ಹಾಸ್ಟೆಲ್ ಹುಡುಗರು ಚಿತ್ರದ ಪ್ರೊಮೋಷನ್ ವಿಡಿಯೋಲ್ಲಿ ತಾನು ಅಭಿನಯಿಸಿದ್ದ ದೃಶ್ಯಗಳನ್ನೇ ಚಿತ್ರದಲ್ಲೂ ಸಹ ತನ್ನ ಅನುಮತಿ ಇಲ್ಲದೆ
ಬಳಸಿದ್ದಾರೆ ಎಂದು ಕಮರ್ಶಿಯಲ್ ಕೋರ್ಟ್ ಮೆಟ್ಟಿಲೇರಿದ್ದ ನಟಿ ರಮ್ಯಾ, ಒಂದು ಕೋಟಿ ರೂ. ಪರಿಹಾರ ಕೊಡಬೇಕು ಅಂತ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ನಲ್ಲಿ ಗುರುವಾರ ನಡೆದ ಅರ್ಜಿ ವಿಚಾರಣೆಯಲ್ಲಿ ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ ಗೊಳಿಸಿದ ಕೋರ್ಟ್ ಹಾಸ್ಟೆಲ್ ಹುಡುಗರ ಪರ ಆದೇಶ ಹೊರಡಿಸಿದೆ. ಈಮೂಲಕ ರಮ್ಯಾ ಹಾಕಿದ್ದ ಕೇಸ್ ನ್ನು ತೆರವುಗೊಳಿಸಿದೆ.
ಹಾಸ್ಟೆಲ್ ಹುಡುಗರ ಪರವಾಗಿ ಲಾಯರ್ ವೇಲನ್ ಅವರು ವಾದ ಮಂಡಿಸಿದ್ದರು. ಶುಕ್ರವಾರ ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸಾಗಲಿದೆ.