ಮಾತು ಮುಗಿಸಿದ ವೆಂಕಟ
Posted date: 1/January/2009

ಸಂಕಟ ಬಂದಾಗ ಏನೆಲ್ಲಾ ಮಾತನಾಡಬಹುದು. ಅದರಲ್ಲೂ ನಮ್ಮ ವೆಂಕಟನಿಗೆ ಸಂಕಟ ಬಂದಾಗ ಆತ ಯಾವರೀತಿ ಮಾತನಾಡಿರಬಹುದು ಎಂದು ತಿಳಿಯಲು `ವೆಂಕಟ ಇನ್ ಸಂಕಟ` ಚಿತ್ರ ನೋಡಬೇಕು. ನಗೆಯ ಜಾತ್ರೆಯಾಗಿರುವ ಈ ಚಿತ್ರಕ್ಕೆ ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ಪೂರ್ಣವಾಗಿದೆ ಎಂದು ಚಿತ್ರದ ನಾಯಕರೂ ಆಗಿರುವ ನಿರ್ದೇಶಕ ರಮೇಶ್‌ಅರವಿಂದ್ ತಿಳಿಸಿದ್ದಾರೆ.

   `ವೆಂಕಟ ಇನ್ ಸಂಕಟ` ಚಿತ್ರವನ್ನು ನರೇನ್‌ಮಗಲಾನಿ ಅವರು ಸಿನೆಮಾಹೌಸ್ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ.  ರಮೇಶ್‌ಅರವಿಂದ್ ನಿರ್ದೇಶನದ ಈ ಚಿತ್ರಕ್ಕೆ  ರವಿಜೋಷಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಖ್ಯಾತ ರಂಗಭೂಮಿ ಕಲಾವಿದ ದೇವದಾಸ್ ಕಪ್ಪಿಕಾಡ್ ಈ ಚಿತ್ರದಿಂದ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ರಿಕ್ಕಿಕೇಜ್ ಸಂಗೀತ, ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ನಂದ ಸಂಭಾಷಣೆ, ಎ.ಎನ್.ಮೂರ್ತಿ, ರವಿವರ್ಮ ಸಾಹಸ, ಮದನ್ ಹರಿಣಿ ನೃತ್ಯ, ಬಾಲಾಜಿಮನೋಹರ್, ಧನಂಜಯ ಬಾಲಾಜಿ ಸಹನಿರ್ದೇಶನ, ರಮೇಶ್‌ದೇಸಾಯಿ ಕಲೆ, ಟಿ.ಎನ್.ಎಲ್.ಶಾಸ್ತ್ರಿ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಮೇಶ್‌ಅರವಿಂದ್, ಶರ್ಮಿಳಾಮಾಂಡ್ರೆ, ಮೇಘನ ಮುಡಿಯನ್, ಅನುಶಾ, ಮುಖ್ಯಮಂತ್ರಿ ಚಂದ್ರು, ದೇವದಾಸ್ ಕಪ್ಪಿಕಡ್, ಎಂ.ಎಸ್.ಉಮೇಶ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed