ಏಜೆಂಟ್ ಸಿನಿಮಾಗೆ ಬಾಲಿವುಡ್ ಸ್ಟಾರ್ ಎಂಟ್ರಿ...ಹೇಗಿದೆ ಡಿನೋ ಮೋರಿಯಾ ಫಸ್ಟ್ ಲುಕ್
Posted date: 15 Sat, Apr 2023 09:02:47 AM
ಟಾಲಿವುಡ್ ಯಂಗ್ ಅಂಡ್ ಡೈನಾಮಿಕ್ ಹೀರೋ ಅಖಿಲ್ ಅಕ್ಕಿನೇನಿ ನಟನೆಯ ಕ್ರೇಜಿ ಪ್ರಾಜೆಕ್ಟ್ ಏಜೆಂಟ್ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಅಖಿಲ್ ಹುಟ್ಟುಹಬ್ಬಕ್ಕೆ ಹೊಸ ಪೋಸ್ಟರ್ ಅನಾವರಣ ಮಾಡಿದ್ದ ಚಿತ್ರತಂಡ ಈಗ ಮತ್ತೊಂದು ಪ್ರಮುಖ ಪಾತ್ರವನ್ನು ಸಿನಿರಸಿಕರಿಗೆ ಪರಿಚಯಿಸಿದೆ.  ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, 
ಸಾಕ್ಷಿ ವೈದ್ಯ ನಾಯಕಿಯಾಗಿ ಅಭಿನಯಿಸಿರುವ ಏಜೆಂಟ್ ಸಿನಿಮಾಗೆ ಬಾಲಿವುಡ್ ತಾರೆ ಎಂಟ್ರಿ ಕೊಟ್ಟಿದ್ದಾರೆ. 

ರಾಝ್, ಅಕ್ಸರ್, ಜೂಲಿ ಮುಂತಾದ ಪಾತ್ರಗಳ‌ ಮೂಲಕ ಖ್ಯಾತಿ ಪಡೆದಿರುವ ಬಿಟೌನ್ ಸ್ಟಾರ್ ಡಿಯೋ ಮೋರಿಯಾ ಏಜೆಂಟ್ ಸಿನಿಮಾದಲ್ಲಿ ದಿ ಗಾಡ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉದ್ದವಾದ ಕೇಶರಾಶಿ, ಮುಖದ‌ ಮೇಲೆ ಗಾಯದ ಗುರುತು, ಕೈಯಲ್ಲಿ ಗನ್ ಹಿಡಿದು ಡಿಯೋ ಮೋರಿಯಾ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. 

ಈಗಾಗಲೇ ಏಜೆಂಟ್ ಮೊದಲ ಎರಡು ಹಾಡುಗಳ ಹಿಟ್ ಲೀಸ್ಟ್ ಸೇರಿದ್ದು, ನಿನ್ನೆ ರಿಲೀಸ್ ಆಗಿರುವ ರಾಮ ಶ್ರೀಕೃಷ್ಣ ಎಂಬ ಹಾಡು ಬಜ್ ಕ್ರಿಯೇಟ್ ಮಾಡಿದೆ. ಆಕ್ಷನ್ ಹೈವೋಲ್ಟೇಜ್  ಏಜೆಂಟ್ ಸಿನಿಮಾವನ್ನು ರಾಮಬ್ರಹ್ಮಂ ಸುಂಕರ AK ಎಂಟರ್ಟೈನ್ಮೆಂಟ್ಸ್ ಹಾಗೂ ಸುರೇಂದ್ರ 2 ಸಿನಿಮಾ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ ಕೊಲ್ಲ ಕಲಾ ನಿರ್ದೇಶನ, ಅಜೇಯ್ ಸುಂಕರ, ಪಾತಿ ದೀಪ ರೆಡ್ಡಿ ಸಹ ನಿರ್ಮಾಣ ಚಿತ್ರಕ್ಕಿದೆ. ಹಿಪ್ ಹಾಪ್ ಥಮೀಜಾ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಏಜೆಂಟ್ ಚಿತ್ರ ರಸೂಲ್ ಎಲ್ಲೋರೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಏಜೆಂಟ್ ಸಿನಿಮಾ ಏಪ್ರಿಲ್ 28ಕ್ಕೆ ಬಿಡುಗಡೆಯಾಗುತ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed