`ಜಟಾಯು` ಬಿರುಸಿನ ಚಿತ್ರೀಕರಣ
Posted date: 09 Wed, May 2012 ? 08:05:30 AM

ಶರವೇಗದಲ್ಲಿ ’ಜಟಾಯು’ ಬಹುತೇಕ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ನಿರ್ದೇಶಕ ಕಂ ನಟ ರಾಜ್ ಮಾಡಿದ್ದಾರೆ. ಎಲ್ಲಿ ಚಿತ್ರವನ್ನು ಆರಂಭಿಸಿದರೋ ಅದೇ ಜಾಗದಲ್ಲಿ ಕ್ಲೈಮಾಕ್ಸ್ ಚಿತ್ರೀಕರಣ ಸಹ ಭರ್ಜರಿಯಾಗಿ ಮಾಡಲಾಗಿದೆ. ಸದ್ಯಕ್ಕೆ ೮೦% ರಷ್ಟು ಚಿತ್ರೀಕರಣ ’ಜಟಾಯು’ ಚಿತ್ರಕ್ಕೆ ಮಾಡಲಾಗಿದ್ದು ೨೮ ದಿವಸಗಳಲ್ಲಿ ಬೆಂಗಳೂರು, ಕೋಲಾರ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ೫ ಹಾಡು ಹಾಗೂ ೧೫ ದಿವಸಗಳ ಚಿತ್ರೀಕರಣ ಮಾಡಿದರೆ ’ಜಟಾಯು’ ಸಿದ್ದವಾಗುತ್ತದೆ ಎಂದು ನಿರ್ಮಾಪಕ ಪ್ರಭಾಕರ್ ತಿಳಿಸಿದ್ದಾರೆ.

’ಸಂಚಾರಿ’ ನಿರ್ಮಿಸಿದ ಅಮೋಘ ಎಂಟರ್‌ಪ್ರೈಸಸ್ ಪ್ರಭಾಕರ ಅವರು ಅತ್ಯಂತ ಉತ್ಸಾಹದಲ್ಲಿ ಸ್ವತಂತ್ರ ನಿರ್ಮಾಪಕರಾಗಿ ತೊಡಗಿಕೊಂಡಿದ್ದಾರೆ. ’ಜಟಾಯು’  ದಿ ರೆಬೆಲ್ ವಿತಿನ್ ಕೋಲಾರದ ಮಾದಪ್ಪನ ಹಳ್ಳಿಯಲ್ಲಿ  ೧,೦೦೦ ಜನರ ಸಮ್ಮುಖದಲ್ಲಿ ಕೆಸರಗದ್ದೆಯ ವಾತಾವರಣದಲ್ಲಿ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ೫ ದಿವಸಗಳಲ್ಲಿ ಮೈನವಿರೇಳಿಸುವಂತೆ ಕ್ಲೈಮಾಕ್ಸ್ ಭಾಗವನ್ನು ನಿರ್ದೇಶಿಸಿದ್ದಾರೆ.

ಬಿ.ಸುರೇಶ್ ಅವರ ಸಂಭಾಷಣೆ ಇರುವ ’ಜಟಾಯು’ ಚಿತ್ರಕ್ಕೆ ವಿನಯ್ ಚಂದ್ರ ಸಂಗೀತ, ಎಂ.ಯು.ನಂದಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕಲೈ, ಮುರುಳಿ, ರಾಮು ಹಾಗೂ ಹರ್ಷ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಹಾಗೂ ಮಾಸ್ ಮಾದ ಸಾಹಸ ಈ ಚಿತ್ರಕ್ಕೆ ಒಳಗೊಂಡಿದೆ.

ನಾಯಕ ರಾಜ್ ಎದುರಾಗಿ ಸುರಭಿ ಹಾಗೂ ರೂಪಶ್ರೀ ನಾಯಕಿಯರು. ಅವಿನಾಶ್, ನಟರಾಜ್, ಬುಲೆಟ್ ಪ್ರಕಾಶ್, ಪೆಟ್ರೋಲ್ ಪ್ರಸನ್ನ, ಕಿಲ್ಲರ್ ವೆಂಕಟೇಶ್, ಡ್ಯಾನಿ, ಸತೀಶ್, ಸಿದ್ದರಾಜ್ ಕಲ್ಯಾಣ್‌ಕರ್, ಕುರುಪ್ ರಮೇಶ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.




Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed