ಜೀ ಕಾಮಿಡಿ ಅವಾರ್ಡ್ಸ್ 2020
Posted date: 22 Wed, Jan 2020 – 12:12:35 PM

ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯ ಹಾಗು ಉತ್ತಮ ವರ್ಗದಎಲ್ಲಾ ವೀಕ್ಷಕರಿಗು
ಅಪೇಕ್ಷೆಯ ಮೇರಗೆ ಮನರಂಜನೆಗಳನ್ನು ನೀಡುವುದರ ಮುಖಾಂತರ ನಂಬರ್‌ ಒನ್ ಸ್ಥಾನದಲ್ಲಿ ಬಂದು ನಿಂತಿರುವ ಅತ್ಯುತ್ತಮ ವಾಹಿನಿ ಜೀ ಕನ್ನಡ.

ವಾರ ಪೂರ್ತಿ ದುಡಿದು ದಣಿದಮೈಮನಸ್ಸುಗಳಿಗೆ ಹಗುರಾಗಬೇಕಂದರೆ ಅದಕ್ಕಿರುವ ಒಂದೇ ಒಂದು ಔಷಧಿ ನಗು, ಅದನ್ನೇ ಉದ್ದೇಶವಾಗಿಸಿಕೊಂಡು ರೂಪಿಸಿದಂತಹ ವಾಹಿನಿಯ ಬ್ಲ್ಯಾಕ್ ಬಸ್ಟರ್‌ ಶೋ ಕಾಮಿಡಿ ಕಿಲಾಡಿಗಳು, ನಗುವಿನ ಕಚಗುಳಿಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮ ಇಂದು ವಿಶ್ವದ ಎಲ್ಲ ಕನ್ನಡಿಗರು ಇದು ನಮ್ಮ ಮನೆಯಂಗಳದ ಮುದ್ದು ಮಗು ಎಂದು ಅಕ್ಕರೆಯಿಂದ ಎತ್ತಿಆಡಿಸುವಷ್ಟು ಜನಪ್ರಿಯವಾಗಿದೆ ಯೆಂದರೆ ಅದು ಅತಿಶಯೋಕ್ತಿಯೇನಲ್ಲ.

ನಗುವುದು ಸಹಜಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದು ಅತಿಶಯದಧರ್ಮ,ನಗುವ ನಗಿಸುವ, ನಗಿಸಿ ನಗುತ ಬಾಳುವ, ವರವೆಮಗೆ ನೀನು ಬೇಡಿಕೊಳ್ಳೋ ಮಂಕುತಿಮ್ಮ ಎಂಬಡಿ,ವಿ,ಜಿಯವರ ಮಾತಿನಂತೆ ನಗಿಸುವ ವರವನ್ನ ಪಡೆದುಕಿರುತೆರೆ, ಹಿರಿತೆರೆ ಹಾಗು ಹಲವು ಕ್ಷೇತ್ರಗಳಲ್ಲಿ ನಿರಂತರವಾಗಿ ನಾಡಿಗೆಲ್ಲ ನಗುವನ್ನ ಹಂಚ್ತಿರೊ ಹಾಸ್ಯ ದಿಗ್ಗಜರಿಗೊಂದು ವೇದಿಕೆ ಸೃಷ್ಟಿಸಿ ಅವರೆಲ್ಲರಿಗು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಗೌರವಿಸಬೇಕೆಂದು ಯೋಚಿಸಿದಾಗ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಹುಟ್ಟಿಕೊಂಡಿದ್ದೇ ಜೀ ಕನ್ನಡ ಕಾಮಿಡಿ ಅವಾರ್ಡ್ಸ್ 2020

ಕನ್ನಡ ಚಿತ್ರರಂಗದಲ್ಲಿ ಹಲವಾರು ಅವಾರ್ಡ್ಸ್ ಕಾರ್ಯಕ್ರಮಗಳು ನಡೆಯುತ್ತಿವೆ, ನಡೆಯುತ್ತಾ ಬಂದಿವೆ, ಆದರೆ ಹಾಸ್ಯ ಕಲಾವಿದರಿಗಾಗಿಯೇ ಪ್ರತ್ಯೇಕವಾಗಿ ಒಂದು ಅಭಿನಂದನ ವೇದಿಕೆ ನಿರ್ಮಾಣವಾಗಿರಲಿಲ್ಲ, ಊಟ ಎಷ್ಟೇ ರುಚಿಯಾಗಿದ್ರು ಉಪ್ಪಿನಕಾಯಿ ಜೊತೆಯಿಲ್ಲದಿದ್ದರೆ ಆ ಊಟ ಪೂರ್ಣವಾಗುವುದಿಲ್ಲ, ಒಂದು ಸಿನಿಮಾದಲ್ಲಿ ಕಥೆ, ಚಿತ್ರಕಥೆ, ಫೈಟ್, ರೊಮ್ಯಾನ್ಸ್ ವಿಜೃಂಭಣೆಯ ದೃಶ್ಯಗಳಿದ್ದು ಕೂಡ ಹಾಸ್ಯ ವಿಲ್ಲದಿದ್ದರೆ ಆ ಸಿನಿಮ ಶುಗರ್ ಲೆಸ್ ಸ್ವೀಟ್ ಇದ್ದ ಹಾಗೇ, ನಮ್ಮಜೀವನದ ಮುಖ್ಯ ಭಾಗವಾಗಿರುವ ಹಾಸ್ಯಕ್ಕೆ ಗೌರವಿಸುವ ಚೊಚ್ಚಲ ಕಾಮಿಡಿ ಅವಾರ್ಡ್ಸ್‌ ಕಾರ್ಯಕ್ರಮ ಕಿರುತೆರೆಯ ಇತಿಹಾಸದಲ್ಲಿಯೇ ವಿಜೃಂಭಣೆಯಾಗಿ ನಡೆಯುತ್ತಿರುವುದು ಇದೆ ಮೊದಲು.
ಕನ್ನಡ ಚಿತ್ರರಂಗದಲ್ಲಿ ಹಲವಾರು ಅವಾರ್ಡ್ಸ್ ಕಾರ್ಯಕ್ರಮಗಳು ನಡೆಯುತ್ತಿವೆ, ನಡೆಯುತ್ತಾ ಬಂದಿವೆ,
ಆದರೆ ಹಾಸ್ಯ ದಿಗ್ಗಜರನ್ನ ಗೌರವಿಸುವ ಒಂದು ಅಭಿನಂದನ ವೇದಿಕೆ ಮೊದಲ ಬಾರಿಗೆ ರೂಪುಗೊಂಡಿದ್ದು ನಮ್ಮ ಹೆಮ್ಮೆಯ ಜೀ ಕನ್ನಡ ವಾಹಿನಿಯಲ್ಲಿ.

ಕಳೆದ ವರ್ಷ2019 ರಲ್ಲಿ ತೆರೆಗೆ ಬಂದು ಪ್ರೇಕ್ಷಕರನ್ನು ಮನರಂಜಿಸಿದ ಹಾಸ್ಯ ಚಿತ್ರಗಳು ಹಾಗು ಹಾಸ್ಯ
ಕಲಾವಿದರುಗಳಿಗೆ ಸಲ್ಲಿಸುತ್ತಿರುವ ಅಭಿನಂದನ ವೇದಿಕೆಯೆ ಜೀ ಕನ್ನಡ ಕಾಮಿಡಿ ಅವಾರ್ಡ್ಸ್ 2020

ನೆರೆದಂತ ಅಭಿಮಾನಿ ಪ್ರೇಕ್ಷಕರ ಸಿಳ್ಳೇ ಚಪ್ಪಾಳೆಯ ಝೇಂಕಾರದ ಜೊತೆಗೆ ನಗುನಗುತಾ ನಲಿ ನಲಿ
ಎಂಬ ಅರ್ಥಪೂರ್ಣ ನಗುವಿನ ಹಾಡಿನೊಂದಿಗೆ ಡ್ಯಾನ್ಸರ್‌ಗಳ ಜೊತೆಗೆ ಹೆಜ್ಜೆ ಹಾಕುತ್ತಾ ವೇದಿಕೆಗೆ
ಪ್ರವೇಶ ಮಾಡಿದಸ್ಯಾಂಡಲ್‌ವುಡ್ನ ನೆಚ್ಚಿನ ನಿರೂಪಕ ಮಾಸ್ಟರ್‌ ಆನಂದ್ ರವರು ತಮ್ಮ ಮಾತಿನ
ಚಟಾಕಿ ಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲು
ಕಾರಣರಾದರು.

ಜೀ ಕನ್ನಡ ಕಾಮಿಡಿ ಅವಾರ್ಡ್ಸ್ 2020 ಕ್ಕೆ ನಾಮಿನೇಶನ್‌ ಆಗಿದ್ದ  ಹಾಸ್ಯ ದಿಗ್ಗಜರನ್ನು ಸನ್ಮಾನಿಸಲು ಕನ್ನಡ ಚಿತ್ರಲೋಕದ ತಾರಾಪುಂಜವೇ ನೆರೆದಿದ್ದಿದ್ದೇ ಕಾರ್ಯಕ್ರಮದ ವಿಶೇಷತೆಯಲ್ಲಿ ವಿಶೇಷವಾಗಿತ್ತು.

ಕಾರ್ಯಕ್ರಮಕ್ಕೆ ಮತ್ತಷ್ಟು ಮನರಂಜನೆಯ ಮೆರುಗುತುಂಬಿದ್ದು ಕಾಮಿಡಿ ಕಿಲಾಡಿಗಳು ಸೀಸನ್ ೧, ಸೀಸನ್ ೨, ಸೀಸನ್ ೩, ಹಾಗು ವೀಕ್ಷಕರ ನೆಚ್ಚಿನ ಪಾರು ಧಾರಾವಾಹಿಯ ನೃತ್ಯದ ಜೊತೆಗೆ ಡ್ರಾಮಾ ಜೂನಿಯರ‍್ಸ್‌ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ವಿಜೇತರಾದ ಮುದ್ದುರಾಜ ಅನೂಪ ಹಾಗು ಡವ್‌ ರಾಣಿ
ಡಿಂಪನರವರ ಮೈ ಜುಮ್ಮೆನ್ನೆಸುವ ನೃತ್ಯಗಳು ಕಾರ್ಯಕ್ರಮಕ್ಕೆ ಆಗಮಸಿದ್ದ ಪ್ರೇಕ್ಷಕ ಸಮೂಹಕ್ಕೆ ಭರಪೂರ
ಮನರಂಜನೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿತ್ತು.

ಚೊಚ್ಚಲ ಪ್ರಯತ್ನದಲ್ಲೇ ನಿರೀಕ್ಷೆಗು ಮೀರಿದಅಭೂತಪೂರ್ವ ಯಶಸ್ಸಿಗೆ ಸಾಕ್ಷಿಯಾಗಿದ್ದುಚಂದನವನದತಾರಾಬಳಗದ ಸಮೂಹ, ಕರುನಾಡಿನ ಹೆಮ್ಮೆಯ ಪ್ರತಿಭಾನ್ವಿತ ಕಲಾವಿದರುಗಳೆಲ್ಲ ಒಂದೇ ಸೂರಿನಡಿಸೇರಿ ಹಬ್ಬದ ವಾತವರಣವನ್ನೇ ಸೃಷ್ಟಿಸಿ ವೇದಿಕೆಯಘನತೆಯನ್ನು ಹೆಚ್ಚಿಸುವುದರಜೊತೆಗೆ,ಬಾಂಧವ್ಯಗಳ ಬೆಸುಗೆಯ ಸಂತಸದ ಸಂಭ್ರಮದಲ್ಲಿ ಮೀಯುವುದರೊಂದಿಗೆ ನಕ್ಕು ನಲಿದಾಡಿದ್ದು
ಸಾರ್ಥಕತೆಯದ್ಯೋತಕವಾಗಿತ್ತು.

ಒಟ್ಟಾರೇ ಹಾಸ್ಯಲೋಕದ ಮನರಂಜನೆಯ ಮಹಾಸಂಭ್ರಮಕ್ಕೆ, ಮಹಾವೇದಿಕೆಯೆ ಬೆಚ್ಚಿ ಬೆರಗು
ಗೊಳಿಸುವಂತೆ ಮೈಮರೆತಂತಿತ್ತು ಈ ನಮ್ಮಜೀ ಕನ್ನಡ ಕಾಮಿಡಿ ಅವಾರ್ಡ್ಸ್ 2020
ಈ ಸಡಗರ ಸಂಭ್ರಮದ ಕನ್ನಡ ಹಾಸ್ಯ ದಿಗ್ಗಜರಿಗೆ ಗೌರವಿಸುವ ಕಾರ್ಯಕ್ರಮ ಜೀ ಕನ್ನಡ
ಕಾಮಿಡಿ ಅವಾರ್ಡ್ಸ್ 2020 ರ ಮಹಾ ಹಬ್ಬಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7.30 ರಿಂದ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಈ ವೀಕೆಂಡ್‌ನಲ್ಲಿ ಪ್ರತಿಯೊಂದು ಮನೆ ಮನೆ ಯಲ್ಲಿಯೂ ಶುರುವಾಗಲಿದೆ ನಗೆಯ ಹಬ್ಬದ ಮಹಾಪರ್ವ,
ಬನ್ನೀ,,,ಕುಟುಂಬ ಸಮೇತರಾಗಿ ನಗುವಿನ ರಸದೌತಣವನ್ನು ಸವಿಯೋಣ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed