ಡಾಲಿ ಧನಂಜಯ ಅವರಿಂದ ಅನಾವರಣವಾಯಿತು``ದೈವ``ಚಿತ್ರದ ಮೊದಲ ಪೋಸ್ಟರ್
Posted date: 04 Tue, Apr 2023 12:29:01 PM
ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಹೆಚ್ಚಾಗಿ ಬರುತ್ತಿದೆ. ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗುತ್ತಿದೆ. ಅಂತಹ ಉತ್ತಮ ಕಂಟೆಂಟ್ ವುಳ್ಳ "ದೈವ" ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಇತ್ತೀಚೆಗೆ ಈ ಚಿತ್ರದ ಮೊದಲ ಪೋಸ್ಟರ್ ಖ್ಯಾತ ನಟ ಡಾಲಿ ಧನಂಜಯ ಅವರಿಂದ ಅನಾವರಣವಾಯಿತು. ಪೋಸ್ಟರ್ ಬಿಡುಗಡೆ ಮಾಡಿದ ಡಾಲಿ, ಚಿತ್ರಕ್ಕೆ ಶುಭ ಕೋರಿದರು.

ಕಲ್ಪವೃಕ್ಷ ಕ್ರಿಯೇಷನ್ಸ್ ಲಾಂಛನದಲ್ಲಿ ಜಯಮ್ಮ ಪದ್ಮರಾಜ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಂ.ಜೆ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಮೇ ಎರಡನೇ ವಾರದಲ್ಲಿ ಮಲೆನಾಡ ಸುಂದರ ಸೊಬಗಿನಲ್ಲಿ ಚಿತ್ರೀಕರಣ ನಡೆಯಲಿದೆ. ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆ ಚಿತ್ರತಂಡಕ್ಕಿದೆ. "ದೈವ" ಚಿತ್ರಕ್ಕೆ ಸೀಕ್ರೆಟ್ ಆಫ್ ಬರ್ತ್ ಎಂಬ ಅಡಿಬರಹವಿದೆ. 

ಈಶ್ವರ್ ಮಲ್ನಾಡ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ವಿಜೇತ್ ಮಂಜಯ್ಯ ಸಂಗೀತ ನೀಡುತ್ತಿದ್ದಾರೆ. ರಾಜು ಶಿರಾ ಛಾಯಾಗ್ರಹಣ, ಚಂದ್ರ ಮೌರ್ಯ ಸಹ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. 

ಎಂ.ಜೆ, ಅರುಣ್ ಬಚ್ಚನ್, ಸತೀಶ್, ನೀತು ರಾಯ್ ಮುಂತಾದವರು "ದೈವ" ಚಿತ್ರದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed