ಕಳೆದ ಶುಕ್ರವಾರ ಬಿಡುಗಡೆಯಾದ ಸೌತ್ ಇಂಡಿಯನ್ ಹೀರೋ ಚಿತ್ರವು ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ವೀಕ್ಷಕರು ಹಾಗೂ ಮಾಧ್ಯಮ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಎಂಬ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಇನ್ನೂ ಹೆಚ್ಚು ಹೆಚ್ಚು ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಬೇಕಿದೆ. ಚಿತ್ರವನ್ನು ಮೆಚ್ಚಿದ ಪ್ರೇಕ್ಷಕರು ಹಾಗೂ ಮೀಡಿಯಾಗಳಿಗೆ ಕೃತಜ್ಞತೆ ಅರ್ಪಿಸಲೆಂದೇ ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನರೇಶ್‌ಕುಮಾರ್, ಎಲ್ಲಾ ಮಾಧ್ಮಮಗಳಲ್ಲಿ ನಮ್ಮ ಚಿತ್ರವನ್ನು ಮೆಚ್ಚು ವಿಮರ್ಶೆ ಮಾಡಿದ್ದೀರಿ.ತುಂಬಾ ಧನ್ಯವಾದ. ಅಲ್ಲದೆ ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ಚಿತ್ರದ ಕ್ಲೈಮಾಕ್ಸ್ ಬಗ್ಗೆಯೇ ಹೆಚ್ಚು ಜನರು ಮೆಚ್ಚಿ ಮಾತಾಡುತ್ತಿದ್ದಾರೆ. ನಮ್ಮ ಚಿತ್ರದ ಈ ಗೆಲುವಿನಲ್ಲಿ ಮೀಡಿಯಾದ ಸಪೋರ್ಟ್ ತುಂಬಾನೇ ಇದೆ. ಚಿತ್ರರಂಗದ ಪ್ರತಿಯೊಬ್ಬ ನಾಯಕರು ನಮ್ಮ ಚಿತ್ರವನ್ನು ನೋಡಲೇಬೇಕು. ಹಾಗಾಗಿ ಇಂಡಸ್ಟಿಯ ಎಲ್ಲಾ ಹೀರೋಗಳಿಗೂ ಚಿತ್ರವನ್ನು ತೋರಿಸುವ ಯೋಚನೆಯಿದೆ, ನಾನು ದುಡ್ಡಿಗಾಗಿ ಈ ಚಿತ್ರವನ್ನು ಮಾಡಿಲ್ಲ. ಅದನ್ನು ನಿರ್ಮಾಪಕರು ನೋಡಿಕೊಳ್ತಾರೆ. ಅವಕಾಶಕ್ಕಾಗಿ ಕಾಯುತ್ತಿರುವ ಹೊಸಬರನ್ನು ಮುಂದೆ ತರಬೇಕೆಂದು ಚಿತ್ರ ನಿರ್ಮಿಸಿದ್ದೇವೆ. ಬೇರೆ ಭಾಷೆಗಳ ಡಬ್ಬಿಂಗ್ ಬಗ್ಗೆ ಮಾತುಕತೆ ನಡೆಯುತ್ತಿದೆ. ನಿನ್ನೆಯಿಂದ ತೆಲುಗು, ತಮಿಳು ಇಂಡಸ್ಟಿಯಿಂದ ಹಲವಾರು ಫೋನ್‌ಗಳು ಬರುತ್ತಾ ಇದೆ. ಶುಕ್ರವಾರಕ್ಕಿಂತ ಶನಿವಾರ, ಭಾನುವಾರ ನಮ್ಮ ಚಿತ್ರದ ಕಲೆಕ್ಷನ್ ಇಂಪ್ರೂವ್ ಆಗಿದೆ. ತಮಿಳು ನಟ ಸಿಂಬು ಅವರು ಚಿತ್ರವನ್ನು ನೋಡಬೇಕು ಎಂದಿದ್ದಾರೆ. ನಿರ್ದೇಶಕ ರಾಮಗೋಪಾಲ್ ವರ್ಮಾ ಅವರುಕೂಡ ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಮಯದಲ್ಲಿ ನಾನು ಉಪೇಂದ್ರ ಅವರಿಗೆ ದೊಡ್ಡ ಥ್ಯಾಂಕ್ಸ್ ಹೇಳಬೇಕು, ಇಂಥ ಒಳ್ಳೇ ಸಿನಿಮಾಗಳು ನಿಂತರೆ ಇಂಡಸ್ಟ್ರಿಗೆ ಬಲ ಬಂದಂತಾಗುತ್ತದೆ ಎಂದು ಹೇಳಿದರು.
ನಂತರ ನಿರ್ಮಾಪಕಿ ಶಿಲ್ಪಾ ಮಾತನಾಡಿ ನಾನು ಲಾಕ್‌ಡೌನ್‌ನಲ್ಲಿ ಈ ಕಥೆ ಕೇಳಿದ್ದೆ, ನಮ್ಮ ಬ್ಯಾನರ್ ಮೊದಲ ಸಿನಿಮಾಗೆ ಇಷ್ಟೊಂದು ಸಪೋರ್ಟ್ ಸಿಕ್ಕಿದ್ದು ಖುಷಿಯಾಗಿದೆ. ಪ್ರತಿ ಪಾತ್ರಗಳಿಗೂ ಜೀವ ತುಂಬಿರುವುದು ನಮ್ಮ ಕಲಾವಿದರು. ಚಿತ್ರ ಎಮೋಷನಲಿ ಕನೆಕ್ಟ್ ಆಗುತ್ತಿದ್ದು, ವಯಸಿನ ಮಿತಿ ಇಲ್ಲದೆ ಎಲ್ಲರೂ ಚಿತ್ರವನ್ನು ನೋಡುತ್ತಿದ್ದಾರೆ. ಮುಖ್ಯವಾಗಿ ಚಿತ್ರದ ಎಲ್ಲಾ ಪಾತ್ರಗಳು ಜನರಲ್ಲಿ ರಿಜಿಸ್ಟರ್ ಆಗುತ್ತದೆ. ಎಲ್ಲಾ ಏಜ್‌ಗ್ರೂಪ್‌ನವರಿಗೂ ಚಿತ್ರ ಇಷ್ಟವಾಗುತ್ತದೆ ಎಂದು ಹೇಳಿದರು.
ನಾಯಕ ಸಾರ್ಥಕ್ ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ಒಂದು ಸಿನಿಮಾಗೆ ಈ ಲೆವೆಲ್‌ನಲ್ಲಿ ರೆಸ್ಪಾನ್ಸ್ ಸಿಕ್ಕಿರುವುದು ತುಂಬಾ ಅಪರೂಪ. ಚಿತ್ರಕ್ಕೆ ಇಷ್ಟು ದೊಡ್ಡ ರೇಟಿಂಗ್ಸ್ ಬಂದಿರುವುದು ಇಡೀ ದೇಶಕ್ಕೆ ರೀಚ್ ಆಗಿದೆ. ಒಂದಷ್ಟು ಗೆಳೆಯರು ಕೇರಳದಿಂದ ಬಸ್ ಮಾಡಿಕೊಂಡು ಬಂದು ನಮ್ಮ ಸಿನಿಮಾ ನೋಡಿದ್ದಾರೆ ಎಂದು ಹೇಳಿದರು. ನಂತರ ನಾಯಕಿಯರಾದ ಕಾಶಿಮಾ ರಫಿ, ಊರ್ವಶಿ, ವಿಜಯ್ ಚೆಂಡೂರ್ ಮುಂತಾದವರು ಚಿತ್ರದ ಗೆಲುವಿನ ಖುಷಿಯನ್ನು ಹಂಚಿಕೊಂಡರು.