ವೀರಂ ಬಾಂಧವ್ಯದ ಕಥೆಯಲ್ಲಿ ಮಚ್ಚುಗಳದ್ದೇ ಕಾರುಬಾರು -3.5/5 ****
Posted date: 08 Sat, Apr 2023 08:58:39 AM
ಸಂಬಂಧ, ಬದುಕು, ಭಾವನೆಗಳ ಸುತ್ತ ನಡೆಯುವ ಕಥೆಯನ್ನು ಆಕ್ಷನ್, ರೌಡಿಸಂ ಹಿನ್ನೆಲೆಯಲ್ಲಿ ಹೇಳುವ ಚಿತ್ರವೇ ವೀರಂ.  ಸಮಯ ಎನ್ನುವುದು ಮನುಷ್ಯನನ್ನು ಯಾವ ಹಂತಕ್ಕೆ ಬೇಕಾದರೂ ತೆಗೆದುಕೊಂಡು ಹೋಗಬಹುದು ಎಂದು ವೀರಂ ಚಿತ್ರದ ಮೂಲಕ  ನಿರ್ದೇಶಕ ಖದರ್ ಕುಮಾರ್ ಅವರು ಹೇಳಿದ್ದಾರೆ. ಅದೊಂದು ಎಪಿಎಂಸಿ ಯಾರ್ಡ್, ಅಲ್ಲಿ  ಮಾರ್ಕೆಟ್ ದೇವಿ(ಬಲ ರಾಜವಾಡಿ)ಯದು ಒಂದು ಗುಂಪಾದರೆ, ಗೋವಿಂದಣ್ಣನದು (ಮೈಕೋ ನಾಗರಾಜï) ಇನ್ನೊಂದು ಬಣ. ನರಸಿಂಹ (ಶ್ರೀನಗರ ಕಿಟ್ಟಿ) ಈತನ ಬಲಗೈ ಬಂಟ, 
 
ಆ ಏರಿಯಾದಲ್ಲಿ ಒಂದು ಸಖೀ ಕುಟುಂಬ,  ಸದಾಶಿವ (ಅಚ್ಯುತ್ ಕುಮಾರ್) ಅವನ ಪತ್ನಿ ಸರಸ್ವತಿ (ಶೃತಿ) ಆಕೆಯ  ತಮ್ಮನೇ ಚಿತ್ರದ ನಾಯಕ ವೀರು (ಪ್ರಜ್ವಲ್ ದೇವರಾಜ್). ಸರಸ್ವತಿ ತನ್ನ ಇಬ್ಬರು ತಮ್ಮಂದಿರನ್ನು ಸ್ವಂತ ಮಕ್ಕಳಂತೆಯೇ ಸಾಕಿ ಬೆಳೆಸಿರುತ್ತಾಳೆ. ಬಾಲ್ಯದಲ್ಲೇ ಗದ್ದಲ ಗಲಾಟೆಗಳಲ್ಲಿ ಗುರುತಿಸಿಕೊಳ್ಳುವ  ನರಸಿಂಹ, ಕೂಲಿಂಗ್ ಗ್ಲಾಸ್ ಗೋವಿಂದನ ಬಂಟನಾಗಿ ಉಳಿಯುತ್ತಾನೆ. ಗೋವಿಂದನ ಸಹವಾಸ ಬೆಳೆಸಿದ ತಮ್ಮನನ್ನು ಸರಸ್ವತಿ ಮನೆಯಿಂದ ಹೊರಗೇ ಇಟ್ಟಿರುತ್ತಾಳೆ. 
 
ಸಾಹಸಸಿಂಹ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾದ ಸರಸ್ವತಿ, ಆಕೆಯ  ತಮ್ಮ ವೀರು ತನ್ನ ಅಕ್ಕನೇ ಬದುಕಿನ ಸರ್ವಸ್ವ ಎಂದುಕೊಂಡಿರುತ್ತಾನೆ. ತನ್ನ ಕೈಮೇಲೆ  ವಿಷ್ಣು ದಾದನ ಅಚ್ಚೆಯನ್ನು ಹಾಕಿಕೊಂಡು ಅಕ್ಕನ ಆಸೆಯಂತೆ ಓದಿ ಒಳ್ಳೆಯ ಕಡೆ ಕೆಲಸ ಪಡೆಯುವ  ಕನಸು  ಕಂಡಿರುತ್ತಾನೆ. ಇಂಟರ್ ವ್ಯೂಗೆಂದು ಬಂದ ದಿನವೇ ವೀರುವನ್ನು ಪೊಲೀಸರು  ಬಂಧಿಸಿ ಕರೆದೊಯ್ಯುತ್ತಾರೆ. 
 ಇನ್ನು ವೀರು  ಕಾಲೇಜಿನಲ್ಲಿರುವಾಗಲೇ ಅಲ್ಲಿ  ವಿದ್ಯಾರ್ಥಿನಿಯಾಗಿದ್ದ  ಧಾತ್ರಿ (ರಚಿತಾ ರಾಮ್)ಯ ಮೊದಲ ನೋಟಕ್ಕೆ  ಮನಸೋಲುತ್ತಾನೆ. ಮುಂದೆ  ಅವರಲ್ಲಿ ಗೆಳೆತನ ಬೆಳೆದು ಪ್ರೀತಿಸುತ್ತಾರೆ. 
 
ಹಳೆ ವೈರಿಗಳ ಗುದ್ದಾಟದ ನಡುವೆ ಮಾರ್ಕೆಟ್ ದೇವಿಯ ಪುತ್ರ ಜೇಡ (ಶಿಷ್ಯ ದೀಪಕ್)ನ  ಹಾವಳಿಯೂ ಹೆಚ್ಚಾಗಿರುತ್ತದೆ. ಆಗಾಗ ವೀರು ಹಾಗೂ  ಜೇಡ ಬೇರೆ ಬೇರೆ ಕಾರಣಕ್ಕೆ ಜಗಳವಾಡುತ್ತ ವೈರತ್ವ ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ. ಒಮ್ಮೆ  ವೀರು ದುಷ್ಟರನ್ನು ಸದೆಬಡಿದು ನೊಂದ ಹೆಣ್ಣುಮಕ್ಕಳ ರಕ್ಷಣೆ ಮಾಡುತ್ತಾನೆ.
 
ಒಮ್ಮೆ  ಬಾರೊಂದರಲ್ಲಿ  ನರಸಿಂಹ, ಮಾರ್ಕೆಟ್ ದೇವಿಯ ನಡುವೆ  ಹೊಡೆದಾಟ ನಡೆಯುತ್ತದೆ. ಆಗ ಅಲ್ಲಿಗೆ ಬಂದ  ಅಚ್ಯುತ್, ಮಾರ್ಕೆಟ್ ದೇವಿಗೆ ಗ್ಲಾಸಿನಿಂದ ಚುಚ್ಚುತ್ತಾನೆ. ದೇವಿ ಸತ್ತೇಹೋಗುತ್ತಾನೆ. ಆ ಕೊಲೆಯನ್ನು  ಅಲ್ಲಿದ್ದ ವೀರುನೇ ಮಾಡಿದ್ದಾನೆಂದು ಜೇಡ, ಮತ್ತಷ್ಟು  ವಿರೋಧ ಬೆಳೆಸಿಕೊಳ್ಳುತ್ತಾನೆ.  ಕೊಲೆ ನಡೆದಾಗಿನಿಂದ ಚಿತ್ರದ  ಕತೆ ಹೊಸ ತಿರುವನ್ನೇ  ಪಡೆದುಕೊಳ್ಳುತ್ತದೆ, ತನ್ನ ಭಾವ ಮಾಡಿದ ಕೊಲೆಯನ್ನು ತನ್ನ ಮೇಲೇ ಹಾಕಿಕೊಳ್ಳುವ ವೀರುವನ್ನು ಇದರ ಜೊತೆಗೆ ಅಕ್ಕನ ವಿರೋಧವನ್ನೂ  ತನ್ನ  ತಮ್ಮ, ಓದಿ ದೊಡ್ಡ ಕೆಲಸದಲ್ಲಿರಬೇಕೆಂದು ಕನಸು ಕಟ್ಟಿಕೊಂಡಿದ್ದ ಸರಸ್ವತಿ ಕನಸು `ಭಗ್ನವಾಗುತ್ತದೆ, ಕೊಲೆ ಆರೋಪ ಹೊತ್ತು ಜೈಲುಸೇರಿದ ವೀರುವನ್ನು ಗೋವಿಂದು ಅಲ್ಲಿಂದ ಕರೆತರುತ್ತಾನೆ. ಆದರೆ ಅಕ್ಕ ಸರಸ್ವತಿ ತಮ್ಮ ಕೊಲೆಗಾರನಾಗಿಬಿಟ್ಟ ಎಂದು ಬೇಸರದಿಂದ ಇಬ್ಬರೂ ತಮ್ಮಂದಿರು ತನ್ನ ಪಾಲಿಗೆ ಸತ್ತು ಹೋದರೆಂದು ತಿಥಿಯನ್ನೇ ಮಾಡುತ್ತಾಳೆ. 
 
ಸೋದರ ಪ್ರೀತಿ, ಅಭಿಮಾನದ ಪ್ರೀತಿ ಎರಡನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದಿರುವ  ನಿರ್ಮಾಪಕ ಶಶಿಧರ್,  ಚಿತ್ರ ಚೆನ್ನಾಗಿ ಬರಬೇಕೆಂಬ ಉದ್ದೇಶದಿಂದ ಸಣ್ಣ ಸಣ್ಣ ಪಾತ್ರಗಳಿಗೂ ಪ್ರಾಮುಖ್ಯತೆ ನೀಡಿ ಅಲ್ಲೆಲ್ಲ  ಸೆಲ್ರಬ್ರಟಿಗಳನ್ನು ಬಳಸಿಕೊಳ್ಳುವ ಮೂಲಕ ಕುತೂಹಲ  ಮೂಡಿಸಿದ್ದಾರೆ. ಆಕ್ಷನ್ ಸೀನ್‌ಗಳಂತೂ ಸಾಹಸ ಪ್ರಿಯರಿಗೆ  ಹಬ್ಬದಂತಿವೆ. ಜೊತೆಗೆ ಸೆಂಟಿಮೆಂಟ್ ಇಷ್ಟಪಡುವವರಿಗೆ  ಅಕ್ಕ ತಮ್ಮನ ನಡುವಿನ ಬಾಂಧವ್ಯದ ಕಥೆ ಇಟ್ಟಿದ್ದಾರೆ.   ಇದರ ನಡುವೆ ವಿಷ್ಣು ಅಭಿಮಾನಿಗಳಿಗೆ ಇಷ್ಟವಾಗುವ ಹಾಗೆ ಸಂದರ್ಭಕ್ಕೆ ತಕ್ಕಂತೆ  ಅವರ ಪಾತ್ರವನ್ನು ಬಳಸಿಕೊಂಡಿರುವ ರೀತಿ ಗಮನ ಸೆಳೆಯುತ್ತದೆ. 
 
ಚಿತ್ರದ ಮೊದಲ ಭಾಗದಲ್ಲಿ ಮಾರ್ಕೆಟ್‌ನಲ್ಲಿ ಪುಂಡರ ಹಾವಳಿ, ರೌಡಿಸಂ ಜೊತೆಗೆ  ಮದ್ಯವರ್ಗದ ಕುಟುಂಬದವರ ಕಷ್ಟ, ನೋವು, ನಲಿವುಗಳನ್ನ  ತೆರೆದಿಟ್ಟಿರುವ ರೀತಿ  ಉತ್ತಮವಾಗಿದೆ.
 
ದ್ವಿತೀಯ ಭಾಗ ಸ್ವಲ್ಪ ಲ್ಯಾಗ್  ಎನಿಸಿದರೂ  ಕಥೆಯ ಓಟಕ್ಕೆ ಅದು ಅವಶ್ಯಕವಾಗಿದೆ.  ಇನ್ನು ಅನುಪ್ ಸೀಳಿನ್  ಅವರ ಸಂಗೀತ ಗುನುಗುವಂತಿದ್ದು , ಹಾಡುಗಳು  ನೆನಪಲ್ಲುಳಿಯುತ್ತವೆ. ಅದರಲ್ಲೂ ಶಿವನ ಹಾಡಂತೂ ಸದಾ ನೆನಪಲ್ಲುಳಿಯುತ್ತದೆ.  ಮಿಥುನ್ ಅಶೋಕನ್ ಅವರ  ಹಿನ್ನೆಲೆ ಸಂಗೀತ ಇಡೀ  ಚಿತ್ರಕಥೆಗೆ  ಹೊಸ ರೂಪವನ್ನೇ  ನೀಡಿದೆ.  ಸಂಕಲನದ ಕೆಲಸವೂ ಕೂಡ ಉತ್ತಮವಾಗಿದೆ. ಅದೇ ರೀತಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ಲವಿತ್ ಕುಮಾರ್  ಅವರ  ಕ್ಯಾಮೆರಾ ಕೈಚಳಕ ಅದ್ಭುತವಾಗಿದೆ.  
 ಇನ್ನು ನಾಯಕ ಪ್ರಜ್ವಲ್ ದೇವರಾಜ್ ವಿಷ್ಣು ದಾದನ ಅಭಿಮಾನಿಯಾಗಿ ಎಂಟ್ರಿ ಕೊಡುವ ರೀತಿ , ಅವರ ಲುಕ್, ಬರ್ಜರಿ ಆಕ್ಷನ್ , ಖಡಕ್ ಡೈಲಾಗ್, ಪ್ರೀತಿಯ ತಮ್ಮನಾಗಿ , ಎನರ್ಜಿಟಿಕ್ ಪ್ರೇಮಿಯಾಗಿ  ಗಮನ  ಸೆಳೆಯುತ್ತಾರೆ.  ಹಾಗೆಯೇ ನಟ ಶ್ರೀನಗರ ಕಿಟ್ಟಿ ಕೂಡ ಬೇರೆಯದೆ ಖದರ್ ಮೂಲಕ ಎಂಟ್ರಿಕೊಟ್ಟು  ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
 
ಇನ್ನು ಹಿರಿಯನಟಿ ಶೃತಿ ಅವರು ಅಕ್ಕನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ  ನೈಜವಾಗಿ ಅಭಿನಯಿಸಿ  ಗಮನ ಸೆಳೆದಿದ್ದಾರೆ.
 
ಭಾವನಾಗಿ ಅಚುತ್‌ಕುಮಾರ್ ಕೂಡ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ನೋಡುಗರನ್ನು ಆಕರ್ಷಿಸುತ್ತ ತನ್ನ  ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ.. ವಿಶೇಷವಾಗಿ ಈ ಚಿತ್ರದ ಮೂಲಕ ಕಂಬ್ಯಾಕ್ ಆಗಿರುವ  ನಟ ಶಿಷ್ಯ ದೀಪಕ್ ಜೇಡನ ಪಾತ್ರದಲ್ಲಿ  ಖಡಕ್ ಅಭಿನಯದ ಮೂಲಕ  ಇಷ್ಟವಾಗುತ್ತಾರೆ.  ಅವರ ಗತ್ತು,  ಡೈಲಾಗ್ ಡಿಲವರಿ ಜೊತೆಗೆ ಅವರ ಹೇರ್‌ ಸ್ಡೈಲ್ ಆಕರ್ಷಣೀಯವಾಗಿದೆ. ಈ ಮೂಲಕ ಕನ್ನಡಕ್ಕರ ಮತ್ತೊಬ್ಬ  ಖಡಕ್ ವಿಲನ್  ಸಿಕ್ಕಂತಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed