`ಕಿಸ್` ಟ್ರೇಲರ್ ಬಿಡುಗಡೆ ಮಾಡಿದರು ಯಶ್
Posted date: 31 Sat, Aug 2019 – 08:22:16 AM

ಅಂದು ಬಿ.ಜಿ.ಎಸ್. ಆಡಿಟೋರಿಯಮ್ಮಿನಲ್ಲಿ ಕಿಕ್ಕಿರಿದ ಜನ. ಅದರಲ್ಲೂ ಕಾಜೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರೇ ತುಂಬಿದ್ದರು. ಅದು ‘ಕಿಸ್ ಚಿತ್ರದ ಟ್ರೇಲರ್  ಬಿಡುಗಡೆ ಸಮಾರಂಭ. ಹೇಳಿ ಕೇಳಿ ‘ಕಿಸ್ ಚಿತ್ರಕ್ಕೆ ತುಂಟ ತುಟಿಗಳ ಆಟೋಗ್ರಾಫ್ ಅನ್ನೋ ಅಡಿ ಬರಹವಿರುವುದರಿಂದ ಯುವ ಪೀಳಿಗೆಯನ್ನು ಅತಿಹೆಚ್ಚು ಸೆಳೆದುಕೊಂಡಿದೆ. ಇದರ ಜೊತೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ರಾಕಿಂಗ್ ಸ್ಟಾರ್ ಯಶ್ ಆಗಿಮಿಸಿದ್ದದ್ದು ಅಲ್ಲಿ ನೆರೆದಿದ್ದವರ ಪಾಲಿಗೆ ಸಂಭ್ರಮ ಹೆಚ್ಚಲು ಕಾರಣವಾಗಿತ್ತು.

ಟಿ.ವಿ.ಧಾರಾವಾಹಿಗಳಲ್ಲಿ ನಟಿಸುವಾಗ ನಿರ್ದೇಶಕ ಎ.ಪಿ.ಅರ್ಜುನ್ ಜೊತೆಗಿನ ಸ್ನೇಹ ನಿಕಟವಾಗಿತ್ತು... ಎನ್ನುತ್ತಾ ತಮ್ಮ ಹಳೆಯ ನೆನಪುಗಳನ್ನೆಲ್ಲಾ ಮೆಲುಕು ಹಾಕಿದರು ಯಶ್. ಎ.ಪಿ. ಅರ್ಜುನ್ ಎಂಥಾ ಪ್ರತಿಭಾವಂತ ಅನ್ನೋದು ನನಗೆ ಆಗಲೇ ಗೊತ್ತಿತ್ತು. ಪ್ರತಿ ಸಾರಿ ಕತೆ ಮಾಡಿದಾಗಲೂ ಅರ್ಜುನ್ ನನ್ನ ಜೊತೆ ಚರ್ಚೆ ಮಾಡುತ್ತಾರೆ. ನನಗೆ ಅವರ ನಿರ್ದೇಶನದ ಶೈಲಿ ತುಂಬಾ ಇಷ್ಟ. ಅರ್ಜುನ್ ಇವತ್ತು ಬೆಳೆದಿರುವ ರೀತಿಯೇ ಅವರ ಪ್ರತಿಭೆಯನ್ನು ಸಾಕ್ಷೀಕರಿಸುತ್ತದೆ ಎಂದು ಯಶ್ ನುಡಿದರು. ‘ಕಿಸ್’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ವೀಕ್ಷಿಸಿದ ಯಶ್ ಅವರ ನೋಟ ನಾಯಕ ವಿರಾಟ್ ಹಾಗೂ ನಾಯಕಿ ಶ್ರೀಲೀಲ ಮೇಲೆ ಹೊರಳಿತು.

ಈ ಯುವ ಜೋಡಿ ಭಾರತದಲ್ಲಿ ಒಂದು ರೌಂಡ್ ಹೊಡೆದು ಬರುತ್ತಾರೆ ಎಂಬ ಆಶ್ವಾಸನೆ ಮಾತು ಹೇಳಿಕೊಂಡರು. ಸಂಗೀತ ನಿರ್ದೇಶನ ವಿ ಹರಿಕೃಷ್ಣ ತಮ್ಮ ಬತ್ತಳಿಕೆ ಇಂದ ಯಾವಾಗಲೂ ಒಳ್ಳೆಯ ಗೀತೆಗಳು ಬಂದಿವೆ ಸಹ ಎಂದರು ಯಶ್.

ಬಹು ನಿರೀಕ್ಷಿತ ಚಿತ್ರ ‘ಕಿಸ್’ ಎ ಪಿ ಅರ್ಜುನ್ ಸಾರಥ್ಯದಲ್ಲಿ ಬೆಂಗಳೂರು, ಗೋವ, ಡಾರ್ಜೀಲಿಂಗ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿರಾಟ್ ಹಾಗೂ ಶ್ರೀಲೀಲ ‘ಕಿಸ್’ ಚಿತ್ರದ ಯುವ ಜೋಡಿ. ಕಿಸ್ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಕೆ. ರವಿವರ್ಮ ಸಾಹಸ, ಇಮ್ರಾನ್ ಸರ್ದಾರಿಯ ನೃತ್ಯ, ರವಿ ಸಂತೆಹಕ್ಲು ಸಂಭಾಷಣೆ, ದೀಪು ಎಸ್. ಕುಮಾರ್ ಸಂಕಲನ ಮತ್ತು ಗಿರೀಶ್ ಗೌಡ ಅವರ ಛಾಯಾಗ್ರಹಣವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed