ಕೋಮಲ್ ಕುಮಾರ್ ನಾಯಕನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಟಿ. ಆರ್. ಚಂದ್ರಶೇಖರ್ ಅವರು ಬಂಡವಾಳ ಹೂಡುತ್ತಿದ್ದು, ,ಧನ್ಯ ಬಾಲಕೃಷ್ಣ,ಕುರಿ ಪ್ರತಾಪ್ ತಬಲಾ ನಾಣಿ, ಗಿರಿ, ಅಪೂರ್ವ,ಉಮೇಶ್ ಹಾಗೂ ಇತರರೂ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಬರ್ಟ್, ವಿಕ್ಟರಿ2,ಅಮ್ಮ ಐ ಲವ್ ಯು,ತ್ರಿಬಲ್ ರೈಡಿಂಗ್,ಉಪಾಧ್ಯಕ್ಷ ಹಾಗೂ ಇನ್ನೂ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದ
ಕೆ.ಎಲ್.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇದೆ ನವಂಬರ್ ನಲ್ಲಿ ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಶುರುವಾಗಲಿದೆ
ಸಂಪೂರ್ಣ ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬಹುತೇಕ ಪಾತ್ರಗಳ ಆಯ್ಕೆ ಪೂರ್ಣಗೊಂಡಿದ್ದು ಮಿಕ್ಕ ಕೆಲವು ಮುಖ್ಯ ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.
ತಾಂತ್ರಿಕ ವರ್ಗದಲ್ಲಿ ನವೀನ್ ಕುಮಾರ್ .ಎಸ್ ಛಾಯಾಗ್ರಹಣ, ಕೆ,ಎಮ್,ಪ್ರಕಾಶ್ ಸಂಕಲನ,ಶ್ರೀಧರ್ ಸಂಭ್ರಮ ಸಂಗೀತ, ಬಾಲು ಕುಮುಟ ನಿರ್ಮಾಣ ನಿರ್ವಹಣೆ,ದಯಾನಂದ್ ಭದ್ರಾವತಿ ವಸ್ತ್…