ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಇಂಡಿಯನ್ ಪನೋರಮ ವಿಭಾಗಕ್ಕೆ`ರಂಗನಾಯಕಿ` ಆಯ್ಕೆ.
Posted date: 08 Tue, Oct 2019 – 05:01:01 PM

ಎಸ್.ವಿ.ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಎಸ್.ವಿ.ನಾರಾಯಣ್ ಅವರು ನಿರ್ಮಿಸಿರುವ ‘ಹಾಗೂ ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ VOL 1‘ ಚಿತ್ರ ಗೋವಾ ಅಂತರರಾಷ್ತ್ರೀಯ ಚಲನಚಿತ್ರೋತ್ಸವ(2019)ದ ಇಂಡಿಯನ್ ಪನೋರಮ ವಿಭಾಗಕ್ಕೆ ಆಯ್ಕೆಯಾಗಿದೆ.  ಈ ವರ್ಷ ‘ಗೋಲ್ಡನ್ ಜ್ಯೂಬಿಲಿ ಎಡಿಷನ್ ಆಫ಼್ ದಿ ಫ಼ೆಸ್ಟಿವಲ್‘ ಆಗಿದ್ದು ಈ ಸಮಯದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಚಿತ್ರ  ‘ರಂಗನಾಯಕಿ VOL 1‘ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ. ಚಿತ್ರ ನವಂಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಬಿಡುಗಡೆ ಪೂರ್ವದಲ್ಲೇ ಪ್ರತಿಷ್ಟಿತ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಸಂತಸದ ಸಂಗತಿ.
   ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ರಾಕೇಶ್ ಅವರ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಸಂಕಲನವಿರುವ ಈ ಚಿತ್ರಕ್ಕೆ ನವೀನ್‌ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಅವಿನಾಶ್ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಅದಿತಿ ಪ್ರಭುದೇವ, ಎಂ.ಜಿ.ಶ್ರೀನಿವಾಸ್(ಶ್ರೀನಿ), ತ್ರಿವಿಕ್ರಮ್, ಶಿವಾರಾಂ, ಸುಚೇಂದ್ರಪ್ರಸಾದ್, ಸುಂದರ್, ವೀಣಾ ಸುಂದರ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed