ಪವರ್ ಸ್ಟಾರ್ ಹುಟ್ಟುಹಬ್ಬದಂದು ಸೆಟ್ಟೇರಿದ `ಅಪ್ಪು ಅಭಿಮಾನಿ`
Posted date: 18 Sat, Mar 2023 02:45:47 PM
ಪುನೀತ್‌ರಾಜ್‌ಕುಮಾರ್ ನಮ್ಮನ್ನು ಅಗಲಿದರೂ ಅವರ ನೆನಪಿನಲ್ಲಿ ಏನಾದರೂ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಮಾರ್ಚ್`17 ಅಪ್ಪು ಹುಟ್ಟುಹಬ್ಬದಂದು ಗೌರವ ಸೂಚಿಸಲು ಅದ್ದೂರಿ ಚಿತ್ರ `ಕಬ್ಜ` ಬಿಡುಗಡೆಯಾಗುತ್ತಿದೆ. ಇದಲ್ಲದೆ ಕರ್ನಾಟಕ ಸೇರಿದಂತೆ ಹೊರ ರಾಜ್ಯ, ದೇಶಗಳಲ್ಲಿಯೂ ಬರ್ತ್‌ಡೇ ಸಂಭ್ರಮವನ್ನು ಸಡಗರದಿಂದ ಆಚರಿಸಿಕೊಳ್ಳುವುದುಂಟು. ಇದೇ ಸಂದರ್ಭದಲ್ಲಿ ಹೊಸಬರೇ ಸೇರಿಕೊಂಡು `ಅಪ್ಪು ಅಭಿಮಾನಿ` ಎನ್ನುವ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಫಾರ್ ಎವೆರ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ.
 
`ತಾರಕಾಸುರ`ಹಾಗೂ ಬಿಡುಗಡೆಯಾಗಬೇಕಾದ `ಕಾಸಿದ್ರೆ ಕೈಲಾಸ` ಸಿನಿಮಾಗಳಲ್ಲಿ ನಟಿಸಿರುವ ವೈಭವ್ ಈಗ ರವಿ ಅಂತ ಹೆಸರು ಬದಲಾಯಿಸಿಕೊಂಡಿದ್ದು, ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಶೇಖ್‌ಮುನೀರ್‌ಭಾಷ-ಬಾಬುರೆಡ್ಡಿ-ಚಂದ್ರಕಾಂತ್.ಹೆಚ್-ಶಿವಪ್ಪಕುಡ್ಲೂರು ಜಂಟಿಯಾಗಿ ಕೆಐಎಂ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಈ ಪೈಕಿ ಬಾಬುರೆಡ್ಡಿ ನಿರ್ದೇಶನ, ಶೇಖ್‌ಮುನೀರ್‌ಭಾಷ ಕಥೆ ಇರಲಿದೆ. 
 
ಪ್ರಕಾಶ್‌ಶೆಟ್ಟಿ ಪರ್ದೂರು-ಕೋಡಿ.ಜಿ.ಹರೀಶ್ ಸಾಹಿತ್ಯದ ಗೀತೆಗಳಿಗೆ ದಿನೇಶ್‌ಕುಮಾರ್.ಈ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ದೀಪಕ್‌ಕುಮಾರ್.ಜೆ.ಕೆ, ಚಿತ್ರಕಥೆ ಪಾವನಾರೆಡ್ಡಿ, ಸಾಹಸ ಥ್ರಿಲ್ಲರ್‌ಮಂಜು, ನೃತ್ಯ ಮದನ್‌ಹರಿಣಿ-ಧನಂಜಯ್ ನಿರ್ವಹಿಸುತ್ತಿದ್ದಾರೆ. ಉಳಿದಂತೆ ನಾಯಕಿ, ತಾರಗಣದ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಪ್ರಚಾರದ ಮೊದಲ ಹಂತವಾಗಿ ಪೋಸ್ಟರ್‌ನ್ನು ಬಿಡಲಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed