ತೂಗುದೀಪ ಪ್ರೊಡಕ್ಷನ್ಸ್‌ನ ಮತ್ತೊಂದು ಕಾಣಿಕೆ `ಒಂದೂರಲ್ಲಿ ಒಬ್ಬ ರಾಜಇದ್ದ`
Posted date: 19 Wed, Jun 2013 10:11:04 AM

ತೂಗುದೀಪ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾದ ‘ಬುಲ್‌ಬುಲ್‘ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಸಂಸ್ಥೆ ‘ಒಂದೂರಲ್ಲಿ ಒಬ್ಬ ರಾಜಇದ್ದ‘ ಎಂಬ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದೆ. ಶ್ರಾವಣಮಾಸದ ವರಮಹಾಮಲಕ್ಷ್ಮೀ ಹಬ್ಬದ ಶುಭದಿನದಂದು ಈ ಚಿತ್ರ ಆರಂಭವಾಗಲಿದೆ.
  ಮೀನಾತೂಗುದೀಪಶ್ರೀನಿವಾಸ್ ಈ ಚಿತ್ರದ ನಿರ್ಮಾಪಕರು. ‘ಬುಲ್‌ಬುಲ್‘ ಚಿತ್ರದ ಮೂಲಕ ತಂತ್ರಜ಼್ಞರನ್ನು ನಿರ್ಮಾಪಕರನಾಗಿ ಮಾಡಿದ ಖ್ಯಾತಿ ತೂಗುದೀಪ ಪ್ರೊಡಕ್ಷನ್ಸ್ ಸಂಸ್ಥೆಯದು. ಈ ಚಿತ್ರದ ಮೂಲಕ ಮಲ್ಲಿಕಾರ್ಜುನ್.ಬಿ.ಸಂಕನಗೌಡರ, ಚಿಂತನ್ ಹಾಗೂ ಶ್ರೀನಿವಾಸ್ ನಿರ್ಮಾಪಕರಾಗುತ್ತಿದ್ದಾರೆ.
  ‘ಜೊತೆಜೊತೆಯಲಿ‘, ‘ನವಗ್ರಹ‘ ಹಾಗೂ ‘ಸಾರಥಿ‘ಯಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ದಿನಕರ್‌ತೂಗುದೀಪ ಈ ಚಿತ್ರವನ್ನು   ನಿರ್ದೇಶಿಸುತ್ತಿದ್ದಾರೆ. ಆಗಸ್ಟ್‌ನಿಂದ ಆರಂಭವಾಗುವ ಈ ಚಿತ್ರಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ.
  ಡಿಂಪಲ್‌ಸ್ಟಾರ್ ದಿಗಂತ್ ಈ ಚಿತ್ರದ ನಾಯಕರಾಗಿದ್ದು, ರಚಿತಾರಾಂ(ಬುಲ್‌ಬುಲ್) ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.
   ವಿ.ಹರಿಕೃಷ್ಣರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನಕಾರರಾಗಿದ್ದಾರೆ. ಮಲ್ಲಿಕಾರ್ಜುನ್.ಬಿ.ಸಂಕನಗೌಡರ ಸಹ ನಿರ್ದೇಶನವಿರುವ ‘ಒಂದೂರಲ್ಲಿ ಒಬ್ಬ ರಾಜಇದ್ದ‘ ಚಿತ್ರಕ್ಕೆ ಚಿಂತನ್ ಸಂಭಾಷಣೆ ಬರೆಯುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed