ಶಿವಣ್ಣ- ಅಜಯರಾವ್ ಹೊಸ ಚಿತ್ರದ ಫಸ್ಟ್ ಲುಕ್ ಬಿಡುಗಡೆ
Posted date: 13 Thu, Jul 2023 04:29:48 PM
ನನ್ ಮಗಳೇ ಹೀರೋಯಿನ್, ಎಂಆರ್.ಪಿ. ಯಂಥ  ಹಾಸ್ಯಮಯ ಚಲನಚಿತ್ರಗಳನ್ನು ನಿರ್ದೇಶನ‌ ಮಾಡಿಕೊಂಡು ಬಂದಿದ್ದ  ಎಸ್.ಕೆ. ಬಾಹುಬಲಿ ಅವರು ಇದೇ ಮೊದಲಬಾರಿಗೆ ಮಲ್ಟಿ ಸ್ಟಾರ್  ಇಟ್ಟುಕೊಂಡು ಮಾಸ್ ಎಂಟರ್ಟೈನರ್ ಸಿನಿಮಾಗೆ ಆಕ್ಷನ್ ಕಟ್  ಹೇಳಲು ಹೊರಟಿದ್ದಾರೆ. 
 
ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  ಹಾಗೂ ಕೃಷ್ಣ ಅಜಯ್ ರಾವ್ ಇಬ್ಬರ ಕಾಂಬಿನೇಷನ್ ನಲ್ಲಿ  ಹೊಸ ಚಿತ್ರವೊಂದನ್ನು  ಬಾಹುಬಲಿ ನಿರ್ದೇಶನ‌ ಮಾಡುತ್ತಿದ್ದಾರೆ. ನಟ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಇಂದು ಬಿಡುಗಡೆ ಮಾಡಲಾಗಿದೆ.
 
ಕುತೂಹಲ ಕೆರಳಿಸುವ ಆಕ್ಷನ್, ಡ್ರಾಮಾ ಕಥಾಹಂದರ ಒಳಗೊಂಡ ಈ ಚಿತ್ರಕ್ಕೆ ಬಾಹುಬಲಿ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಪಿ.ಕೆ. ಪ್ರೊಡಕ್ಷನ್ಸ್  ಬ್ಯಾನರ್  ಮೂಲಕ  ಕಿರಣ್ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಹಿತಿ ಹೊರಬೀಳಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed