ಮಧ್ವನವಮಿ ಶುಭಸಂದರ್ಭದಲ್ಲಿ``ಹನುಮ ಭೀಮ ಮಧ್ವ``ಚಿತ್ರದ ಬಗ್ಗೆ ಅಧಿಕೃತ ಘೋಷಣೆ .
Posted date: 31 Tue, Jan 2023 09:39:29 AM
ವಾಯುದೇವರು ಮೊದಲು ಹನುಮನಾಗಿ ಅವತರಿಸಿ‌ ಶ್ರೀರಾಮದೇವರನ್ನು ಸೇವೆ ಮಾಡುತ್ತಾರೆ. ನಂತರ ದ್ವಾಪರದಲ್ಲಿ ಭೀಮಸೇನನಾಗಿ ಶ್ರೀ ಕೃಷ್ಣನನ್ನು, ಆನಂತರ ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಅವತರಿಸಿ ಶ್ರೀವೇದವ್ಯಾಸ ದೇವರನ್ನು ಭಜಿಸುತ್ತಾರೆ. ಇಂತಹ ಅಪರೂಪದ ಮೂರು ಅವರತಾರಗಳ ಕುರಿತಾದ ಭಕ್ತಿಪ್ರಧಾನ ಚಿತ್ರವೊಂದು ಸದ್ಯದಲ್ಲೇ ಆರಂಭವಾಗಲಿದೆ.

ಶ್ರೀಗಂಧ ಪಿಕ್ಚರ್ಸ್ ಲಾಂಛನದಲ್ಲಿ ಡಾ||ರಮೇಶ್ ಕಶ್ಯಪ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಡಾ|ಮಧುಸೂದನ್ ಹವಾಲ್ದಾರ್ ನಿರ್ದೇಶಿಸುತ್ತಿದ್ದಾರೆ. ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದಲ್ಲಿ ಮಹಾಮಹಿಮರ ಮಹಿಮೆ ಸಾರುವ  ಎಂಟು ಹಾಡುಗಳಿರುತ್ತದೆ.‌ ವಿಜಯ್ ಕೃಷ್ಣ ಡಿ ಸಂಗೀತ ನೀಡಲಿದ್ದಾರೆ.  ನಾರಾಯಣ್ ಸಿ ಛಾಯಾಗ್ರಹಣ ಹಾಗೂ ದೊರೈರಾಜ್(ಆರ್ ಡಿ ರವಿ)ಅವರ ಸಂಕಲನವಿರುತ್ತದೆ. 

ಶ್ರೀಜಗನ್ನಾಥದಾಸರು, ಶ್ರೀವಿಜಯದಾಸರು, ಶ್ರೀಪ್ರಸನ್ನವೆಂಕಟದಾಸರು ಹೀಗೆ ಸಾಲುಸಾಲು ದಾಸವರೇಣ್ಯರ ಚಿತ್ರಗಳನ್ನು ನಿರ್ದೇಶಿಸಿರುವ ಮಧುಸೂದನ್ ಹವಾಲ್ದಾರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಸದ್ಯದಲ್ಲೇ ಆನೆಗೊಂದಿ, ಕನಕಗಿರಿ ಬೀಳಗಿ, ಹೊಸಪೇಟೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ನೂತನ ಪ್ರತಿಭೆಗಳೆ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed