ಗಣೇಶ್‌ ಚಿತ್ರಕ್ಕೆ ನಾಗಣ್ಣ ನಿರ್ದೇಶನ
Posted date: 01 Sun, Jul 2018 – 07:07:49 PM

ಸಾಮಿ ಪಿಕ್ಚರ‍್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಶ್ರೀ ದೀಪಕ್‌ಸಾಮಿ ನಿರ್ಮಿಸುತ್ತಿರುವಇನ್ನೂ ಹೆಸರಿಡದ "ಪ್ರೊಡಕ್ಷನ್ ನಂ.೧ ಚಿತ್ರದ ಚಿತ್ರೀಕರಣ ಇದೇ ೨೫ ರಂದು ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ನಿಮಿಷಾಂಭ ದೇವಸ್ಥಾನದಲ್ಲಿ ಆರಂಭವಾಯಿತು.
ಚಿತ್ರದ ಮುಹೂರ್ತದೃಶ್ಯಕ್ಕೆ ಮೊದಲ ಬಾರಿಗೆ ಹಾರರ್‌ ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವ ಗೋಲ್ಡನ್ ಸ್ಟಾರ್‌ ಗಣೇಶ್‌ ಕ್ಯಾಮರಾ ಎದುರಿಸಿದರು.

ಚಿತ್ರದ ಮುಹೂರ್ತ ದೃಶ್ಯಕ್ಕೆ ವಿತರಕ ಹೆಚ್.ಡಿ. ಗಂಗರಾಜ್‌ ಕ್ಯಾಮರಾ ಚಾಲೂ ಮಾಡಿದರೆ ಶ್ರೀ ಅರ್ಜುನ್‌ ಗುರೂಜಿ ಆರಂಭ ಫಲಕ ತೋರಿಸಿದರು.

ಚಿತ್ರಕ್ಕೆ ನಂಜುಂಡ ಸಂಭಾಷಣೆ, ವಿಘ್ನೇಶ್‌ ಛಾಯಾಗ್ರಹಣ, ಅರ್ಜುನ್‌ ಜನ್ಯಾ ಸಂಗೀತ, ರವಿ ವರ್ಮ ಸಾಹಸ, ಸುರೇಶ್‌ ಅರಸ್ ಸಂಕಲನ, ನಾರಾಯಣ್ ನಿರ್ದೇಶನ ಸಹಕಾರವಿದ್ದು, ಹಲವಾರು ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದ ಯಶಸ್ವಿ ನಿರ್ದೇಶಕ ನಾಗಣ್ಣ ಮೊಟ್ಟ ಮೊದಲ ಬಾರಿಗೆ ಗಣೇಶ್‌ ಚಿತ್ರವನ್ನು ನಿರ್ದೇಶಿಸುವ ಹೊಣೆ ಹೊತ್ತಿದ್ದಾರೆ.

ತಾರಾಗಣದಲ್ಲಿ ಗಣೇಶ್, ರೋನಿಕಸಿಂಗ್, ಸುಂದರ್‌ರಾಜ್ ಶೋಭರಾಜ್, ಚಿ. ಗುರುದತ್, ರವಿಶಂಕರ್‌ಗೌಡ, ಸಾಧುಕೋಕಿಲ ಮುಂತಾದವರಿದ್ದಾರೆ.   

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed