ಇದೇ ತಿಂಗಳಲ್ಲಿ ಕರಾವಳಿ ಹುಡುಗಿ
Posted date: 30/March/2010

ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಶ್ಯಪ ದಾಕೋಜು ನಿರ್ಮಿಸಿರುವ ಬಿಳಿ ಮನೆ ರಾಮದಾಸ ಅವರ ಕಾದಂಬರಿ ಆಧಾರಿತ ಚಿತ್ರ ಕರಾವಳಿ ಹುಡುಗಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು ಸರ್ಟಿಫಿಕೇಟ್ ನೀಡಿದೆ. ಇದೇ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಕೋಡ್ಲು ರಾಮಕೃಷ್ಣ ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಎಸ್.ರಾಮಚಂದ್ರ ಛಾಯಾಗ್ರಹಣ, ಸಿ.ಆರ್.ಬಾಬಿ ಸಂಗೀತ, ಬಸವರಾಜ ಅರಸ್ ಸಂಕಲನ, ಕಪಿಲ್ ನೃತ್ಯ ನಿರ್ದೇಶನವಿರುವ ಈ ಚಿತ್ರದಲ್ಲಿ ಮೋಹನ್, ನೀತು, ದ್ವಾರಕೀಶ್, ಶ್ರೀನಿವಾಸ್ ಮೂರ್ತಿ, ಓಂ ಪ್ರಕಾಶ್ ರಾವ್, ಬುಲೆಟ್ ಪ್ರಕಾಶ್, ಸ್ವಸ್ತಿಕ್ ಶಂಕರ್, ಬ್ಯಾಂಕ್ ಜನಾರ್ಧನ್, ರೇಖಾದಾಸ್, ಅರವಿಂದ್ ಇನ್ನು ಮೊದಲಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed