ಸೌಂದರ್ಯ ಪ್ರಿಯರಿಗೊಂದು ಸುವರ್ಣವಕಾಶ
Posted date: 08 Fri, Mar 2019 09:47:02 AM

 ಯಾವುದೇ ಮನುಷ್ಯನು ತನಗೆ ವಯಸ್ಸಾಗುತ್ತಿದೆ ಅನಿಸುವುದಿಲ್ಲ. ಇದನ್ನು ಕಾಪಾಡಿಕೊಳ್ಳುವುದಕ್ಕಾಗಿ  ಹಲವು  ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ. ಅಂತಹುದೆ ಚಿಕಿತ್ಸೆ ನೀಡುವ ಡಾ.ಕರಿಷ್ಮಾ ಏಸ್ಥೆಟಿಕ್ಸ್  ಕ್ಲಿನಿಕ್  ಹೆಚ್‌ಎಎಲ್ 2ನೇ ಹಂತದಲ್ಲಿ ಪ್ರಾರಂಭಗೊಂಡಿತು.  ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್  ಉದ್ಗಾಟನೆ ಮಾಡಿದರು. ಅವರು ಮಾತನಾಡುತ್ತಾ   ಇದನ್ನು ಕ್ಲಿನಿಕ್ ಎನ್ನಲು ಆಗದೆ ಹಾಸ್ಪಟಲ್ ಅಂತ ಕರೆಯಬಹುದು. ಈಗಿನ ಉಪಕರಣಗಳನ್ನು ಹೊಂದಿದ್ದು  ಸುಸಜ್ಜಿತವಾಗಿ ಮೂಡಿಬಂದಿದೆ.  ಎಲ್ಲರು ವಯಸ್ಸಾಯ್ತು ಅಂತ ಹೇಳಲು ಇಷ್ಟಪಡುವುದಿಲ್ಲ.  ನಾವು ಹಾಗೇ ಇರಬೇಕೆಂದು ಬಯುಸುತ್ತಾರೆ.  ಇಂತಹ ಜನರಿಗೆ ಅವಶ್ಯವಾಗಲೆಂದೆ ಇದು  ತೆರೆದಿದೆ. ಪ್ಲಾಸ್ಟಿಕ್ ಸರ್ಜರಿ ಮೂಲಕ ಮುಖವನ್ನು ಬದಲು ಮಾಡುವ ಸೌಲಭ್ಯವಿದೆ.  ನಟಿ ಶ್ರೀದೇವಿ ಮೂಗು ಆಪರೇಶನ್ ಮಾಡಿ ತನ್ನ ಚೆಂದವನ್ನು ಹೆಚ್ಚಿಸಿಕೊಂಡಿದ್ದು ತಿಳಿದಿರುವ ವಿಷಯವಾಗಿದೆ.  ಅಲ್ಲದೆ ನಮ್ಮ ಕ್ಷೇತ್ರದಲ್ಲಿ ಇಂತಹದೊಂದು  ಕೇಂದ್ರ ತೆರೆದಿರುವುದು ಖುಷಿ ತಂದಿದೆ. ನಮ್ಮಗಳ ಬೆಂಬಲ ಯಾವಗಲೂ ಇರುತ್ತದೆ.  ಜನರಿಗೆ ತಿಳಿಯಲು ಪ್ರಚಾರದ ಅವಶ್ಯಕತೆ ಬೇಕೆಂದು  ಶುಭ ಹಾರೈಸಿದರು.

ಏಸ್ಥಟಿಕ್ಸ್‌ಗೆ ಸಂಬಂದಿಸಿದಂತೆ ಎಲ್ಲಾ ಕೋರ್ಸ್‌ಗಳನ್ನು ಮುಗಿಸಿ, ವಿದೇಶದಲ್ಲಿರುವ  ಕೇಂದ್ರಗಳನ್ನು ನೋಡಿ, ನಮ್ಮಲ್ಲಿ ಯಾಕೆ ತೆರೆಯಬಾರದೆಂದು  ಯೋಚನೆ ಮಾಡಿದ್ದೆ,  ಇಲ್ಲಿಯ ತನಕ ಬಂದಿದೆ.  ಸೌಂದರ್ಯಪ್ರಿಯರು ಅಂದ,ಚೆಂದ ಎಲ್ಲವನ್ನು ಒಂದು  ಸೂರಿನಡಿ ಬಳಸಿಕೊಳ್ಳಲು ನಮ್ಮಲ್ಲಿಗೆ   ಭೇಟಿ ನೀಡಬಹುದು.  ಮುಖ್ಯವಾಗಿ  ಪ್ಲಾಸ್ಟಿಕ್ ಅಂಡ್ ಕಾಸ್‌ಮೆಟಿಕ್ ಸರ್ಜರಿ,  ಕಾಸ್‌ಮೆಟಿಕ್ ಡರ್‌ಮೋಟಲಜಿ ಹಾಗೂ ಕಾಸ್‌ಮೆಟಿಕ್ ಡೆಂಟಿಸ್ಟ್ರೀ ಸೇವೆಗಳು ಲಭ್ಯವಿದೆ. ಅಮ್ಮ ಸುನಂದಕಾಗೂಡು  ನೆನಪಿಗಾಗಿ ಕ್ಲಿನಿಕ್‌ನ್ನು  ತೆಗೆಯಲಾಗಿದೆ ಎಂದು ವೈದ್ಯೆ ಕರಿಷ್ಮಾಕಾಗೋಡು ತಿಳಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಶಾಸಕ ಕಾಗೋಡುತಿಮ್ಮಪ್ಪ, ಡಾ.ಸುದೀಂದ್ರ, ಡಾ.ಉಜ್ವಲಾಜಗದಾಲೆ, ರಾಜಣ್ಣನ ಮಗ ಚಿತ್ರದ ನಾಯಕ ಹರೀಶ್, ನಾಯಕಿ ಅಕ್ಷತಾಶ್ರೀಧರ್‌ಶಾಸ್ತ್ರೀ  ಹಾಜರಿದ್ದರು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೌಂದರ್ಯ ಪ್ರಿಯರಿಗೊಂದು ಸುವರ್ಣವಕಾಶ - Chitratara.com
Copyright 2009 chitratara.com Reproduction is forbidden unless authorized. All rights reserved.