ಆ್ಯಕ್ಷನ್ ಡ್ರಾಮಾ ಕಥೆಯಲ್ಲಿ ``ಧೀರ``ನಾದ ಶಿವಣ್ಣ
Posted date: 13 Thu, Jul 2023 04:36:44 PM
 ಜುಲೈ 12, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ. ಈದಿನ ಶಿವಣ್ಣ ಅಭಿನಯಿಸಲಿರುವ  ಅನೇಕ ಚಲನಚಿತ್ರಗಳ, ಸಿನಿಮಾ ಶೀರ್ಷಿಕೆಗಳ‌ ಅನೌನ್ಸ್ ಮೆಂಟ್ ಆಗಿದೆ. ಆ ಚಿತ್ರಗಳಲ್ಲಿ "ಧೀರ" ಚಿತ್ರವೂ ಒಂದು. ಹೆಚ್.ಸಿ.ಶ್ರೀನಿವಾಸ್(ಶಿಲ್ಪ ಶ್ರೀನಿವಾಸ್) ಅರ್ಪಿಸುತ್ತಿರುವ ಈ ಚಿತ್ರವನ್ನು ಚಿಲ್ಲಿ ಫಿಲಂಸ್ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ ಸಾಗರ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ನವೀನ್ ಶೆಟ್ಟಿ  ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ‌. 
 
ಸಿನಿಮಾ ನಟನಾಗಬೇಕೆಂಬ ಕನಸು ಹೊತ್ತು 12 ವರ್ಷಗಳ ಹಿಂದೆ ಮಲೆನಾಡಿಂದ  ಬೆಂಗಳೂರಿಗೆ ಬಂದ ನವೀನ್ ಶೆಟ್ಟಿ ಅವರು  ಎಸ್.ನಾರಾಯಣ್, ಓಂಪ್ರಕಾಶ್ ರಾವ್, ಗಡ್ಡವಿಜಿ ಅವರ ಜೊತೆ ಸಹಾಯಕನಾಗಿ ಕೆಲಸ‌ ಮಾಡಿದ್ದಾರೆ. ಇಲ್ಲಿ ಬಂದಮೇಲೆ ನಿರ್ದೇಶನದ ಮೇಲೆ ಹೆಚ್ಚು ಆಸಕ್ತಿ ಹುಟ್ಟಿ ಅದರಲ್ಲೇ ಪರಿಣತಿ ಪಡೆದಿಕೊಂಡಿದ್ದಾರೆ. ನಂತರ ಓಟಿಟಿ ವೇದಿಕೆಗೆಂದೇ `ನಿಧಾನವಾಗಿ ಚಲಿಸಿ` ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಮ್ಮೆ ಆ ಚಿತ್ರವನ್ನು  ವೀಕ್ಷಿಸಿದ ಶಿವಣ್ಣ  ಮೆಚ್ಚಿ ಬೆನ್ನು ತಟ್ಟಿದ್ದಾರೆ. ಅದೇ ಸಮಯದಲ್ಲಿ ತಾವು ಶಿವಣ್ಣ ಅವರಿಗೆಂದೇ  ಮಾಡಿಕೊಂಡಿದ್ದ `ಧೀರ` ಕಥೆಯನ್ನು ಹೇಳಿ  ಅವರನ್ನು ಒಪ್ಪಿಸಿದ್ದಾರೆ. 
 
ತೆರೆಮೇಲೆ  ಶಿವಣ್ಣ ಅವರನ್ನು ಬೇರೆಯದೇ ರೀತಿ ತೋರಿಸಹೊಟಿರುವ ನವೀನ್ ಶಟ್ಟಿ, ಮಾಸ್, ಅಂಡರ್ ವರ್ಲ್ಡ್, ಮ್ಯೂಸಿಕಲ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಅನ್ನು ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ. ಕಲಿಯುಗ ಕರ್ಣ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರಕ್ಕೆ ಎಂ.ಎನ್. ಕೃಪಾಕರ್ ಅವರು  ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಧೀರ ಚಿತ್ರದ ಪ್ರಿಪ್ರೊಡಕ್ಷನ್ ವರ್ಕ್ ನಡೆಯುತ್ತಿದ್ದು, ಶೀಘ್ರದಲ್ಲೇ ನಾಯಕಿ ಸೇರಿದಂತೆ ಉಳಿದ ತಾಂತ್ರಿಕ ವರ್ಗವನ್ನು ಪ್ರಕಟಿಸಲಾಗುವುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed