ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ ತಂದೆಯ ಪಾತ್ರ ಕೂಡ ಬಹಳ ದೊಡ್ಡದಿರೂತ್ತದೆ. ವೀರಗಾಸೆ ಕುಟುಂಬದಿಂದ ಬಂದ ತಂದೆ - ಮಗನ ಬಾಂಧವ್ಯದ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ "ಪರಂವಃ" ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಐದನೇ ಲಿರಿಕಲ್ (ಪ್ಯಾಥೋ ಸಾಂಗ್) ಹಾಡು ಬಿಡುಗಡೆಯಾಯಿತು. ಸಂತೋಷ್ ಕೈದಾಳ ಅವರ ನಿರ್ದೇಶನದ ಈ ಚಿತ್ರದಲ್ಲಿ ಪ್ರೇಮ್ ಸಿಡೇಗಲ್, ಮೈತ್ರಿ ಜಿ.ಕಶ್ಯಪ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ನಾಯಕ ವೀರಗಾಸೆ ಕುಟುಂಬದ ಹುಡುಗ. ಆತನ ಜೀವನ ವಿವಿಧ ಹಂತಗಳಲ್ಲಿ ಹೇಗೆ ಬದಲಾವಣೆ ಕಾಣುತ್ತೆ ಎಂಬ ಕಥೆಯನ್ನು ಪರಂವಃ ಚಿತ್ರದಲ್ಲಿ ಹೇಳಲಾಗಿದೆ.
ಈ ಸಂದರ್ಭದಲ್ಲಿ ನಿರ್ದೇಶಕ ಸಂತೋಷ್ ಮಾತನಾಡಿ, ನಾವು ಟೀಸರ್, ಸಾಂಗ್ ರಿಲೀಸ್ ಮಾಡಿದಾಗೆಲ್ಲ ಮಾಧ್ಯಮ ನೀಡಿದ ಸಹಕಾರ ತುಂಬಾ ದೊಡ್ಡದು. ನಾವು 200 ಜನಕ್ಕೆ ರೀಚ್ ಆದ್ರೆಸಾಕು ಅಂದುಕೊಂಡಿದ್ದೆವು. ಅದನ್ನು ಸಹಸ್ರಾರು ಜನರಿಗೆ ತಲುಪಿಸಿದ್ದೀರಿ.
ಈ ಹಾಡನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿಕೊಟ್ಟು, ನಾನು ದುನಿಯಾ ಟೈಂನಲ್ಲಿ ಹೇಗಿದ್ದೆನೋ ಹಾಗೇ ಪ್ರೇಮ್ ಕಾಣ್ತಿದ್ದಾನೆ, ಒಳ್ಳೇದಾಗಲಿ ಎಂದು ಶುಭ ಹಾರೈಸಿದರು. ಕೊನೇ ಹಂತದಲ್ಲಿ ನಮ್ಮನ್ನು ವೆಂಕಟ್ ಗೌಡ್ರು ಕೈ ಹಿಡಿದರು, ಅಪರಾಜಿತ್, ಜೋಸ್ಸೆ ಇಬ್ಬರೂ ಅದ್ಭುತವಾಗಿ ಸಾಂಗ್ ಮಾಡಿಕೊಟ್ಟಿದ್ದಾರೆ. ಈ ಕಥೆಕೇಳಿ ಸಿಎಂ ಕೂಡ ತಮ್ಮ ಬಾಲ್ಯದ ದಿನಗಳಲ್ಲಿ ತಂದೆಯ ಹೆಗಲ ಮೇಲೆ ಕುಳಿತು ನಾನು ದಸರಾ ಮೆರವಣಿಗೆ ನೋಡುತ್ತಿದ್ದೆ ಎಂದು ನೆನಪಿಸಿಕೊಂಡರು. ನಮ್ಮ ಕಾನ್ಫಿಡೆನ್ಸ್ ಹೆಚ್ಚಿಸಿದ್ದು ನಾಡಿನ ಜನತೆ ಹಾಗೂ ಮೀಡಿಯಾ ಎಂದು ಹೇಳಿದರು. ನಾಯಕ ಪ್ರೇಮ್ ಕೂಡ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು.
ನಾಯಕಿ ಮೈತ್ರಿ ಮಾತನಾಡಿ ನಾಗೇಶ್ ಕುಂದಾಪುರ ಅವರು ನನ್ನನ್ನು ಈ ತಂಡಕ್ಕೆ ಪರಿಚಯಿಸಿದರು. ನನ್ನೊಳಗಿನ ಕಲಾವಿದೆಯನ್ನು ಹೊರತಂದವರು ಪ್ರೇಮ್ ಹಾಗೂ ನಿರ್ದೇಶಕರು ಎಂದು ಹೇಳಿಕೊಂಡರು.ಚಿತ್ರವನ್ನು ರಿಲೀಸ್ ಮಾಡುತ್ತಿರುವ ವೆಂಕಟ್ ಗೌಡ್ರು ಮಾತನಾಡಿ ಪೆಂಟಗನ್ ಟೈಂನಲ್ಲಿ ಈ ತಂಡದ ಪರಿಚಯವಾಯ್ತು. ಅವರೇ ನನ್ನಬಳಿ ಬಂದು ಕಂಪ್ಲೀಟ್ ಜವಾಬ್ದಾರಿ ತಗೊಂಡು ರಿಲೀಸ್ ಮಾಡಿಕೊಡಿ ಎಂದರು. ನಿಮಗೆಲ್ಲಿ ಸ್ಟ್ರಾಂಗ್ ಹೋಲ್ಡ್ ಇದೆ ಅಲ್ಲಿ ಹೆಚ್ಚು ಕಾನ್ಸಂಟ್ರೇಟ್ ಮಾಡಲು ಹೇಳಿದೆ. 25 ಮಲ್ಟಿಪ್ಲೆಕ್ಸ್ 5ರಿಂದ 10 ಸಿಂಗಲ್ ಥೇಟರುಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಪೀಪಲ್ ವಲ್ಡ್ ಫಿಲಂಸ್ ಲಾಂಛನದಲ್ಲಿ ಕ್ರೌಡ್ ಫಂಡಿಂಗ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಎ.ಎಸ್. ಶೆಟ್ಟಿ ಅವರ ಛಾಯಾಗ್ರಹಣ, ಅಪರಾಜಿತ್ - ಜೋಸ್ ಜೋಸ್ಸೆ ಅವರ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಅವರ ಹಿನ್ನೆಲೆ ಸಂಗೀತ ಹಾಗೂ ವೆಂಕಿ ಯು ಡಿ ವಿ - ವಿಕಾಸ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ. ಪ್ರೇಮ್ ಸಿಡ್ಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು, ನಾಜರ್, ಶೃತಿ, ಮುಕುಂದ್, ಅವಿನಾಶ್, ಶಬರೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.