`ಆದಿ ಪುರಾಣ` ನಾಳೆಯಿಂದ ಬಿಡುಗಡೆ
Posted date: 04 Thu, Oct 2018 – 05:16:25 PM

ಹೆಸರಾಂತ ಸಂಕಲನಕಾರ, ಕಿರು ಚಿತ್ರಗಳ ನಿರ್ದೇಶಕ ಮೋಹನ್ ಕಾಮಾಕ್ಷಿ ಅವರ ಪ್ರಥಮ ನಿರ್ದೇಶನದ ಚಿತ್ರ ಆದಿ ಪುರಾಣ ಶಮಂತ್ ನಿರ್ಮಾಣದಲ್ಲಿ ರೈನ್ ಬೋ ಪ್ರೊಡಕ್ಷನ್ ಸಂಸ್ಥೆಯಲ್ಲಿ ಚಿತ್ರವು ನಾಳೆಯಿಂದ ರಾಜದ್ಯಾದ್ಯಂತ ಬಿಡುಗಡೆಯಾಗುತ್ತಿದೆ. .

ಆದಿ ಪುರಾಣ ಚಿತ್ರದಿಂದ ಶಷಾಂಕ್, ಅಹಲ್ಯ ಸುರೇಶ್ ಹಾಗೂ ಮೋಕ್ಷ ಕುಶಾಲ್ ಪರಿಚಯ ಸಹ ಆಗುತ್ತಿದ್ದಾರೆ. ಎಂ ಜಿ ಗುರುಪ್ರಸಾದ್ ಛಾಯಾಗ್ರಹಣ, ವಿಕ್ರಮ್ ವಸಿಷ್ಠ, ಚಂದನ ವಸಿಷ್ಠ ಹಾಗೂ ಸಿದ್ದಾರ್ತ್ ಕಾಮತ್ ಸಂಗೀತ ನೀಡಿದ್ದಾರೆ. ಶಕ್ತಿ ವೆಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಕವಿರಾಜ್ ಹಾಗೂ ವಿಕ್ರಮ್ ವಸಿಷ್ಠ ಗೀತ ಸಾಹಿತ್ಯ, ಅನುಷ ಶಾಮಂತ್ ಹಾಗೂ ತೇಜಸ್ವಿನಿ ವಸ್ತ್ರ ವಿನ್ಯಾಸ, ರಘು ಕಲಾ ನಿರ್ದೇಶನ, ಜೈ ದೇವ್ ಸಹಾಯಕ ನಿರ್ದೇಶನ ಈ ಚಿತ್ರಕ್ಕೆ ಒದಗಿಸಿದ್ದಾರೆ.

ಯುವ ಮನಸನ್ನು ಸೂರೆ ಗೊಳ್ಳುವ ಸಿನಿಮಾದ ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ನಾಗೇಂದ್ರ ಶಾ, ಕರಿ ಸುಬ್ಬು, ಡಾ ವತ್ಸಲಾ ಮೋಹನ್, ಶಕ್ತಿ ವೆಲ್, ಸಮೀರ, ಆದಿತ್ಯ ಭಾರದ್ವಾಜ್, ಜಿಮ್ ಶಿವು, ರಾಧ ಹಾಗೂ ಇತರರು ಇದ್ದಾರೆ.
 
 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed