ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ನಾಳೆಯಿಂದ
Posted date: 16 Thu, Sep 2021 09:46:49 AM
ಸೆವೆನ್ ರಾಜ್ ಪ್ರೊಡಕ್ಷನ್ ಅಡಿಯಲ್ಲಿ ರೆಡ್ ಅಂಡ್‌ ವೈಟ್ ಖ್ಯಾತಿಯ ಸೆವೆನ್ ರಾಜ್‌ ಅವರ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ ಚಿತ್ರ. ಇದೇ 17 ರಂದು ನಾಳೆಯಿಂದ  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಆಸ್ಕರ್ ಕೃಷ್ಣ ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿರುವ ಲೋಕೇಂದ್ರಸೂರ್ಯ ಮತ್ತೊಬ್ಬ ನಾಯಕನಾಗಿದ್ದು, ಗೌರಿ ನಾಯರ್ ನಾಯಕಿಯಾಗಿ ನಟಿಸಿದ್ದಾರೆ. ನಿರ್ಮಾಪಕ ಸೆವೆನ್ ರಾಜ್ ಚಿತ್ರದಲ್ಲಿ ಖಳನಾಯನಾಗಿ ಕಾಣಿಸಿಕೊಂಡಿದ್ದಾರ 
ಕಾಮಿಡಿ ಜೊತೆಗೆ ಕ್ರೈಮ್, ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಸ್ನೇಹ ಸಂಬಂಧ, ಪ್ರೀತಿ, ಪ್ರೇಮ, ರಾಜಕೀಯ. ಕ್ರೈಮ್ ಮತ್ತು ಈಗಿನ ಪೊಲೀಸ್ ವ್ಯವಸ್ಥೆಯಂಥ ಹಲವಾರು ಅಂಶಗಳು ಹೇಗೆ ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ ಎಂಬುದನ್ನು ಹೇಳಲಾಗಿದೆ. 
ಅನಂತ್ ಆರ್ಯನ್ ಅವರ ಸಂಗೀತ, ಗಗನ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದ್ದು, ಬೆಂಗಳೂರು, ತುಮಕೂರು, ಕುಣಿಗಲ್ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed