ಸಿನಿಮಾ ಮಾಡುವುದೇ ಒಂದು ಸಾಹಸ. ಅದನ್ನು ಜನರಿಗೆ ತಲುಪಿಸುವುದು ಇನ್ನೂ ದೊಡ್ಡ ಸಾಹಸ. ಅದಕ್ಕೆ ಸರಿಯಾದ ರೀತಿಯ ಪ್ರಚಾರ ತುಂಬಾ ಅವಶ್ಯಕವಾಗಿರುತ್ತೆ. ವಿಶೇಷ ರೀತಿಯ ಚಿತ್ರಕ್ಕೆ ವಿಶಿಷ್ಟ ಪ್ರಕಾರದ ಪ್ರಚಾರ ಬೇಕು. ಅಂಥಾ ಅವಕಾಶ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ಸಿಕ್ಕಿದೆ. ಜು. ,21ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಹಲವಾರು ಸ್ಟಾರ್ ಗಳು ಪ್ರಚಾರಕ್ಕೆ ಕೈ ಜೋಡಿಸಿದ್ದಾರೆ.
ಆ ಕಾಲದಲ್ಲಿ ಅಪ್ಪು ನಟಿಸಿದ ಹುಡುಗರು ಸೂಪರ್ ಹಿಟ್ ಈಗ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಅಪ್ಪು ಆಶೀರ್ವಾದ.
ಆರಂಭದ ದಿನದಿಂದಲೂ ನಾನಾ ರೀತಿಯಲ್ಲಿ ಚಿತ್ರಪ್ರೇಮಿಗಳನ್ನು ಸೆಳೆಯುತ್ತಿರುವ ಈ ಚಿತ್ರಕ್ಕೆ ಪುನೀತ್ ರಾಜಕುಮಾರ್, ರಮ್ಯಾ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶೈನ್ ಶೆಟ್ಟಿ, ಪವನ್ ಕುಮಾರ್, ದಿಗಂತ್ ಹೀಗೆ ಬಹುತೇಕ ಸ್ಟಾರ್ಸ್ ಬೆಂಬಲ ಕೊಟ್ಟಿದ್ದಾರೆ.
ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಅವರು ಕಥೆ ಬರೆದು ನಿರ್ದೇಶಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಈ ಚಿತ್ರವನ್ನು ಪ್ರತಿ ಬಾರಿ ಯುನಿಕ್ ಕಾನ್ಸೆಪ್ಟ್ ಮೂಲಕ ಪ್ರಚಾರ ಮಾಡುತ್ತಿರುವ "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ" ಚಿತ್ರವನ್ನು ರಕ್ಷಿತ್ ಶೆಟ್ಟಿ ಅವರು ತಮ್ಮದೇ ಆದ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ್ ಅವರ ಛಾಯಾಗ್ರಹಣ, ಸುರೇಶ್ ಅವರ ಸಂಕಲನವಿರುವ ಈ ಚಿತ್ರದಲ್ಲಿ ಮೋಹಕತಾರೆ ರಮ್ಯಾ ಅವರು ಲೆಕ್ಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ.
ಕಿರಿಕ್ ಮಾಡುವ ವಾರ್ಡನ್ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್ ಹುಡುಗರು ಏನೆಲ್ಲಾ ಮಾಡುತ್ತಾರೆ. ಅದರಿಂದ ಮುಂದೆ ಏನು ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್ ಸಾಥ್ ಕೊಟ್ಟಿರುವ ಈ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಹಾಗೂ ಇನ್ನಿತರರು ಸೇರಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದು, ಇದೇ 21 ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.