ಹೊಸ ಅವಿಷ್ಕಾರದೊಂದಿಗೆ 'ನಮ್ಮ ಪ್ಲಿಕ್ಸ್'
Posted date: 03 Thu, Sep 2020 09:20:47 AM

"Anviton Entertainment Corporation" ಅಡಿಯಲ್ಲಿ ಬಿಡುಗಡೆಯಾಗಿದ್ದ ನಮ್ಮ ಪ್ಲಿಕ್ಸ್ (Namma Flix) ಕರ್ನಾಟಕದ ಮೊಟ್ಟ ಮೊದಲ ಡಿಜಿಟಲ್ "ಒ.ಟಿ.ಟಿ" ಪ್ಲಾಟ್ಫಾರ್ಮ್ ಎಂಬ ಹೆಮ್ಮೆಗೆ ಒಳಪಟ್ಟಿದೆ. ನಮ್ಮ ಫ್ಲಿಕ್ಸ್ ಆಪನ್ನು ಎಲ್ಲಾ ಕನ್ನಡಿಗರು ಮೆಚ್ಚಿಕೊಂಡು ಬೆಂಬಲ ನೀಡಿದಕ್ಕೆ , ಸಮಸ್ತ ಕನ್ನಡಿಗರಿಗೆ ನಾವು ಚಿರರುಣಿ. ಇದೀಗ ನಿಮ್ಮ ಬೇಡಿಕೆ ಮೇರೆಗೆ ನಮ್ಮ ಪ್ಲಿಕ್ಸ್ ನೂತನ ಆವಿಷ್ಕಾರದೊಂದಿಗೆ ಹೊಸ ರೂಪುರೇಷೆಗಳನ್ನು ಒಳಗೊಂಡು ನಿಮ್ಮ ಮುಂದೆ ಬಂದಿದೆ . ನಿಮ್ಮ ನೆಚ್ಚಿನ ನಮ್ಮ ಪ್ಲಿಕ್ಸ್ ಈಗ ಆಂಡ್ರಾಯ್ಡ್ ಹಾಗೂ ಆಪಲ್ ಐಫೋನ್ಗಳಲ್ಲು ಲಭ್ಯವಿದೆ.


ನಿಮ್ಮ ನೆಚ್ಚಿನ ನಮ್ಮ ಫ್ಲಿಕ್ಸ್ ನಲ್ಲಿ ಏನೆಲ್ಲಾ ನೂತನ ಆವಿಷ್ಕಾರಗಳನ್ನು ಹೊಂದಿದೆ ಎಂದರೆ -
1. ಅಡಾಪ್ಟಿವ್ ಬಿಟ್ ಸ್ತ್ರೀಮಿಂಗ್.
2. ಹೈಸ್ಪೀಡ್ ಬಿಟ್ ಸ್ಟ್ರೀಮಿಂಗ್.
3.ಕ್ರೋಮ್ ಕ್ಯಾಸ್ಟ್ ಆಯ್ಕೆಯನ್ನು ಒಳಗೊಂಡಿರುತ್ತದೆ ಮತ್ತು ಜೂಮ್ ಆಯ್ಕೆಯನ್ನು ಅಳವಡಿಸಲಾಗಿದೆ.
4. ಮಕ್ಕಳ ಖುಷಿಗೂ ನಾವು ವಿಶೇಷ ಪ್ರಾಧ್ಯಾನ್ಯತೆ ನೀಡಿರುತ್ತೇವೆ ಹಾಗೂ ಒಂದಕ್ಕೂ ಅಧಿಕ ಖಾತೆಯನ್ನು ಹೊಂದಬಹುದು.
5. ನಮ್ಮ ಪ್ಲಿಕ್ಸ್ ನಲ್ಲಿ ಹೊಸ ಚಲನ ಚಿತ್ರಗಳನ್ನು ನೇರವಾಗಿ ಬಿಡುಗಡೆ ಮಾಡಲಾಗುತ್ತದೆ.
6. ನೇರ ಚಲನಚಿತ್ರಗಳಿಗೆ ಆನ್ಲೈನ್ ಮತ್ತು ಆಫ್ಲೈನ್ ಟಿಕೆಟ್ ನೊಂದಿಗೆ ಬಿಡುಗಡೆ ಮಾಡುವ ಆಯ್ಕೆ ಲಭ್ಯವಿರುತ್ತದೆ.
7. ಸ್ಮಾರ್ಟ್ ಸರ್ಚ್ ಆಯ್ಕೆಯನ್ನು ಅಳವಡಿಸಲಾಗಿದೆ.
8. ಅತಿಶೀಘ್ರದಲ್ಲೇ ರೇಡಿಯೋ ಹಾಗು ಲೈವ್ ಟಿವಿಯನ್ನು ನಮ್ಮ ಪ್ಲಿಕ್ಸ್ ನಲ್ಲಿ ವೀಕ್ಷಿಸಬಹುದಾಗಿದೆ.


ನಮ್ಮ ಫ್ಲಿಕ್ಸ್ ಆಪ್ ನಿರ್ಮಾಪಕರಿಗೆ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡಲಾಗಿದೆ.

1. ನಿರ್ಮಾಪಕರು ನಿಮ್ಮ ಚಲನಚಿತ್ರವನ್ನು ನೀವೇ ಅಪ್ಲೋಡ್ ಮಾಡಬಹುದು.
2. ನಿರ್ಮಾಪಕರಿಗೆ ಲೈವ್ ಡ್ಯಾಶ್ಬೋರ್ಡ್ ಅನಾಲಿಟಿಕ್ಸ್ ಲಭ್ಯವಿರುತ್ತದೆ.
3. ನಿರ್ಮಾಪಕರು ನಿಮ್ಮ ಅಸ್ತಿತ್ವದಲ್ಲಿರುವ ಅಥವಾ ಬಿಡುಗಡೆಯಾದ ಚಿತ್ರಗಳನ್ನು ಸ್ಟ್ರಿಮ್ ಮಾಡುವ ಮೂಲಕ ಆದಾಯ ಗಳಿಸಬಹುದಾಗಿದೆ.
4. ಅತ್ಯುತ್ತಮ ಕಿರುಚಿತ್ರಗಳನ್ನು ಸಹ ನಾವು ಸ್ವಾಗತಿಸುತ್ತೇವೆ ಮತ್ತು ಹೊಸ ವೆಬ್ ಸರಣಿಗಳನ್ನು ಸಹ ಅಪ್ಲೋಡ್ ಮಾಡಬಹುದು.
5. ಎಲ್ಲಾ ಚಲನಚಿತ್ರಗಳು, ಕಿರು ಚಲನಚಿತ್ರಗಳು ಹಾಗೂ ವೆಬ್ ಸರಣಿಗಳು ಕನ್ನಡ ಭಾಷೆಯಲ್ಲಿ ಮಾತ್ರ ಇರಬೇಕು.
6. ನಾವು ಬೇರೆ ಭಾಷೆಯ ಡಬ್ಬಿಂಗ್ ಕನ್ನಡ ಚಲನಚಿತ್ರಗಳನ್ನು ಸ್ವೀಕರಿಸುತ್ತೇವೆ.

ಇದೆಲ್ಲಾ ಆಯ್ಕೆಗಳು ಇನ್ನುಮುಂದೆ ನಮ್ಮಪ್ಲಿಕ್ಸ್ ನಲ್ಲಿ ಲಭ್ಯವಿರುತ್ತದೆ, ನೀವು ನಮ್ಮ ಫ್ಲಿಕ್ಸ್ ಆಪನ್ನು ಅಪ್ಡೇಟ್ ಮಾಡಿಲ್ಲ, ಅಂದರೆ ಈ ಕೂಡಲೇ ಅಪ್ಡೇಟ್ ಮಾಡಿ ಹಾಗು ಮನೋರಂಜನೆ ಪಡೆಯಿರಿ.


Android: https://play.google.com/store/apps/details?id=com.perseverance.anvitonmovies

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹೊಸ ಅವಿಷ್ಕಾರದೊಂದಿಗೆ 'ನಮ್ಮ ಪ್ಲಿಕ್ಸ್' - Chitratara.com
Copyright 2009 chitratara.com Reproduction is forbidden unless authorized. All rights reserved.