ರೌಡಿಯೊಬ್ಬ ಮಗುವೊಂದರ ಕಾರಣದಿಂದ ಹೃದಯವಂತನಾದ ಕಥೆಯೇ ಈ ವಾರ ತೆರೆಕಂಡಿರುವ ಹಿರಣ್ಯ ಚಿತ್ರದ ಒನ್ ಲೈನ್ ಸ್ಟೋರಿ. ರಾಣ(ರಾಜವರ್ಧನ್) ಒಬ್ಬ ರೌಡಿ, ಚಿಕ್ಕ ಮಗುವನ್ನು ಕೊಲ್ಲುವ ಡೀಲ್ ಪಡೆದ ಆತ ಮುಂದೆ ಅದೇ ಮಗುವನ್ನು ಉಳಿಸಲು ವಿಲನ್ ಗಳ ವಿರುದ್ದ ಹೋರಾಡುವ ಕಥೆಯನ್ನು ನಿರ್ದೇಶಕ ಪ್ರವೀಣ್ ಅವ್ಯುಕ್ತ್ ತೆರೆಮೇಲೆ ನಿರೂಪಿಸಿದ್ದಾರೆ, ತಮ್ಮ ಪ್ರಯತ್ನ ವಿಫಲವಾಧಾಗ ಆ ಮಗುವನ್ನ ಕೊಲ್ಲೋ ಕೆಲಸವನ್ನು ರಾಣ (ರಾಜವರ್ಧನ್) ಎಂಬ ರೌಡಿಗೆ ವಿಲನ್ ಗಳು ಒಪ್ಪಿಸುತ್ತಾರೆ.
ಆದರೆ ರಾಣಾನ ಮನಸ್ಸು ಆ ಚಿಕ್ಕ ಮಗುವನ್ನು ಕೊಲ್ಲಲು ಒಪ್ಪಲ್ಲ. ಅದನ್ನು ಕಿಡ್ನಾಪ್ ಮಾಡಿ ತಂದು ಕೊಡುವುದಾಗಿ ಒಪ್ಪಿಕೊಳ್ಳುತ್ತಾನೆ. ಹಾಗೆ ಕಿಡ್ನಾಪ್ ಮಾಡಿಕೊಂಡು ಬರುವಾಗ, ನಡೆದ ಅಪಘಾತವೊಂದು ಆತನ ಆಯೋಚನೆ ಮತ್ತು ಜೀವನದ ದಿಕ್ಕನ್ನೇ ಬದಲಿಸುತ್ತದೆ. ನಂತರ ಆತ ಅದೇ ಮಗುವನ್ನು ದುಷ್ಟರಿಂದ ಕಾಪಾಡಲು ಮುಂದಾಗುತ್ತಾನೆ. ಆ ಮಗುವನ್ನು ಅದರ ಹೆತ್ತ ತಾಯಿಗೆ ಒಪ್ಪಿಸಲು ಮುಂದಾಗುತ್ತಾನೆ. ಈ ಹಂತದಲ್ಲಿ ಆತ ಏನೇನೆಲ್ಲಾ ಅಡ್ಡಿ, ಆತಂಕ ಎದುರಿಸಬೇಕಾಯ್ತು ಎಂಬುದನ್ನು ಈ ಚಿತ್ರದಲ್ಲಿ ರೋಚಕ ತಿರುವುಗಳ ಜತೆ ನಿರ್ದೇಶಕರು ಹೇಳೋ ಪ್ರಯತ್ನ ಮಾಡಿದ್ದಾರೆ.
ಚಿತ್ರಕಥೆಯಲ್ಲಿ ಸಾಕಷ್ಟು ತಿರುವುಗಳನ್ನು ಇಟ್ಟುಕೊಂಡು ನಿರ್ದೇಶಕ ಪ್ರವೀಣ್ ಅವ್ಯುಕ್ತ. ಹಿರಣ್ಯ ಚಿತ್ರವನ್ನು ನಿರೂಪಿಸಿದ್ದಾರೆ. ಆಗಾಗ ಚಿತ್ರದಲ್ಲಿ ಎದುರಾಗೋ ತಿರುವುಗಳು ಚಿತ್ರದ ಬಗ್ಗೆ , ಕುತೂಹಲ ಹೆಚ್ಚಿಸುತ್ತ ಸಾಗುತ್ತವೆ. ಚಿತ್ರದಲ್ಲಿ ಹೈಲೈಟ್ ಆಗುವುದೇ ಸಾಹಸ ದೃಶ್ಯಗಳು.
ಮಗವನ್ನು ಕಾಪಾಡಲು ನಾಯಕ ಹಲವು ರೀತಿಯಲ್ಲಿ ಹೊಡೆದಾಡುತ್ತಾನೆ. ಆಗೆಲ್ಲಾ ಆತ ಮಗುವನ್ನು ತನ್ನ ಬೆನ್ನಿಗೆ ಕಟ್ಟೊಕೊಂಡು ಹೊಡೆದಾಡುವುದು ನೈಜತೆಗೆ ದೂರವಾದುದು. ಇಂಥದನ್ನೆಲ್ಲಾ ಸ್ವಲ್ಪ ಅವಾಯ್ಡ್ ಮಾಡಿದ್ದರೆ ಚಿತ್ರ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು. ಇಡೀ ಕಥೆಯಲ್ಲಿ ನಾಯಕ ರಾಜವರ್ಧನ್ ಕಣ್ಣು ಮತ್ತು ಕೈಗಳಲ್ಲೇ ಹೆಚ್ಚು ಮಾತಾಡಿದ್ದಾರೆ. ಕಥೆಯಲ್ಲಿ ಹೀರೋ ಜತೆ ಡ್ಯುಯೆಟ್ ಹಾಡೋ ನಾಯಕಿ ಇಲ್ಲ. ಅವರು ಚಿತ್ರದುದ್ದಕ್ಕೂ ಗಂಭಿರವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ದಿವ್ಯ ಸುರೇಶ್ ಪಾತ್ರ ಚಿಕ್ಕದಾದರೂ ಹಾಡು ಮತ್ತು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಪಡ್ಡೆಗಳಿಗೆ ಖುಷಿ ಕೊಡುತ್ತಾರೆ. ದಿಲೀಪ್ ಶೆಟ್ಟಿ ತಮ್ಮ ಅಭಿನಯದಿಂದಲೇ ಗಮನ ಸೆಳೆಯುತ್ತಾರೆ.
ಆ್ಯಕ್ಷನ್ ಪ್ರಿಯರಿಗೆ ಹಿರಣ್ಯ ಖಂಡಿತ ಮಜ ಕೊಡುತ್ತದೆ ಸಂಗೀತ ಚಿತ್ರಕಥೆಯ ಓಟಕ್ಕೆ ಪೂರಕವಾಗಿದೆ. ಜತೆಗೆ ಕ್ಯಾಮೆಕಾ ವರ್ಕ್ ಕೂಡ ಚೆನ್ನಾಗಿದೆ.