Present ಪ್ರಪಂಚ ೦% ಲವ್ ಚಿತ್ರದಲಿ ತಬಲನಾಣಿ ಪಾತ್ರ ಕುತೂಹಲಕ್ಕೆ ಉತ್ತರ ಬಿಡುಗಡೆಯ ನಂತರ
Posted date: 31 Tue, Mar 2020 07:13:04 PM
ಕಳೆದ ವರ್ಷ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿ ಕರಿಯಪ್ಪನ ಪಾತ್ರ ನಿರ್ವಹಿಸಿದ್ದ ತಬಲನಾಣಿ, present ಪ್ರಪಂಚ ೦% ಲವ್ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಿರ್ವಹಿಸಿದ್ದಾರೆ. ತಬಲನಾಣಿ ಯಾವ ಪಾತ್ರ ನಿರ್ವಹಿಸಿದ್ದಾರೆ ಎನ್ನುವ ಕುತೂಹಲಕ್ಕೆ ಉತ್ತರ ಚಿತ್ರ  ಬಿಡುಗಡೆಯ ನಂತರ ಸಿಗುತ್ತದೆ  ಎಂದು ನಿರ್ದೇಶಕರು ತಿಳಿಸಿದ್ದಾರೆ...
 
ಫ್ರೆಂಡ್ಸ್ ಮೀಡಿಯಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. 
 
ಈ ಹಿಂದೆ ಸಂಯುಕ್ತ 2 ಚಿತ್ರವನ್ನು ನಿರ್ದೇಶಿಸಿದ್ದ ಅಭಿರಾಮ್ ಈ ಚಿತ್ರದ ನಿರ್ದೇಶಕರು.  ರವಿತೇಜಸ್ವಿ ಸಂಗೀತ ನಿರ್ದೇಶನ, ಈಶ್ವರಿ ಸುರೇಶ್ ಛಾಯಾಗ್ರಹಣ, ವೆಂಕಿ ಸಂಕಲನ ಈ ಚಿತ್ರಕ್ಕಿದೆ..
 
ಕೆಮಿಸ್ಟ್ರಿ ಆಫ್ ಕರಿಯಪ್ಪ ಹಾಗೂ ಸಂಯುಕ್ತ ೨ ಚಿತ್ರಗಳ ನಿರ್ಮಾಪಕ ಅರ್ಜುನ್ ಮಂಜುನಾಥ್ ಈ ಚಿತ್ರದ ನಾಯಕ. ಯಶಸ್ ಅಭಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಭ್ರಮ ಶ್ರೀ, ಅಕ್ಷತ ಈ ಚಿತ್ರದ ನಾಯಕಿಯರು.

 

ಸೆಂಟಿಮೆಂಟ್, ಕಾಮಿಡಿ, ಲವ್ ಹಾಗೂ ಕೌಟುಂಬಿಕ ಕಥಾಹಂದರವಿರುವ ಈ ಚಿತ್ರ ಸದ್ಯದಲ್ಲೇ  ತೆರೆಗೆ ಬರಲಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - Present ಪ್ರಪಂಚ ೦% ಲವ್ ಚಿತ್ರದಲಿ ತಬಲನಾಣಿ ಪಾತ್ರ ಕುತೂಹಲಕ್ಕೆ ಉತ್ತರ ಬಿಡುಗಡೆಯ ನಂತರ - Chitratara.com
Copyright 2009 chitratara.com Reproduction is forbidden unless authorized. All rights reserved.