರೇ ಸೇರಿರುವುದರಿಂದ ಇಲ್ಲಿ ಹೊಸತನದ ಛಾಯೆಯಿದೆ. ಅದರ ಘಮವೀಗ ಟೀಸರ್ ಮೂಲಕ ಪ್ರೇಕ್ಷಕರನ್ನು ತಲುಪಿಕೊಂಡಿದೆ.
 
ಇದರ ಭಾಗವಾಗಿರುವ ಯುವ ಪಡೆ ಭಿನ್ನ ಶೈಲಿಯಲ್ಲಿಯೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಈಗ "ಬ್ಯಾಕ್ ಬೆಂಚರ್ಸ್" ಹವಾ ವ್ಯಾಪಿಸಿಕೊಂಡಿದೆ. ಇದು ನಾಯಕ ನಾಯಕಿಯರಾಗಿರುವವರು, ಇತರೇ ಪಾತ್ರಗಳನ್ನು ನಿರ್ವಹಿಸಿದವರು ಸೇರಿದಂತೆ ಒಂದಿಡೀ ತಂಡ ಹೊಸಾ ಶೈಲಿಯಯಲ್ಲಿ ಪ್ರೇಕ್ಷಕರನ್ನು ತಲುಪಿಕೊಳ್ಳುತ್ತಿದೆ. ನಿರ್ದೇಶಕ ರಾಜಶೇಖರ್ ಸ್ಕ್ರಿಫ್ಟ್ ವರ್ಕ್ ಸೇರಿದಂತೆ ಎಲ್ಲದರಲ್ಲಿಯೂ ಈ ಹುಡುಗ ಹುಡುಗಿಯರನ್ನು ಸೇರಿಸಿಕೊಂಡಿದ್ದಾರೆ. ಅದರ ಫಲವಾಗಿಯೇ ಈ ಕಾಲೇಜು ಸ್ಟೋರಿ ತಾಜಾ ಅನುಭೂತಿಯೊಂದಿಗೆ ಸೆಳೆದುಕೊಂಡಿದೆ. 
 
ಪಿಪಿ ಪ್ರೊಡಕ್ಷನ್ಸ್ ಅಡಿಯಲ್ಲಿ ಖುದ್ದು ರಾಜಶೇಖರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಗಣವಿದೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕಿದೆ. ಇದೀಗ ಸೆನ್ಸಾರ್ ಅಂಗಳ ತಲುಪಿರುವ "ಬ್ಯಾಕ್ ಬೆಂಚರ್ಸ್" ಮತ್ತಷ್ಟು ವೇಗದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed