18 ಟು 25 ಹದಿಹರೆಯದ ತಲ್ಲಣಗಳು
Posted date: 12 Sun, Feb 2023 05:38:17 PM
 ಈಗಿನ ಕಾಲದ ಯುವಕ, ಯುವತಿಯರ ಮನಸ್ಥಿತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ಮಿಸಿದಂಥ ಚಿತ್ರ  18ರಿಂದ 25. ಹರೆಯದ ಯುವಕ, ಯುವತಿಯರಲ್ಲಿ 18ರಿಂದ 25ರ ನಡುವಿನ ವಯಸನ್ನು ಗೋಲ್ಡನ್ ಏಜ್ ಎನ್ನುತ್ತಾರೆ. ಆ ಏಜ್ ನಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸಲಾಗದ ಮನಸ್ಥಿತಿ ಅವರದಾಗಿರುತ್ತದೆ. ಅಂಥಾ ಒಂದಷ್ಟು  ಪಾತ್ರಗಳ ಮನಸಿನಲ್ಲಾಗುವ ಏರಿಳಿತಗಳು,  ತಳಮಳಗಳನ್ನು 18ರಿಂದ 25 ಚಿತ್ರದ ಮೂಲಕ ನಿರ್ದೇಶಕ ಸ್ಮೈಲ್ ಶ್ರೀನು ಅವರು ಹೇಳಲು ಪ್ರಯತ್ನಿಸಿದ್ದಾರೆ. ಒಂದು ಅಪಾರ್ಟ್ ಮೆಂಟ್ ನಲ್ಲಿ ನಡೆಯುವ ಕಥೆಯಿದು. ಯುವ ನಿರ್ದೇಶಕನೊಬ್ಬ ಈ ಹುಡುಗರಲ್ಲಿ ಸಿನಿಮಾ ಹೀರೋ ಮಾಡುತ್ತೇನೆ ಎಂದು ಆಸೆ ಅವರಲ್ಲಿ ಆಸೆ ಹುಟ್ಟಿಸಿ ಅವರ ಹುಚ್ಚು ಮನಸಿನ ಭಾವನೆಗಳನ್ನು ಕೆರಳಿಸುತ್ತಾನೆ. ಅದೇ ಅಪಾರ್ಟ್ ಮೆಂಟ್ ನಲ್ಲಿರುವ ವಯಸ್ಸಾದ ಗಂಡ, ಮನದಾಸೆ ತೀರಿಸಿಕೊಳ್ಳಲು ಹವಣಿಸುತ್ತಿರುವ ಹೆಂಡತಿಯ ಕಥೆಯೂ ಇವರ ಜೊತೆ ಸಾಗುತ್ತದೆ. ಹಿರಿಯರಿಗೆ, ಕಿರುಯರಿಗೆ ಒಂದೊಳ್ಳೆ ಮೆಸೇಜ್ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಇನ್ನು ಅಭಿನಯಿಸಿರುವವರೆಲ್ಲ ಹೊಸಬರೇ ಆಗಿದ್ದು,  ಫ್ರೆಷ್ ಫೇಸ್ ಗಳ ಮೂಲಕ ಹೊಸತನದ ಕಥೆ ಹೇಳಿರುವುದು ನೋಡುಗರಿಗೆ ಇಷ್ಟವಾಗುತ್ತದೆ, ಕ್ಯಾಮೆರಾ ವರ್ಕ್ ಪರವಾಗಿಲ್ಲ. ಚರಣ್ ಅರ್ಜುನ್ ಅವರ ಸಂಗೀತದ ಹಾಡುಗಳು ಇಂಪಾಗಿವೆ. 
 
ಬಳ್ಳಾರಿ ದರ್ಬಾರ್, ಓ ಮೈ ಲವ್ ನಂಥ ಪಕ್ಕಾ ಕಮರ್ಷಿಯಲ್ ಸಿನಿಮಾಗಳನ್ನೆ ಮಾಡಿರುವ ಸ್ಮೈಲ್ ಶ್ರೀನು ವಿಶೇಷವಾಗಿ ಇಂಥದೊಂದು  ಚಿತ್ರವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. 
 
ಅಭಿ ರಾಮ್, ಋಷಿ ತೇಜ, ಅಖಿಲ, ವಿದ್ಯಾಶ್ರೀ, ರಾಕ್‍ಲೈನ್ ಸುಧಾಕರ್, ಫಾರೂಖ್ ಖಾನ್, ನಾಗೇಶ್ವರರಾವ್, ಉದಯ ಭಾಸ್ಕರ್, ರವಿರಾಮ್ , ಪೊಲ ಶ್ರೀನಿವಾಸಬಾಬು, ಭಾಗ್ಯಶ್ರೀ ಇವರೆಲ್ಲ ತಂತಮ್ಮ  ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed