ಹಿನ್ನಲೆ ಸಂಗೀತದಲ್ಲಿ ಕಿರಣ್ಬೇಡಿ
Posted date: 14/January/2009

ಕನ್ನಡದಲ್ಲಿ ಎಷ್ಟೇ ಅದ್ದೂರಿ ಚಿತ್ರಗಳು ನಿರ್ಮಾಣವಾದರೂ `ಕೋಟಿ ನಿರ್ಮಾಪಕ` ಎಂಬ ಹೆಸರು ರಾಮು ಅವರಿಗೆ ಶಾಶ್ವತವಾಗಿದೆ. ದಶಕದ ಹಿಂದೆ ಕನ್ನಡ ಚಿತ್ರಗಳ ಮೇಲೆ ಕೋಟಿ ರೂಪಾಯಿ ಹೂಡಿದ ಧೀಮಂತ ನಿರ್ಮಾಪಕ ಇವರು. ಪ್ರಸ್ತುತ ರಾಮು ಅವರ ನಿರ್ಮಾಣದಲ್ಲಿ ಅವರ ಮಡದಿ ಮಾಲಾಶ್ರೀ ಬಹಳ ವರ್ಷಗಳ ನಂತರ ಅಭಿನಯಿಸಿರುವ `ಕಿರಣ್‌ಬೇಡಿ` ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಾರಥ್ಯದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ಪ್ರಸಾದ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ನಡೆಯುತ್ತಿದೆ.

   ಭಾರತದ ಮೊದಲ ಐ.ಪಿ.ಎಸ್ ಅಧಿಕಾರಿ ಕಿರಣ್‌ಬೇಡಿ ಅವರ ವೃತ್ತಿ ಬದುಕಿನಿಂದ ಪ್ರೇರಿತನಾದ ನಾನು ಈ ಚಿತ್ರವನ್ನು ನಿರ್ಮಿಸಲು ಮುಂದಾದೆ ಎಂದು ರಾಮು ತಿಳಿಸಿದ್ದಾರೆ. ಕಿರಣ್‌ಬೇಡಿ ಪಾತ್ರವನ್ನು ನಿರ್ವಹಿಸುವುದ್ದಕ್ಕಾಗಿ ಮಾಲಾಶ್ರೀ ಪೂರ್ವದಲ್ಲಿ ಸಾಕಷ್ಟು  ತಯಾರಿ ನಡೆಸಿ ಸಾಹಸ ಸನ್ನಿವೇಶಗಳಲ್ಲಿ ನೈಜವಾಗಿ ಪಾಲ್ಗೊಂಡಿದ್ದಾರೆ. ರಾಮು ಸಂಸ್ಥೆಯ ೨೫ನೇ ಚಿತ್ರವಾಗಿರುವ `ಕಿರಣ್‌ಬೇಡಿ`ಯನ್ನು ಓಂಪ್ರಕಾಶ್‌ರಾವ್ ನಿರ್ದೇಶಿಸಿದ್ದಾರೆ. ಕೆ.ಎಂ.ವಿಷ್ಣುವರ್ಧನ್ ಛಾಯಾಗ್ರಹಣ, ರಂಗನಾಥ್ ಸಂಭಾಷಣೆ, ಹಂಸಲೇಖ ಸಾಹಿತ್ಯ_ಸಂಗೀತ, ಪಳನಿರಾಜ್ ಸಾಹಸ, ಪ್ರದೀಪ್‌ಅಂಟೋನಿ ನೃತ್ಯ, ಸರಿಗಮವಿಜಿ ಸಹನಿರ್ದೇಶನ, ಇಸ್ಮಾಯಿಲ್, ಕುಮಾರ್ ಕಲೆ, ಭರತ್, ಸೋಮು ನಿರ್ಮಾಣನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಮಾಲಾಶ್ರೀ, ಶ್ರೀನಿವಾಸಮೂರ್ತಿ, ಆಶೀಷ್‌ವಿದ್ಯಾರ್ಥಿ, ರಂಗಾಯಣರಘು, ಸಾಧುಕೋಕಿಲಾ, ಬುಲೆಟ್‌ಪ್ರಕಾಶ್, ಜಿ.ವಿ.ಮಹೇಶ್, ಧರ್ಮ ಮುಂತಾದವರಿದ್ದಾರೆ. ಫೆಬ್ರವರಿಯಲ್ಲಿ ಕಿರಣ್‌ಬೇಡಿಯನ್ನು ತೆರೆಯಮೇಲೆ ತರಲು ರಾಮು ಸಿದ್ದತೆ ನಡೆಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಿನ್ನಲೆ ಸಂಗೀತದಲ್ಲಿ ಕಿರಣ್ಬೇಡಿ - Chitratara.com
Copyright 2009 chitratara.com Reproduction is forbidden unless authorized. All rights reserved.