ಬ್ಯಾಂಕಾಕ್‌ನಲ್ಲಿ ?ಬಿಂದಾಸ್ ಹುಡುಗಿ
Posted date: 21/April/2009

 ‘ಬ್ಲಾಕ್ ಅಂಡ್ ವೈಟ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಪ್ರಿಯಾ ಹಾಸನ್ ಕನ್ನಡ ಚಿತ್ರರಂಗದಲ್ಲಿ ‘ಜಂಭದ ಹುಡುಗಿಯಾಗಿ ಹೆಸರಾದವರು. ಜಂಭದ ಹುಡುಗಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಅವರು ಕಾರಣಾಂತರಗಳಿಂದ ಚಿತ್ರದ ನಿರ್ದೇಶಕಿಯೂ ಆದರು. ಪ್ರಸ್ತುತ ಅವರು ಅಭಿನಯಿಸಿ ನಿರ್ದೇಶಿಸುತ್ತಿರುವ ‘ಬಿಂದಾಸ್ ಹುಡುಗಿ ಚಿತ್ರಕ್ಕೆ ಬ್ಯಾಂಕಾಕ್, ಪಟ್ಟಾಯ ಹಾಗೂ ಪುಕ್ಕಟ್‌ನಲ್ಲಿ ಎರಡು ಹಾಡುಗಳ ಚಿತ್ರೀಕರಣ ಪೂರ್ಣವಾಗಿದೆ.
     ರಾಂ ನಾರಾಯಣ್ ರಚಿಸಿರುವ ‘ಕಣ್ಣಲ್ಲಿ ಕಣ್ಣಿಟ್ಟು ನೋಡೆ - ನನ್ನ ಮನಸಲ್ಲಿ ಮನಸಿಟ್ಟು ನೋಡು ಹಾಗೂ ‘ನಾ ನಿನ್ನ ನೋಡಿದ ದಿನಾಂಕ - ನನ್ನಲ್ಲಿ ಪ್ರೀತಿ ಹುಟ್ಟಿತಾಗ ಎಂಬ ಎರಡು ಗೀತೆಗಳಲ್ಲೂ ನಾಯಕಿ ಪ್ರಿಯಾ ಹಾಸನ್ ಅಭಿನಯಿಸಿದ್ದು ಹರ್ಷ ಈ ಗೀತೆಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ವಿದೇಶದಲ್ಲಿ ನಡೆದ ಈ ಹಾಡುಗಳ ಚಿತ್ರೀಕರಣಕ್ಕೆ ೧೭ ಸದಸ್ಯರ ತಂಡ ಪ್ರಯಾಣ ಬೆಳೆಸಿತ್ತು ಎಂದು ನಿರ್ಮಾಪಕರು ತಿಳಿಸಿದ್ದಾರೆ.
     ಶ್ರೀ ಪ್ರಿಷ್ಮೋ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗೌರಮ್ಮ ಹಾಗೂ ಮೋಹನ್ ಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬಾಲಕೃಷ್ಣ, ರವಿಕುಮಾರ್ ಮತ್ತು ದೇವಿಪ್ರಸಾದ್ ಶೆಟ್ಟಿ ಅವರ ಸಹ ನಿರ್ಮಾಣವಿದೆ. ಪ್ರಿಯಾ ಹಾಸನ್ ಕತೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ ‘ಬಿಂದಾಸ್ ಹುಡುಗಿಗೆ ಯರ್ರಾ ರಮೇಶ್ ಅವರ ಸಂಗೀತವಿದೆ. ಆರ್.ಗಿರಿ ಛಾಯಾಗ್ರಹಣ, ಬಾಬು ಸಂಕಲನ, ಕೌರವ ವೆಂಕಟೇಶ್ ಸಾಹಸ, ಬಿ.ಎ.ಮಧು ಸಂಭಾಷಣೆ, ರಾಂ ನಾರಾಯಣ್, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಗೀತರಚನೆ ಹಾಗೂ ಶೃಂಗೇರಿ ಚಂದ್ರು ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಪ್ರಿಯಾ ಹಾಸನ್, ನೀನಾಸಂ ಅಶ್ವತ್, ಭವ್ಯ, ಲೀಲಾವತಿ, ಸುರೇಶ್ ಮಂಗಳೂರು, ಗಣೇಶ್ ರಾವ್, ಮೋಹನ್ ಜುನೇಜ, ಶರಣ್, ಶಂಕರ್ ಅಶ್ವತ್, ಕಮಲ, ರಾಮಮೂರ್ತಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed