ದಿನೇಶ್ ಬಾಬುರ ಮತ್ತೊಂದು ಕಾಮಿಡಿ ಎಕ್ಸ್‌ಪ್ರೆಸ್
Posted date: 10/June/2009

ದಿನೇಶ್‌ಬಾಬು ನಿರ್ದೇಶನದ ಚಿತ್ರ ಎಂದರೆ ಅದರಲ್ಲಿ ಏನೋ ಒಂದು ವಿಶೇಷತೆ ಇದ್ದೇ ಇರುತ್ತದೆ. ಅವರು ಸಸ್ಪೆನ್ಸ್, ಕಾಮಿಡಿ, ಥ್ರಿಲ್ಲರ್, ಫ್ಯಾಮಿಲಿ ಡ್ರಾಮಾ ಹೀಗೆ ಎಲ್ಲಾ ರೀತಿಯ ಚಿತ್ರಗಳನ್ನು ನಿರ್ದೇಶಿಸಿದ್ದರೂ ಅದರಲ್ಲಿ ಅವರದೇ ಆದ ವಿಭಿನ್ನ ನಿರೂಪಣೆ ಇರುತ್ತದೆ. ಈಗಾಗಲೇ ಅವರ ನಿರ್ದೇಶನದ ಎರಡನೇ ಮದುವೆ ಎಂಬ ಹಾಸ್ಯ ಚಿತ್ರ ತೆರೆಗೆ ಬರಲು ರೆಡಿಯಾಗುತ್ತಿದ್ದಂತೆ ಇದೀಗ ಇನ್ನೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ.  ಶ್ರೀ ಮೂಕಾಂಬಿಕಾ ಫಿಲಂಸ್ ಲಾಂಛನದಲ್ಲಿ ರಾಜೀವ್ ಹಾಗೂ ಪ್ರಶಾಂತ್ ನಿರ್ಮಿಸುತ್ತಿರುವ ಈ ಚಿತ್ರದ ಹೆಸರು ಮೂರು ಗುಟ್ಟು, ಒಂದು ಸುಳ್ಳು, ಒಂದು ನಿಜ.  ಇದೂ ಕೂಡ ಪೂರ್ಣ ಪ್ರಮಾಣದ ಹಾಸ್ಯ ಚಿತ್ರವಾಗಿದ್ದು, ಕಳೆದ ೯ರಿಂದ ಚಿತ್ರೀಕರಣ ಪ್ರಾರಂಭವಾಗಿದೆ. ಒಂದೇ ಹಂತದಲ್ಲಿ ಕುಶಾಲನಗರದ ಸುತ್ತಮುತ್ತ ಸುಮಾರು ೨೦ ದಿನಗಳ ಕಾಲ ಶೂಟಿಂಗ್ ಮಾಡಿ ಮುಗಿಸಲಿದ್ದಾರೆ. ಅಮೃತವರ್ಷಿಣಿ ನಂತರ ರಮೇಶ್ ಅರವಿಂದ್ ಅವರ ಜೊತೆ ಹಾಗೂ ಮಿ|| ಗರಗಸ ನಂತರ ಕೋಮಲ್ ಜೊತೆ ದಿನೇಶ್ ಬಾಬು ನಿರ್ದೇಶನದ ಚಿತ್ರ ಇದಾಗಿದೆ. ಕಥೆ-ಚಿತ್ರಕಥೆ ಬರೆದು ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಅವರೇ ಹೊತ್ತಿದ್ದಾರೆ. ಜಯಪಾಲ್ ಅವರ ಸಂಗೀತ ಸಂಯೋಜನೆ, ರಾಜೇಂದ್ರ ಕಾರಂತರ ಸಂಭಾಷಣೆ ಈ ಚಿತ್ರಕ್ಕಿದ್ದು, ರಮೇಶ್ ಅರವಿಂದ್, ಕೋಮಲ್, ನಂದಿನಿ, ಮಧು ಹೆಗ್ಡೆ, ಸುಧಾ ಬೆಳವಾಡಿ, ಶೃತಿ ನಾಯ್ಡು, ಶ್ರೀನಿವಾಸಮೂರ್ತಿ, ಪ್ರವೀಣ್ ಹಾಗೂ ನ್ಯಾನ್ಸಿ ಪ್ರಮುಖ ತಾರಾಗಣದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed