'ಪರಿ' ಚಿತ್ರದ ಧ್ವನಿ ಸುರುಳಿ ಬಿಡುಗಡೆ, ಕ್ಯಾಲಿಫ಼ೋರ್ನಿಯಾದ ಪಾಲೊ ಆಲ್ಟೊದಲ್ಲಿನ ಗಣ್ಣ್ ಹೈಸ್ಕೂಲ್ ಆವರಣದಲ್ಲಿ ಅಧ್ದೂರಿಯಾಗಿ ಅನಾವರಣಗೊಂಡಿತು.
Posted date: 16 Fri, Sep 2011 ? 01:34:00 PM

'ಪರಿ' ಚಿತ್ರದ ಧ್ವನಿ ಸುರುಳಿ ಬಿಡುಗಡೆ, ಕ್ಯಾಲಿಫ಼ೋರ್ನಿಯಾದ ಪಾಲೊ ಆಲ್ಟೊದಲ್ಲಿನ ಗಣ್ಣ್ ಹೈಸ್ಕೂಲ್ ಆವರಣದಲ್ಲಿ ಅಧ್ದೂರಿಯಾಗಿ ಅನಾವರಣಗೊಂಡಿತು. ಇದೆ ೧೦ನೆ ತಾರಿಖು ಏರ್ಪಡಿಸಲಾದ ಕನ್ನಡ ಚಿತ್ರರಂಗದ ಇತಿಹಾಸವೇ ಬರೆದಂತ ಒಂದು ವಿಭಿನ್ನ ಕಾರ್ಯಕ್ರಮದಲ್ಲಿ 'ಪರಿ' ಚಿತ್ರದ ಹಾಡುಗಳು ಕೇಳಿಸಲಾಯಿತು. ಸುಮಾರು ೧೦೦೦ಕ್ಕು ಹೆಚ್ಚು ಜನ ಸೆರಿದ ಈ ಕಾರ್ಯಕ್ರಮದಲ್ಲಿ ಬೆ ಏರಿಯಾ ನಲ್ಲಿ ನೆಲೆಸಿದಂತಹ ಕನ್ನಡಿಗರಲ್ಲದೇ ಬೇರೆ ರಾಜ್ಯದವರು ಹಾಗು ಕೆಲವರು ಅಮೆರಿಕನ್ಸ್ ಸೇರಿದ್ದರು.

ಮುಖ್ಯ ಅತಿಥಿಗಳಾಗಿ ಬಂದಂತಹ ಶ್ರೀಯುತ ಬಿ ವಿ ಜಗದೀಶ್ - ಕನ್ನಡಿಗರಾದ ಇಲ್ಲಿನ ಹೆಸರಾಂತ ಉದ್ಯಮಿ - ಅವರು ಹಾಡುಗಳ ತುಣುಕಗಳನ್ನ ಕೇಳಿ -“ I have fallen in love with Parie Songs” ಅಂದರು. 'ಪರಿ' ಚಿತ್ರ ಬಿಡುಗಡೆ ಆದ ದಿನ ನಾನೇ ಮೊದಲು ಟಿಕೆಟ್ ತೆಗೆಸಿ ಸಿನಿಮಾ ನೋಡುತ್ತೇನೆ ಎಂದು ತಮ್ಮ ಕಾತರದ ನಿರೀಕ್ಷೆಯನ್ನು ವ್ಯಕ್ತ ಪಡಿಸಿದರು.

ಕಾರೆನ್ ವಾಸುದೆವ್, ಇವರು ಅಮೆರಿಕನ್ ಆದರು ಕನ್ನಡದವರನ್ನು ಮದುವೆ ಆಗಿ, ಕನ್ನಡ ಭಾಷೆ ಹಾಗು ಸಂಸ್ಕೃತಿಯಲ್ಲಿ ತುಂಬು ಆಸಕ್ತಿ ಉಳ್ಳವರು. ಇವರು ಕೂಡ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದು, 'ಪರಿ' ಚಿತ್ರದ ಹಾಡುಗುಳನ್ನ ಮೆಚ್ಚಿ ಗುನುಗುನಿಸುತಿದ್ದರು. ಕನ್ನಡ ಕೂಟ - ನಾರ್ತ್ ಕ್ಯಲಿಫ಼ೋರ್ನಿಯದ ಅಧ್ಯಕ್ಷೆ ಶ್ರೀಮತಿ ಪದ್ಮಾ ರಾವ್, ಇವರು 'ಪರಿ' ಚಿತ್ರದ ನಿರ್ಮಪಕರಾದಂತಹ ಎಂ.ಸಿ.ಗೌಡರವರನ್ನು ಅಭಿನಂದಿಸಿ 'ಪರಿ' ತಂಡಕ್ಕೆ ಶುಭಾಶಯ ತಿಳಿಸಿದರು. ಇವರ ಜೊತೆ ಪ್ರಕಾಶ್ ಹಾಗು ಸವಿತರವರು ಕೂಡ 'ಪರಿ'ಯ ಹಾಡುಗಳನ್ನು, ಸಾಹಿತ್ಯವನ್ನು ಕೊಂಡಾಡಿದರು.

'ಪರಿ' ಚಿತ್ರದ ಈ ಅಮೋಘ ಸಂಜೆಗೆ ಹಾಗು ಇಂತಹ ಸಂಗೀತ ಸಾಹಿತ್ಯಕ್ಕೆ ಅಮೆರಿಕನ್ನಡಿಗರು ಎಂದು ಪ್ರೋತ್ಸಾಹಿಸುವರೆಂದು ರಘು ತಿಳಿಸಿದರು. ಇದೊಂದು ಸಮುದ್ರದಾಚೆಯ 'ಪರಿ'ಯ ಸಂಭ್ರಮವೆಂದು ಎಲ್ಲರು ಅಭಿನಂದಿಸಿದರು.
 
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - 'ಪರಿ' ಚಿತ್ರದ ಧ್ವನಿ ಸುರುಳಿ ಬಿಡುಗಡೆ, ಕ್ಯಾಲಿಫ಼ೋರ್ನಿಯಾದ ಪಾಲೊ ಆಲ್ಟೊದಲ್ಲಿನ ಗಣ್ಣ್ ಹೈಸ್ಕೂಲ್ ಆವರಣದಲ್ಲಿ ಅಧ್ದೂರಿಯಾಗಿ ಅನಾವರಣಗೊಂಡಿತು. - Chitratara.com
Copyright 2009 chitratara.com Reproduction is forbidden unless authorized. All rights reserved.