ಸದ್ದು ಮಾಡುತ್ತಿದ್ದಾರೆ ಗಡ್ಡಧಾರಿಗಳು 14 ರಂದು ಆಗಮಿಸಲಿದರೆ ಚಿತ್ರಮಂದಿರಕ್ಕೆ
Posted date: 10 Mon, Apr 2023 12:45:59 PM
`ಮಾರಿಗುಡ್ಡದ ಗಡ್ಡಧಾರಿಗಳು` ಚಿತ್ರದ ಪೋಸ್ಟರ್ ಮತ್ತು ಶೀರ್ಷಿಕೆ ಗೀತೆಯು ಬಿಡುಗಡೆಯಾಗಿದ್ದು ವೈರಲ್ ಆಗಿರುವುದರಿಂದ ತಂಡಕ್ಕೆ ಖುಷಿ ತಂದಿದೆ. ಇದರಿಂದ ಚಿತ್ರತಂಡವು ಮೂವತ್ತು ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು, ಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈಗ ಕೊನೆ ಹಂತ ಎನ್ನುವಂತೆ ಪ್ರಮೋಷನಲ್ ಸಾಂಗ್ ’ಹುಲಿಯನ ದಂಡು’ ಸಾಲಿನ ಹಾಡು ಕುರುಬರಹಳ್ಳಿ ವೃತ್ತದಲ್ಲಿರುವ ಡಾ.ರಾಜ್‌ಕುಮಾರ್ ಪುತ್ಥಳಿ ಎದುರು ಅನಾವರಣಗೊಂಡಿತು. ಸಿನಿಮಾಕ್ಕೆ ಕಲಾನಿರ್ದೇಶನ ಮಾಡಿರುವ ವಿಶ್ವ ಸಾಹಿತ್ಯ ರಚಿಸಿ, ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಗೀತೆಗೆ ಮ್ಯಾಡಿ ಸಾಂಗ್ ಕಂಪೋಸ್ ಮಾಡಿದ್ದಾರೆ.     
 
ನಿರ್ಮಾಪಕ ಮತ್ತು ಮುಖ್ಯ ಪಾತ್ರ ಮಾಡಿರುವ ಸಲಗಸೂರಿಯಣ್ಣ ಮಾತನಾಡಿ ಕಟುಕನಿಗೂ ಒಳ್ಳೆಯ ಹೃದಯವಿರುತ್ತದೆ ಅಂತ ಸನ್ನಿವೇಶಗಳ ಮೂಲಕ ತೋರಿಸಲಾಗಿದೆ. ಕಷ್ಟಪಟ್ಟು ನಿರ್ಮಾಣ ಮಾಡಿದ್ದೇವೆ. ನಮ್ಮನ್ನು ಬೆಳಿಸಿರಿ ಅಂತ ಕೋರಿಕೊಂಡು, ಸಿನಿಮಾದ ಜಬರ್‌ದಸ್ತ್ ಡೈಲಾಗ್ ಹೇಳಿ ರಂಜಿಸಿದರು.  
 
ನಿರ್ದೇಶಕ ರಾಜೀವ್‌ಚಂದ್ರಕಾಂತ್ ಜಿಲ್ಲೆಗಳಿಗೆ ಭೇಟಿ ನೀಡಿದ ಅನುಭವಗಳನ್ನು ಹೇಳಿಕೊಂಡರು. ನಂತರ ಮಾತು ಮುಂದುವರೆಸಿ ವಿಲನ್‌ಗೋಸ್ಕರವೇ ಕಥೆ ಬರೆದಿರುವುದು ವಿಶೇಷ. 90ರ ಕಾಲಘಟ್ಟದಲ್ಲಿ ಕಾಲ್ಪನಿಕ ಮಾರಿಗುಡ್ಡ ಎಂಬ ಸ್ಥಳದಲ್ಲಿ ಗಡ್ಡಧಾರಿಗಳು ಅಲ್ಲಿನ ಜನರ ಹಣ, ವಸ್ತುಗಳನ್ನು ದೋಚುತ್ತಿರುತ್ತಾರೆ. ಮತ್ತೋಂದು ಟ್ರಾಕ್‌ದಲ್ಲಿ ಪ್ರೇಮಿಗಳ ಕಥೆಯೊಂದು ತೆರೆದುಕೊಳ್ಳುತ್ತದೆ. ಎಲ್ಲೋ ಒಂದು ಕಡೆ ಇವರೆಡು ಸೇರಿಕೊಳ್ಳುತ್ತದೆ. ಇದು ಒಂದು ಏಳೆಯ ಸಾರಾಂಶವಾಗಿದೆ. ಕೋಲಾರ, ನರಸಾಪುರಘಟ್ಟ, ಏರೋಹಳ್ಳಿ ಘಟ್ಟ, ಕೆಜೆಎಫ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದಾಗಿ ಮಾಹಿತಿ ತೆರೆದಿಟ್ಟರು. ನಾಯಕ ಪ್ರವೀಣ್ ಮಿತಭಾಷಿಯಾಗಿದ್ದರು.  
 
ಸಂಗೀತ ಕೆ.ಎಂ.ಇಂದ್ರ, ಸಂಕಲನಕಾರ ಕೆ.ಎಂ.ವಿಶ್ವ, ಛಾಯಾಗ್ರಹಣ ಸತ್ಯ-ಎಂ.ಬಿ.ಹಳ್ಳಿಕಟ್ಟಿ ಅವರದಾಗಿದೆ. ತಾರಗಣದಲ್ಲಿ ನಮ್ರತಾಅಗಸಿಮನಿ, ಗಣೇಶ್‌ರಾವ್, ಬೆನಕ ನಂಜಪ್ಪ, ರಕ್ಷಿತ್, ನಂಜುಂಡ, ನಾಗಾವಿಜಯ್, ಶಾರುಣ್‌ಲೋಕೇಶ್, ಗಾಯಿತ್ರಿ, ಸೆಲ್ವಿ, ಬೇಬಿಮಾರಿಷ ನಟಿಸಿದ್ದಾರೆ. ಅಂದಹಾಗೆ ಸಿನಿಮಾವು ಏಪ್ರಿಲ್ ಎರಡನೇ ವಾರದಲ್ಲಿ ರಾಜ್ಯಾದ್ಯಂತ ತೆರೆಗೆ ಬರಲಿದೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed