ಪವಿತ್ರಾ ಲೋಕೇಶ್-ನರೇಶ್ ಪ್ರೇಮ್ ಕಹಾನಿ ಶುರುವಾಗಿದ್ದೇಗೆ…? `ಮತ್ತೆ ಮದುವೆ` ಟ್ರೇಲರ್ ರಿಲೀಸ್
Posted date: 11 Thu, May 2023 02:20:32 PM
ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟಿಸಿರುವ ಮತ್ತೆ ಮದುವೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ತಮ್ಮ ರಿಯಲ್ ಲೈಫ್ ಘಟನೆಯನ್ನು ಈ ಜೋಡಿ ಸಿನಿಮಾ ಮಾಡಿರುವುದು ಟ್ರೇಲರ್ ನಲ್ಲಿ ಗೊತ್ತಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಟೀಸರ್ ಬಹಳ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಬಿಡುಗಡೆಯಾಗಿರುವ ಮತ್ತೆ ಮದುವೆ ಮೊದಲ ನೋಟ ಸಂಚಲನ ಸೃಷ್ಟಿಸಿದೆ.

ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಪ್ರೀತಿ ಹುಟ್ಟಿದ್ದೇಗೆ? ಆ ಪ್ರೀತಿಗೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿಯೇ ವಿಲನ್ ಆಗಿ ನಿಂತಿರುವುದು. ಈ ಮೂವರ ಜಗಳ ಹಾದಿ ಬೀದಿ ರಂಪವಾಗಿದ್ದು. ಮೈಸೂರು ಹೋಟೆಲ್ ನಲ್ಲಿ ನಡೆದ ಹೈಡ್ರಾಮಾ ಕಹಾನಿ. ಈ ವಯಸ್ಸಿನಲ್ಲಿ ನರೇಶ್ ಮತ್ತೆ ಪ್ರೀತಿಯಲ್ಲಿ ಬೀಳೋದು. ಜನ ಹೀಯಾಳಿಸೋದು. ಹೀಗೆ ನಾನಾ ವಿಷಯಗಳನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.  

ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed