ಮೈಸೂರಿನಲ್ಲಿ `ಬಹದ್ದೂರ್ `
Posted date: 06 Mon, May 2013 � 05:46:34 PM

ಲೆಜೆಂಡ್ ಇಂಟರ್ ನ್ಯಾಷನಲ್ ಗ್ರೂಪ್ ಲಾಂಛನದಲ್ಲಿ ರಜನೀಶ್, ಪ್ರಸಾದ್‌ರಾವ್, ಅಂಬರೀಶ್, ಭಾಸ್ಕರ್, ಅವಿನಾಶ್ ಮತ್ತು ಶ್ರೀನಿವಾಸ್ ನಿರ್ಮಿಸುತ್ತಿರುವ ‘ಬಹದ್ದೂರ್’ ಚಿತ್ರಕ್ಕೆ ಮೇ ಒಂಭತ್ತರಿಂದ ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.  .     
      ‘ಅದ್ದೂರಿ’ ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಧ್ರುವಸರ್ಜಾ ಈ ಚಿತ್ರದ ನಾಯಕ. ರಾಧಿಕಾಪಂಡಿತ್ ನಾಯಕಿ. ‘ಅದ್ದೂರಿ’ ಅರ್ಜುನ್‌ಗೆ ಸಹಾಯಕರಾಗಿ ಹಾಗೂ ರಜನಿಕಾಂತ, ಪುಲಕೇಶಿ, ವರದನಾಯಕ ಮುಂತಾದ ಚಿತ್ರಗಳಿಗೆ ಹಾಡು ಬರೆದಿರುವ ಚೇತನ್‌ಕುಮಾರ್ ಈ ಚಿತ್ರದ ನಿರ್ದೇಶಕ. ‘ಬಹದ್ದೂರ್’ ಚೇತನ್‌ಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರ.
      ಅರ್ಜುನ್‌ಜನ್ಯರ ಸಂಗೀತವಿರುವ ಈ ಚಿತ್ರಕ್ಕೆ ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣವಿದೆ. ರವಿವರ್ಮ ಸಾಹಸ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಹಾಗೂ ಎ.ಹರ್ಷ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed