ತೆರೆಗೆ ಬರಲು ಸಿದ್ದವಾಗಿದೆ ``ಪ್ರೆಸೆಂಟ್ ಪ್ರಪಂಚ ೦% ಲವ್`` ಚಿತ್ರ
Posted date: 20 Thu, Apr 2023 01:13:28 PM
ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ "ಪ್ರೆಸೆಂಟ್ ಪ್ರಪಂಚ 0% ಲವ್" ಚಿತ್ರ  ತೆರೆಗೆ ಬರಲು ಸಿದ್ದವಾಗಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

ನಿರ್ದೇಶಕನಿಗೆ ತನ್ನ ಚಿತ್ರವೇ ಸರ್ವಸ್ವ. ನಮ್ಮ ಚಿತ್ರದ ನಿರ್ದೇಶಕ ಅಭಿರಾಮ್ ಎ ಅವರಿಗೂ ಈ ಚಿತ್ರದ ಬಗ್ಗೆ ಅಪಾರ ಪ್ರೀತಿ. ಆದರೆ ವಿಧಿ, ಚಿತ್ರ ಬಿಡುಗಡೆಗೆ ಮುನ್ನವೇ ನಿರ್ದೇಶಕ ಅಭಿರಾಮ್ ಹಾಗೂ ನಾಯಕ ಅರ್ಜುನ್ ಮಂಜುನಾಥ್ ಇಬ್ಬರನ್ನು ಬಲಿ ತೆಗೆದುಕೊಂಡಿದೆ.
ಅವರಿಬ್ಬರ ಅನುಪಸ್ಥಿತಿ ತುಂಬಾ ಕಾಡುತ್ತಿದೆ. ಇಬ್ಬರು ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಗಿಯುವ ತನಕ ಜೊತೆಗಿದ್ದರು. ಆಮೇಲೆ ಯಾರು ನಿರೀಕ್ಷಿಸದ್ದು ನಡೆದು ಹೋಯಿತು. ಆನಂತರ ದ್ವಿತೀಯ ನಾಯಕ ಯಶಸ್ ಅಭಿ ಸೇರಿದಂತೆ  ಚಿತ್ರತಂಡದ ಸದಸ್ಯರ ಸಹಕಾರದಿಂದ ಸಿನಿಮಾ ಪೂರ್ಣವಾಗಿದೆ. ಸದ್ಯದಲ್ಲೇ ಬಿಡುಗಡೆ ಮಾಡುವ ಯೋಜನೆ ಇದೆ ಎಂದರು ನಿರ್ಮಾಪಕ ಕೃಷ್ಣಮೂರ್ತಿ ಕೆ.ಎಲ್. 
ಈ ಚಿತ್ರವನ್ನು ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಇಬ್ಬರು ಸೇರಿ ನಿರ್ಮಿಸಿದ್ದಾರೆ. ನಾಗರಾಜ್ ಹೊಸಳ್ಳಿ ಹಾಗೂ ದೇವರಾಜ್ ಅವರ ಸಹ ನಿರ್ಮಾಣವೂ ಇದೆ.

"ಪ್ರೆಸೆಂಟ್ ಪ್ರಪಂಚ"ದಲ್ಲಿ ಎಲ್ಲದಕ್ಕಿಂತ ಪ್ರೀತಿನೇ ಮುಖ್ಯ ಎಂಬುದೇ ಚಿತ್ರದ ಪ್ರಮುಖ ಕಥಾಹಂದರ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕ ೦% ಪ್ರೀತಿ ಎಂದು ಕೊಂಡು ಬಂದರೆ, ಹೋಗುವಾಗ 100% ಪ್ರೀತಿ ಹೊತ್ತಿಕೊಂಡು ಹೋಗುವುದು ಖಚಿತ.  ನಾಯಕ ಹಾಗೂ ನಿರ್ದೇಶಕರ ನಿಧನದಿಂದ ನಮ್ಮ ತಂಡಕ್ಕೆ ತುಂಬಾ ಆಘಾತವಾಗಿತ್ತು. ಆದರೆ ಈ ಚಿತ್ರ ಅವರಿಬ್ಬರ ಕನಸಿನ ಕೂಸು. ಚಿತ್ರವನ್ನು ಪೂರ್ತಿ ಮಾಡಿ, ತೆರೆಗೆ ತರೋಣ ಎಂದು ನಾನು, ನಿರ್ಮಾಪಕರಿಗೆ ಹೇಳಿದೆ. ನನ್ನ ಹಾಗೂ ನಮ್ಮ ತಂಡದ ಕೋರಿಕೆಗೆ ಸ್ಪಂದಿಸಿದ ನಿರ್ಮಾಪಕರಿಗೆ ಧನ್ಯವಾದ. ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ದ್ವಿತೀಯ ನಾಯಕ ಯಶಸ್ ಅಭಿ.

ಮದುವೆಯಾದ ಮೇಲೆ ಗಂಡ - ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಅದು ವಿಚ್ಛೇದನದ ತನಕ ಹೋಗಬಾರದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ ಎಂದರು ನಾಯಕಿ ಸಂಭ್ರಮ ಶ್ರೀ.

 ನಟರಾದ ಗೋವಿಂದೇ ಗೌಡ, ಕುರಿ ಸುನೀಲ್ ಹಾಗೂ ಸಂಗೀತ ನಿರ್ದೇಶಕ ರವಿತೇಜಸ್ ಚಿತ್ರದ ಕುರಿತು ಮಾತನಾಡಿದರು. 

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಸಾಹಿತಿ ಹಾಗೂ ನಿರ್ದೇಶಕ ರಾಮ್ ನಾರಾಯಣ್ ಮುಂತಾದ ಗಣ್ಯರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed