ಪರಂವಃ ಸಂಸ್ಕೃತಿ ಸಂಬಂಧಗಳ ಜೊತೆ ಬದುಕಿನ ಪಾಠ 3.5/5 ****
Posted date: 22 Sat, Jul 2023 10:05:29 PM
ವೀರಗಾಸೆ ಹೇಳುವ ಕುಟುಂಬದಲ್ಲಿ ತಂದೆ ಮಗನ  ಬಾಂಧವ್ಯ, ಕಾಲೇಜಿನಲ್ಲಿ  ದಶ್ಚಟಕ್ಕೆ ಬಲಿಯಾಗಿ ತಮ್ಮ  ಜೀವನವನ್ನು  ಹೇಗೆಲ್ಲ ಹಾಳುಮಾಡಿಕೊಳ್ಳುತ್ತಾರೆ, ಹುಡುಗಿಯರ ಸ್ನೇಹ ಸೇರಿದಂತೆ ಹಲವು ವಿಚಾರಗಳೊಂದಿಗೆ ಬದುಕು ಕಲಿಸುವ ಪಾಠ ಏನು ಎಂಬುದನ್ನು  "ಪರಂವಃ" ಚಿತ್ರದಲ್ಲಿ ಹೇಳಲಾಗಿದೆ. ವಿದ್ಯಾ ವೀರಗಾಸೆ ಕಲೆಯ ಬಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದ ವ್ಯಕ್ತಿ (ಗಣೇಶ್ ಹೆಗ್ಗೋಡು)ಯೊಬ್ಬ  ಪೋಸ್ಟ್ ಮ್ಯಾನ್ ಕೆಲಸ ಮಾಡುತ್ತಲೇ  ತನ್ನ ಮಗ ಪರಂ(ಪ್ರೇಮ್ ಸಿಡೇಗಲ್)ಗೆ ವೀರಗಾಸೆಯ ಕಲೆಯ ಬಗ್ಗೆ ತಿಳಿಸುತ್ತಾ , ರಾಜರ ಮುಂದೆಯೇ‌‌ ವೀರಗಾಸೆ  ನೃತ್ಯ ಮಾಡಬೇಕು, ನಮ್ಮ ಸಂಪ್ರದಾಯ, ಆಚರಣೆ ಉಳಿಯಬೇಕು ಎಂದು ಮಗನಿಗೆ ಹೇಳುತ್ತಲೇ  ಪ್ರೀತಿಯಿಂದ ಬೆಳೆಸುತ್ತಾನೆ.
 
ಮುಂದೆ ಕಾಲೇಜಿಗೆ ಸೇರುವ ಪರಂಗೆ  ಅದೇ ಕಾಲೇಜಿನಲ್ಲಿ ಓದುತ್ತಿದ್ದ  ಅವನಿ (ಮೈತ್ರಿ. ಜೆ.ಕಶ್ಯಪ್)ಜೊತೆ  ಸ್ನೇಹವಾಗುತ್ತದೆ.‌‌  ದಿನ ಕಳೆದಂತೆ ಇವರಿಬ್ಬರ ಸ್ನೇಹ ಗಾಡವಾಗುತ್ತದೆ. ಇದರ ನಡುವೆ ನಾಯಕ‌ ಹಲವು ದಯಶ್ಚಟಗಳಿಗೆ ದಾಸನಾಗುತ್ತಾ ಹೋಗುತ್ತಾನೆ. ಮುಂದೆ ತಂದೆಯಿಂದ ದೂರ ಉಳಿಯುವ ಪರಂ ನನ್ನ  ಗೆಳತಿಯೂ ಬಿಟ್ಟು ಹೋಗುವ ಘಟನೆಗಳು ಎದುರಾಗುತ್ತದೆ. ನಂತರ ಪರಂ ತನ್ನ  ಜೀವನದ ಶೈಲಿಯನ್ನೇ ಬದಲಿಸಿಕೊಳ್ಳುತ್ತಾನೆ. ಇದು ಅವನ ಬದುಕಿನ ಅವನತಿಯತ್ತ ಕರೆದುಕೊಂಡು ಹೋಗುತ್ತದೆ. ಪರಂ ಮುಂದೆ ಏನಾದ, ಆತನಿಗೆ ಮತ್ತೆ ಗೆಳತಿ ಸಿಕ್ತಾಳಾ, ತಂದೆಯ ಆಸೆ ಕೈಗೂಡುತ್ತಾ ಇದೆಲ್ಲವನ್ನೂ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹೇಳಲಾಗಿದೆ. 
 
ನಿರ್ದೇಶಕರು ತನ್ನ ಪ್ರಥಮ ಪ್ರಯತ್ನದಲ್ಲೇ  ಬದುಕಿನ ಪಾಠದ ಜೊತೆಗೆ ವಿದ್ಯಾರ್ಥಿಗಳ ಜೀವನ, ಪ್ರೀತಿ , ಗೆಳೆತನ , ಸಂಬಂಧಗಳ ಮೌಲ್ಯ , ದುಶ್ಚಟಗಳ ಕುರಿತಂತೆ ಜಾಗೃತಿ ಮೂಡಿಸುವ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಕ್ಲೈಮಾಕ್ಸ್ ನಲ್ಲಿ ಹೇಳಿರುವ ಸಂದೇಶ ಗಮನ ಸೆಳೆಯುತ್ತದೆ. ತಂದೆ ಮಗನ ಪ್ರೀತಿ, ಬಾಂಧವ್ಯದ ಹಾಡು ಇಂಪಾಗಿದೆ. ಹಿನ್ನೆಲೆ ಸಂಗೀತ ಉತ್ತಮವಾಗಿದೆ. ನಾಯಕನ ಪಾತ್ರಕ್ಕೆ  ಪ್ರೇಮ್ ಸಿಡೇಗಲ್ ತನ್ನ ನಟನಾ ಸಾಮರ್ಥ್ಯದ ಮೂಲಕ ನೈಜವಾಗಿಸಿದ್ದಾರೆ. ಆರಂಭ ಹಾಗೂ ಅಂತ್ಯದ ಸಂಭಾಷಣೆ ಅದ್ಭುತವಾಗಿ ಮೂಡಿ ಬಂದಿದೆ. ತಂದೆಯಾಗಿ ಗಣೇಶ್ ಹೆಗ್ಗೋಡು ಮನಮುಟ್ಟುವಂತೆ ನಟಿಸಿದ್ದಾರೆ. ಉಳಿದಂತೆ ಬ ರುವ ಎಲ್ಲಾ ಪಾತ್ರದಾರಿಗಳು ಕೂಡ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed