ಬೆಂಗಳೂರು 69 ಹೆಣ್ಣು ಹೊನ್ನು ನಂಬಿ ಕೆಟ್ಟವರು...
Posted date: 11 Sat, Feb 2023 � 09:12:11 AM

ಪ್ರೇಮ, ಕಾಮ ಮತ್ತು ಹಣ ಎನ್ನುವುದು ಮನುಷ್ಯನ ನಡುವಿನ  ಸ್ನೇಹ, ವಿಶ್ವಾಸ ಸಂಬಂಧಗಳನ್ನು  ಹೇಗೆ ಅಳಿಸಿಹಾಕುತ್ತದೆ ಎಂಬುದನ್ನು ಇಬ್ಬರು ಸ್ನೇಹಿತರು ಹಾಗೂ ಯುವತಿಯೋರ್ವಳ ನಡುವೆ ನಡೆಯುವ  ಥ್ರಿಲ್ಲರ್  ಕಥೆಯ ಮೂಲಕ ನಿರ್ದೇಶಕ ಕ್ರಾಂತಿ ಚೈತನ್ಯ ಹೇಳಿದ್ದಾರೆ.

ಈವಾರ ತೆರೆಕಂಡಿರುವ ಬೆಂಗಳೂರು ೬೯ ಚಿತ್ರದ ಶೀರ್ಷಿಕೆಯ ವಿವರವೂ ತುಂಬಾ ಸರಳ,  ಬೆಂಗಳೂರಿನ ಜಯನಗರ ಏರಿಯಾದ ಪಿನ್‌ಕೋಡ್ ಸಂಖ್ಯೆ ಇದಾಗಿದ್ದು   ಈ ಪಿನ್‌ಕೋಡ್‌ ಸಂಖ್ಯೆಯನ್ನು ಚಿತ್ರದಲ್ಲಿ ಹೇಗೆ, ಯಾವರೀತಿ  ಬಳಸಿಕೊಂಡಿದ್ದಾರೆ ಎಂದು ತಿಳಿಯಲು  ಆ ಸಿನಿಮಾ ನೋಡಲೇಬೇಕು.  ವಿಶೇಷ ಎಂದರೆ ಇಡೀ ಚಿತ್ರದಲ್ಲಿರುವುದು ಕೇವಲ ೫ ಪಾತ್ರಗಳಷ್ಟೇ. ಮೂರು ಮುಖ್ಯ ಪಾತ್ರಗಳಿದ್ದು, ಇನ್ನೆರಡು ಪಾತ್ರಗಳು ಒಂದೆರಡು ದೃಶ್ಯಗಳಲ್ಲಿ  ಬಂದುಹೋಗುತ್ತವೆ. ಜೊತೆಗೊಂದು ಹಾಡಲ್ಲಿ  ಯುರೋಪಿನ ಹೆಸರಾಂತ ಬೆಲ್ಲಿ ಡ್ಯಾನ್ಸರ್ ಹಾಗೂ ಮಾಡೆಲ್ ಗ್ರೇಸಿಲಾ ಪಿಶ್ನರ್ ತನ್ನ ಸೊಂಟ ಬಳುಕಿಸಿದ್ದಾರೆ. ಇದಿಷ್ಟು ಪಾತ್ರಗಳ‌ ಮೂಲಕ ಎರಡು ಗಂಟೆಗಳವರೆಗೆ  ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ  ಕೂರಿಸುವುದು ಅಷ್ಟು ಈಜಿ ಅಲ್ಲ, ನಿರ್ದೆಶಕ ಕ್ರಾಂತಿ ಚೈತನ್ಯ ಅದನ್ನು  ಮಾಡಿದ್ದಾರೆ. ಅನಿವಾಸಿ ಕನ್ನಡಿಗ ಜಾಕೀರ್ ಹುಸೇನ್ ಕರೀಂಖಾನ್ ಕನ್ನಡದ ಅಭಿಮಾನದಿಂದ   ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು  ತೆರೆಮೇಲೆ ತಂದಿದ್ದಾರೆ.  ನಾಯಕ ಡೇವಿಡ್(ಪವನ್ ಶೆಟ್ಟಿ) ಒಬ್ಬ ಜಿಮ್ ತರಬೇತುದಾರ, ಇನ್ನೊಬ್ಬ ನಾಯಕ  ಗಾಜಿ(ಶಫಿ)  ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದವರು,  ಜೈಲಿನಲ್ಲಿ ಇವರಿಬ್ಬರ ಪರಿಚಯವಾಗಿ ಸ್ನೇಹ ಬೆಳೆಯುತ್ತದೆ.

 

ಗಾಜಿ ಒಂದು ದೊಡ್ಡ ಮೊತ್ತಕ್ಕಾಗಿ ಸ್ಕೆಚ್ ಹಾಕುತ್ತಾನೆ. ಅದು ಮಿನಿಸ್ಟರ್ ಮಗಳು ರಮ್ಯ(ಅನಿತಾಭಟ್)ಳನ್ನು  ಕಿಡ್ನಾಪ್ ಮಾಡಿ ೨ ಕೋಟಿ ಹಣಕ್ಕೆ ಬೇಡಿಕೆ ಇಡುವುದು. ಇಂಥ ಕೆಲಸ ಇಷ್ಟವಿಲ್ಲದಿದ್ದರೂ ಹಣದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಒಂದೊಳ್ಳೆ ಅವಕಾಶ ಎಂದು  ಡೇವಿಡ್ ಗಾಜಿ ಜೊತೆ  ಕೈ ಜೋಡಿಸಲು ಒಪ್ಪಿಕೊಳ್ಳುತ್ತಾನೆ.  ಯೋಜನೆಯಂತೆ ಜಾಗಿಂಗ್ ಹೋಗುವಾಗ ರಮ್ಯಳನ್ನು ಕಿಡ್ನಾಪ್ ಮಾಡಿ ಮೊದಲೇ ಪ್ಲಾನ್ ಮಾಡಿಕೊಂಡಂತೆ ಒಂದು ರೂಮ್‌ನಲ್ಲಿ ಆಕೆಯನ್ನು  ಲಾಕ್ ಮಾಡಿಡುತ್ತಾರೆ.  ನಂತರ ಮಿನಿಸ್ಟರ್‌ಗೆ ಕಾಲ್ ಮಾಡಿ ೨ ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿ ಪೋಲೀಸ್ ಅಂತ ಹೋದರೆ ನಿಮ್ಮ ಮಗಳನ್ನು ಕೊಂದುಬಿಡುವುದಾಗಿ ಎಚ್ಚರಿಸುತ್ತಾರೆ.  ಮಗಳ ಜೀವ ಉಳಿದರೆ ಸಾಕೆಂದು  ಮಂತ್ರಿ ೨ ಕೋಟಿ ನೀಡಲು ಒಪ್ಪಿಕೊಳ್ಳುತ್ತಾನೆ.

ಮರುದಿನ ಹಣವನ್ನು ಎಲ್ಲಿ ತರಬೇಕು ಎನ್ನುವ ಪ್ಲಾನ್ ಕೂಡ ರೆಡಿಯಾಗತ್ತದೆ. ಆ ಹಣವನ್ನು ಹೇಗೆ ಕಲೆಕ್ಟ್ ಮಾಡಬೇಕು  ಎಂಬ  ಬಗ್ಗೆಯೂ ಮಾತುಕತೆ ನಡೆಯುತ್ತದೆ, ಈ ಹಂತದಲ್ಲಿ ಗಾಜಿ ಎರಡುಬಾರಿ ರೂಮ್ನಿಂದ ಹೊರ ಹೋಗಿ ಮುಂದಿನ ಕೆಲಸಗಳ ಬಗ್ಗೆ  ತಯಾರಿ ಮಾಡಿಕೊಂಡು ಬರುತ್ತಾನೆ. ಈ ಸಮಯದಲ್ಲಿ ರಮ್ಯ ಎಲ್ಲೂ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಡೇವಿಡ್‌ಗೆ ಒಪ್ಪಿಸಿ ಹೋಗುತ್ತಾನೆ. ಹೀಗೆ ಗಾಜಿ ಹೋದ ಸಂದರ್ಭದಲ್ಲಿ  ರಮ್ಯ, ಡೇವಿಡ್  ನಡುವೆ  ಒಂದಷ್ಟು ಘರ್ಷಣೆ ನಡೆಯುತ್ತದೆ. ನಂತರ ಆಕೆ ತಾನು ಪ್ರೀತಿಸಿದ ಹುಡುಗಿ ಎಂದು ಡೇವಿಡ್ ಗೆ ಗೊತ್ತಾಗುತ್ತದೆ. ಗಾಜಿಗೆ ಗೊತ್ತಾಗದಂತೆ ತಾವು ಇಲ್ಲಿಂದ ಹೇಗೆ ಎಸ್ಕೇಪ್ ಆಗೋದು ಎಂದು ಇಬ್ಬರೂ ಸೇರಿ ಪ್ಲಾನ್ ಮಾಡುತ್ತಾರೆ.   ೨ ಕೋಟಿ ಹಣ ಗಾಜಿಯ  ಕೈ ಸೇರುತ್ತದೆಯೇ,? ಅದರಲ್ಲಿ  ಡೇವಿಡ್ ಪಾಲೂ ಸಿಗುತ್ತಾ? ಅಲ್ಲದೆ ಡೇವಿಡ್, ಗಾಜಿ  ರಮ್ಯ ನಡುವೆ ಇರುವ  ಸಂಬಂಧವೇನು ? ಈ ಎಲ್ಲ ಪ್ರಶ್ನೆಗಳಿಗೆ ಚಿತ್ರದ ಕ್ಕೆ ಮ್ಯಾಕ್ಸ್   ಉತ್ತರ ಹೇಳುತ್ತದೆ. ಚಿತ್ರದ ಕೊನೆಯಲ್ಲಿ ಯಾರೂ ನಿರೀಕ್ಷಿಸಿರದಂಥ ಟ್ವಿಸ್ಟ್ ನ್ನು ನಾಯಕಿ  ರಮ್ಯ ನೀಡುತ್ತಾಳೆ. ಚಿತ್ರದ  ಹಾಡುಗಳು ಕೇಳಲು ಇಂಪಾಗಿ, ನೋಡಲು ತಂಪಾಗಿವೆ. ತೆಲುಗು ನೂಲದ ನಟ  ಶಫಿ  ತಮಗೆ ಸಿಕ್ಕ ಅವಕಾಶದಲ್ಲೇ  ಅದ್ಭುತ  ಅಭಿನಯ ನೀಡಿದ್ದಾರೆ. ಥೇಟರಿನಿಂದ ಹೊರಬಂದರೂ ವೀಕ್ಷಕರ  ಮನದಲ್ಲಿ  ಕಾಡುತ್ತಾರೆ.  ದಂಡುಪಾಳ್ಯದ  ಜೈದೇವ್ ಮೋಹನ್  ಅವರದು ಚಿಕ್ಕ ಪಾತ್ರವಾದರೂ ಕಥೆಗೆ ಟ್ವಿಸ್ಟ್ ನೀಡುತ್ತದೆ.  ಉಳಿದಂತೆ  ನಾಯಕಿ ಅನಿತಾಭಟ್ ತಮ್ಮ ಮಾದಕ ಮೈಮಾಟದಿಂದಲೇ  ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ.  ಚಿತ್ರದ ಕ್ಯಾಮೆರಾವರ್ಕ್ ಉತ್ತಮವಾಗಿದೆ, ಹಾಡುಗಳು ಇಷ್ಟವಾಗುತ್ತವೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed