ಆಪರೇಶನ್ ನಕ್ಷತ್ರ ಚಿತ್ರೀಕರಣ ಮುಕ್ತಾಯ
Posted date: 04 Tue, Dec 2018 – 09:09:31 AM

ಫೈವ್‌ಸ್ಟಾರ್ ಸಂಸ್ಥೆಯ ಮೂಲಕ  ನಂದಕುಮಾರ.ಎನ್, ಅರವಿಂದ ಮೂರ್ತಿ ಟಿ.ಎಸ್, ರಾಧಕೃಷ್ಣ ಹಾಗೂ ಕಿಶೊರ್ ಮೇಗಳಮನೆ ಸೇರಿ ನಿರ್ಮಿಸಿರುತ್ತಿರುವ ಆಪರೇಶನ್ ನಕ್ಷತ್ರ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಇದೀಗ ಮುಕ್ತಾಯಗೊಂಡಿದೆ. ಬೆಂಗಳೂರು ಸುತ್ತಮುತ್ತ ಚಿತ್ರದ ಮಾತಿನ ಭಾಗಕ್ಕೆ ಚಿತ್ರೀಕರಿಸಿರುವ ಚಿತ್ರತಂಡ ಉಳಿದ ೨ ಹಾಡುಗಳನ್ನು ಇದೇ ತಿಂಗಳಲ್ಲಿ ಚಿತ್ರೀಕರಿಸಲಿದೆ. ಮಧುಸೂದನ್ ಅವರ  ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು,  ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆಯನ್ನು ಶ್ರೀಮುರುಳಿ ಬಿಡುಗಡೆ ಮಾಡಿದ್ದರು. ಮಧುಸೂದನ್‌ರವರೇ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದಾರೆ. ಹಣದ ಹಿಂದೆ ಹೋದ ನಾಲ್ವರು ಹುಡುಗರ ಕಥೆ ಇದಾಗಿದ್ದು, ಕೊನೆಗೆ ಅವರ ಪರಿಸ್ಥಿತಿ ಏನಾಯಿತು ಎಂಬುದನ್ನು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕದೊಂದಿಗೆ ಹೇಳಲಾಗಿದೆ.  
ಈ ಚಿತ್ರಕ್ಕೆ ಶಿವಸೀನ ಅವರ ಛಾಯಾಗ್ರಹಣ, ವೀರ್ ಸಮರ್ಥ್ ಅವರ ಸಂಗೀತ, ಕಿಟ್ಟು ಅರ್ಜುನ್ ಸಂಕಲನ, ವಿಜಯ್ ಭರಮಸಾಗರ ಸಾಹಿತ್ಯ,ರಿ ಕಿಶೋರ್ ಮೇಗಳಮನೆ, ಮಧುಸೂದನ್ ಸಂಭಾಷಣೆ, ಶರಣ್ ಗೆಣ್ಕಳ್ ಸಹ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸವಿದೆ. ಕಂಬಿರಾಜು ನೃತ್ಯ ನಿರ್ದೇಶನವಿದೆ. ನಿರಂಜನ್ ಒಡೆಯರ್, ಅದಿತಿ ಪ್ರಭುದೇವ, ಯಜ್ಞಾ ಶೆಟ್ಟಿ,  ಲಿಖಿತ್‌ಸೂರ್ಯ, ದೀಪಕ್‌ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮಿ, ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ ಟಿ.ಎಸ್, ಭರತ್ ಇನ್ನೂ ಮುಂತಾದವರ ತಾರಾಬಳಗವಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed