`ಕೃಷ್ಣ ಗಾರ್ಮೆಂಟ್ಸ್` ಚಿತ್ರೀಕರಣ ಮುಕ್ತಾಯ
Posted date: 09 Thu, Aug 2018 – 08:46:44 AM

 ಸುಮುಖ ಪಿಕ್ಚರ್ಸ್ ಲಾಂಛನದಲ್ಲಿ ಕೆ.ಶ್ರೀನಿವಾಸಮೂರ್ತಿ ಅವರು ನಿರ್ಮಿಸುತ್ತಿರುವ ‘ಕೃಷ್ಣ ಗಾರ್ಮೆಂಟ್ಸ್‘ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ ಚಿತ್ರಕ್ಕೆ ಐವತ್ತಕ್ಕೂ ಹೆಚ್ಚು ದಿನಗಳ ಕಾಲ ಬೆಂಗಳೂರು, ಹಾಸನ, ಶ್ರವಣಬೆಳಗೊಳ, ಚೆನ್ನರಾಯಪಟ್ಟಣ, ದೊಡ್ಡಬಳ್ಳಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದದಲ್ಲೇ ಮಾತಿನ ಜೋಡಣೆ ಆರಂಭವಾಗಲಿದೆ.

ಪ್ರೀತಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿದ್ದಾರೆ.

‘ಶ್ರೀಮಾನ್ ಶ್ರೀಮತಿ‘ ಧಾರಾವಾಹಿ ಖ್ಯಾತಿಯ ಭಾಸ್ಕರ್ ನೀನಾಸಂ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ‘ಬ್ರಹ್ಮಾಸ್ತ್ರ‘ ಧಾರಾವಾಹಿಯ ರಶ್ಮಿತ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಂದು(ಲಕ್ಷ್ಮೀ ಬಾರಮ್ಮ), ರಾಜೇಶ್ ನಟರಂಗ, ಹನುಮಂತ ರಾಜು, ಜಯಂತಿ, ಯಮುನ, ನಾಗಶ್ರೀ, ಪೂಜಾ, ಲಕ್ಷ್ಮೀನರಸಿಂಹ, ಪ್ರಸಾದ್, ವರ್ಧನ್ ತೀರ್ಥಹಳ್ಳಿ, ರಜನಿಕಾಂತ್ ಎಚ್.ಎಂ.ಟಿ ವಿಜಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  ರಘು ಧನ್ವಂತ್ರಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಚಿದಾನಂದ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed