ಸೆಪ್ಟಂಬರ್ 13 ರಿಂದ ಸಿರಿಕನ್ನಡ ಕಿರುತೆರೆಯ ಮೇಲೆ ಹೊಸ ಕಾರ್ಯಕ್ರಮಗಳು
Posted date: 15 Wed, Sep 2021 06:10:40 PM
ಇದೇ ಸೆಪ್ಟಂಬರ್ 13 ರಿಂದ ಸಿರಿಕನ್ನಡ ಕಿರುತೆರೆಯ ಮೇಲೆ ಹೊಸ ಕಾರ್ಯಕ್ರಮಗಳು ಮೂಡಿಬರಲಿವೆ. ರಾತ್ರಿ 9 ಗಂಟೆಗೆ “ಧೃವ ನಕ್ಷತ್ರ” ಮೆಗಾ ಧಾರಾವಾಹಿ ಪ್ರಸಾರವಾಗಲಿದ್ದು, ಈ ಧಾರಾವಾಹಿ ಕಿರುತೆರೆಯ ಹೆಸರಾಂತ ನಟ-ನಟಿಯರಾದ ಮೈಕೋ ಮಂಜು, ಸ್ಪಪ್ನರಾಜ್, ಶ್ರೀಕಾಂತ್ ಹೆಬ್ಳಿಕರ್, ಅಲಕಾನಂದ್ ಮುಂತಾದವರು ತಾರಾಬಳಗದಲಿದ್ದು, ಅಕ್ಕ-ತಂಗಿ, ಅತ್ತೆ-ಸೊಸೆಯಾಗಿ ಬರುವಂತಹ ಅಪರೂಪದ ಕಥಾ ಹಂದರವನ್ನು ಹೊಂದಿದೆ.

ರಾತ್ರಿ 9.30ಕ್ಕೆ “ಪ್ರೇಮ್ ಜೊತೆ ಅಂಜಲಿ” ಮುಗ್ಧ ಮನಸುಗಳ ಮುದ್ದಾದ ಪ್ರೇಮ ಕಥೆಯ ಮೆಗಾ ಧಾರಾವಾಹಿ ಪ್ರಸಾರವಾಗಲಿದ್ದು, ಈ ಧಾರಾವಾಹಿಯಲ್ಲಿ ಕಿರುತೆರೆ ಮತ್ತು ಹಿರಿತೆರೆಯ ಹೆಸರಾಂತ ನಟ-ನಟಿಯರಾದ ಪದ್ಮಜಾರಾವ್, ಮಂಜುನಾಥ್ ಹೆಗ್ಗಡೆ, ಪ್ರವೀಣ್ ಡಿ ರಾವ್ ಮುಂತಾದವರೊಂದಿಗೆ ಹೊಸ ಪ್ರತಿಭೆಗಳು ನಟಿಸಿದ್ದು, ವೀಕ್ಷಕರ ಮನಗೆಲ್ಲುವ ಕಥಾಹಂದರವನ್ನು ಹೊಂದಿದೆ.

ಇನ್ನು ಕನ್ನಡದ ಮನೆ-ಮನಗಳಲ್ಲಿ ತಮ್ಮ ಹಾಸ್ಯದ ಕಚಗುಳಿಯನ್ನು ಇಟ್ಟು ರಂಜಿಸಿದ ಪ್ರಾಣೇಶ್, ಮುಖ್ಯಮಂತ್ರಿ ಚಂದ್ರು, ಎಮ್.ಎಸ್.ನರಸಿಂಹಮೂರ್ತಿ, ಸುಧಾ ಬರಗೂರ್, ರಿಚರ್ಡ್ ಲೂಯಿಸ್ ಮುಂತಾದ ಹಾಸ್ಯ ದಿಗ್ಗಜರು ನಡೆಸಿಕೊಡೋ “ಹಾಸ್ಯ ದರ್ಬಾರ್”  ಸೆಪ್ಟೆಂಬರ್ 13ರಿಂದ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

ಈ ಹೊಸ ಕಾರ್ಯಕ್ರಮಗಳೊಟ್ಟಿಗೆ ಮತ್ತಷ್ಟು ವಿಭಿನ್ನ ಕ್ರಿಯಾತ್ಮಕ ಕಾರ್ಯಕ್ರಮಗಳು ಸಿರಿಕನ್ನಡ ವಾಹಿನಿಯಲ್ಲಿ ಮೂಡಿ ಬರಲಿವೆ ಎಂದು ವಾಹಿನಿ ಮುಖ್ಯಸ್ಥರಾದ ಸಂಜಯ್ ಶಿಂಧೆ ಅವರು ಹೇಳುತ್ತಾರೆ.

ಹೀಗೆ ಹಂತ ಹಂತವಾಗಿ ಕಾರ್ಯಕ್ರಮಗಳ ವ್ಯಾಪ್ತಿ ಮತ್ತು ವಿಶೇಷತೆಗಳನ್ನು ಹೆಚ್ಚಿಸುತ್ತಾ, ಉತ್ಕೃಷ್ಠ ಮನರಂಜನ ಕಾರ್ಯಕ್ರಮಗಳ ಕನಸು ಹೊತ್ತ ಸಿರಿಕನ್ನಡವನ್ನು ವೀಕ್ಷಕರು ಹರಸಿ ಹಾರೈಸಬೇಕೆಂಬುದು ನಮ್ಮ ಆಶಯ.

ನುಡಿ ಕನ್ನಡ.. ನಡೆ ಕನ್ನಡ.. ನೋಡ್ತಾ ಇರಿ ಸಿರಿಕನ್ನಡ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed