ಎಸ್.ಪಿ.ಬಿ. ನುಡಿನಮನ ಸಾರ್ಥಕಪಡಿಸಿದ ರಾಜೇಶ್ ಕೃಷ್ಣನ್: ಸಂತಸ ವ್ಯಕ್ತಪಡಿಸಿದ ಸಚಿವ ಎಸ್.ಟಿ.ಸೋಮಶೇಖರ್
Posted date: 22 Thu, Oct 2020 – 02:29:29 PM
ಮೈಸೂರು, ಅಕ್ಟೋಬರ್ 21(ಕರ್ನಾಟಕ ವಾರ್ತೆ) ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸ್ಮರಣಾರ್ಥ ಆಯೋಜಿಸಿದ್ದ ಈ ಎಸ್.ಪಿ.ಬಿ. ನುಡಿನಮನ ಕಾರ್ಯಕ್ರಮದಲ್ಲಿ ಎಸ್.ಪಿ.ವಿ. ಹಾಡುಗಳನ್ನು ಹಾಡುವ ಮೂಲಕ ರಾಜೇಶ್ ಕೃಷ್ಣನ್ ಈ ಕಾರ್ಯಕ್ರಮ ಸಾರ್ಥಕಪಡಿಸಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಸಂತಸ ವ್ಯಕ್ತಪಡಿಸಿದರು. 

ಬುಧವಾರ ಅರಮನೆ ವೇದಿಕೆಯಲ್ಲಿ ರಾಜೇಶ್ ಕೃಷ್ಣನ್ ಅವರ ಸಂಗೀತ ಕಾರ್ಯಕ್ರಮದ ನಂತರ ಮಾತನಾಡಿದ ಸಚಿವರು, ಇತ್ತೀಚಿಗೆ ನಮ್ಮನ್ನು ಅಗಲಿದ ಎಸ್.ಪಿ.ಬಿ‌. ಅವರ ಹೆಸರಿನಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಬಯಸಿದ್ದೆವು. ಆ ಕಾರ್ಯಕ್ರಮಕ್ಕೆ ರಾಜೇಶ್ ಕೃಷ್ಣನ್ ಅವರನ್ನೇ ಕರೆಸಬೇಕೆಂಬುದು ನಮ್ಮ ಅಭಿಲಾಸೆಯಾಗಿತ್ತು. ನಮ್ಮ ಬಯಕೆ ಈಡೇರಿದೆ ಎಂದರು. 

ಎಸ್.ಪಿ.ಬಿ. ಅವರು ಸುಮಾರು 40 ಸಾವಿರ ಹಾಡುಗಳನ್ನು ಹಾಡಿದ್ದಾರೆ‌. ಕೋಟ್ಯಾಂತರ ಅಭಿಮಾನಿಗಳನ್ನು ಮನಸ್ಸಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಹಾಡುಗಳನ್ನು ಹಾಡುವ ಮೂಲಕ ಅವರು ಇಲ್ಲ ಎನ್ನುವ ನೋವನ್ನು ರಾಜೇಶ್ ಕಷ್ಣನ್ ನಿವಾರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಡಾ. ಕೆ. ಸುಧಾಕರ್, ಶಾಸಕ ಎಲ್. ನಾಗೇಂದ್ರ, ಮುಡಾ ಅದ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಡಿಸಿಪಿ ಗೀತಾ ಪ್ರಸನ್ನ, ಎ.ಡಿ.ಸಿ. ಬಿ.ಎಸ್. ಮಂಜುನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed