ಚಿತ್ರೀಕರಣ ಮುಗಿಸಿದ ೨ನೇ ಮದುವೆ
Posted date: 22/April/2009

ಸುರೇಶ್ ಆರ್ಟ್ಸ್ ಮತ್ತು ಒಬೇಷನ್ಸ್ ಲಾಂಛನದಲ್ಲಿ ಕೆ.ಎ. ಸುರೇಶ್ ಮತ್ತು ಕೆ. ರಾಜೀವ್ ನಿರ್ಮಿಸಿರುವ ೨ನೇ ಮದುವೆ ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ನಡೆದು, ಯಶಸ್ವಿಯಾಗಿ ಪೂರ್ಣಗೊಂಡಿದೆ.  ನಿದೇಶಕ ದಿನೇಶ್‌ಬಾಬು ಅವರು ೨ ಯೂನಿಟ್‌ಗಳ ಮೂಲಕ ೨ ಕ್ಯಾಮೆರಾ ಬಳಸಿ, ಹಗಲು-ರಾತ್ರಿ ಚಿತ್ರೀಕರಣ ನಡೆಸಿ, ಮುಕ್ತಾಯಗೊಳಿಸಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಬಹಳ ದಿನಗಳ ನಂತರ ಅನಂತ್‌ನಾಗ್-ಸುಹಾಸಿನಿ ಈ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಇದೊಂದು ಸಂಪೂರ್ಣ ಹಾಸ್ಯಭರಿತ, ಸಾಂಸಾರಿಕ ಪ್ರೇಮ ಕಥಾಹಂದರವಾಗಿದ್ದು, ಅನಂತ್-ಸುಹಾಸಿನಿಯಂಥ ಪ್ರತಿಭಾವಂತ ಜೋಡಿಯ ಜೊತೆಗೆ ನೆನಪಿರಲಿ ಪ್ರೇಮ್, ಜೆನೀಫರ್ ಯುವ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕಥೆ-ಚಿತ್ರಕಥೆ, ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಅವರೇ ಹೊತ್ತಿದ್ದಾರೆ. ಜಯಪಾಲ್ ಅವರ ಸಂಗೀತ ಸಂಯೋಜನೆ, ರಾಜೇಂದ್ರ ಕಾರಂತರ ಸಂಕಲನ ಇದ್ದು, ಶರಣ್, ತಾರಾ, ರಂಗಾಯಣ ರಘು, ಸಿಂಧೂ, ನವ್ಯ ಉಳಿದ ತಾರಾಗಣದಲ್ಲಿದ್ದಾರೆ

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed