ಜೊತೆ ಜೊತೆಯಲಿ ಆರ್ಯವರ್ಧನ್‌ರ ಸಮಾಜಮುಖಿ ಕೆಲಸಕ್ಕೆ ಜೈ ಹೋ ಎಂದ ಅಭಿಮಾನಿಗಳು
Posted date: 02 Mon, Mar 2020 – 07:00:47 AM

ಕನ್ನಡ ಕಿರುತೆರೆ ಜಗತ್ತಿನಲ್ಲಿ ಸದ್ಯ "ಜೊತೆ ಜೊತೆಯಲಿ" ಧಾರಾವಾಹಿಯ ಆರ್ಯವರ್ಧನ್ ಅವರದ್ದೇ ಮಾತು. ಕನ್ನಡದ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಈ ಸೀರಿಯಲ್‌ನ ಕಥೆಯ ಜೊತೆ ಜೊತೆಗೆ ಸಮಾಜಮುಖಿ ಹಲವು ಕೆಲಸಗಳನ್ನು ಚಿತ್ರಕಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ ವಿದೇಶಿ ನೋಡುಗರು ಕೂಡ ಆರ್ಯವರ್ಧನ್ ಅವರ ಕೆಲಸಕ್ಕೆ ಮೆಚ್ಚು ಮಾತನಾಡಿದ್ದಾರೆ. ಹಲವು ಅಧಿಕಾರಿಗಳು ಕೂಡ ಧಾರಾವಾಹಿಯ ಈ ಹೊಸತನಕ್ಕೆ ಅಭಿನಂದಿಸಿದ್ದಾರೆ. ತಂಡಕ್ಕೆ ಮತ್ತು ವಾಹಿನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಹಾನಗರಗಳಲ್ಲಿ ಇಂದು ಕಸದ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ತಲೆದೂರಿದೆ. ಕಸವನ್ನು ಪ್ರತ್ಯೇಕವಾಗಿ ವಿಂಗಡಿಸದೇ ಹಾಕುವುದರಿಂದ ನಾನಾ ರೀತಿಯ ತೊಂದರೆಗಳು ಎದುರಾಗುತ್ತಿವೆ. ಈ ಸಮಸ್ಯೆಯನ್ನು ಜೊತೆ ಜೊತೆಯಲಿ ಧಾರಾವಾಹಿ ಕಥೆಯಲ್ಲಿ ಬಳಸಿಕೊಂಡು ಎಪಿಸೋಡ್ ಮಾಡಲಾಯಿತು. ಕಸ ನಿರ್ವಹಣೆ, ಪರಿಸರ ಸ್ವಚ್ಛತೆ ಮತ್ತು ಕಸ ವಿಂಗಡನೆ ಕುರಿತು ಆರ್ಯವರ್ಧನ್ ಅವರ ಮೂಲಕ ತಿಳಿಸಲಾಯಿತು. ಈ ಪ್ರಯೋಗಕ್ಕೆ ಅಪಾರ ಜನಮೆಚ್ಚುಗೆ ವ್ಯಕ್ತವಾಗಿದೆ. ಮೈಸೂರು ಸೇರಿದಂತೆ ಹಲವು ಮಹಾನಗರ ಪಾಲಿಕೆಗಳ ಅಧಿಕಾರಿಗಳು ಕೂಡ ಧಾರಾವಾಹಿಯ ಈ ಕಾರ್ಯವನ್ನು ಶ್ಲ್ಯಾಘಿಸಿದ್ದಾರೆ. ಅಲ್ಲದೇ, ಧಾರಾವಾಹಿ ನೋಡಿದ ಪ್ರೇಕ್ಷಕರು ಕೂಡ ಆರ್ಯವರ್ಧನ್ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ.
ಪರಿಸರ ಕಾಳಜಿ, ಸ್ವಚ್ಛತೆಯ ಜೊತೆ ಜೊತೆಗೆ ಈ ಧಾರಾವಾಹಿಯಲ್ಲಿ ಕಾರ್ಮಿಕರ ಪರವಾಗಿಯೂ ಹಲವು ಸಂಗತಿಗಳನ್ನು ತಿಳಿಸಿರುವುದು ಮತ್ತೊಂದು ವಿಶೇಷ. ಕಾರ್ಮಿಕರನ್ನು ಗೌರವದಿಂದ ಕಾಣುವಂತೆ ಆರ್ಯವರ್ಧನ್ ಹೇಳಿದ ಮಾತು, ಕಾರ್ಮಿಕರ ವಲಯದಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಈಗ ಪ್ರಸಾರ ಆಗುತ್ತಿರುವ ಎಪಿಸೋಡ್‌ನಲ್ಲಿ ನಾಡಿನ ರೈತರಿಗೆ ಗೌರವ ಸಲ್ಲಿಸುವಂತಹ ಸನ್ನಿವೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನ್ನದಾತರ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ ಜೀ ಕನ್ನಡ ವಾಹಿನಿ. ರೈತರು ದೇಶದ ನಿಜವಾದ ಬೆನ್ನೆಲುಬು. ಅನ್ನದಾತನ ಶ್ರಮಕ್ಕೆ ಬೆಲೆ ಕೊಡಬೇಕು ಎಂದು ಹೇಳುವ ಮೂಲಕ ರೈತರ ಬೆನ್ನಿಗೆ ನಿಂತಿದ್ದಾರೆ ಆರ್ಯವರ್ಧನ್.
ಮಣ್ಣಿನ ಮಹತ್ವ, ರೈತರ ಶ್ರಮ, ಅನ್ನದಾತನ ಕನಸು ಹೀಗೆ ನಾನಾ ವಿಷಯಗಳನ್ನು ಧಾರಾವಾಹಿಯಲ್ಲಿ ಹೇಳುವ ಪ್ರಯತ್ನಕ್ಕೆ ಪ್ರೇಕ್ಷಕರು ಜೈ ಹೋ ಎಂದಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾದರವರೆಗೆ ರಾತ್ರಿ 8.30 ಕ್ಕೆ ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರವಾಗುತ್ತಿದ್ದು, ನೂರು ಕಂತುಗಳನ್ನು ದಾಟಿ ಮುನ್ನುಗ್ಗುತ್ತಿದೆ.
 


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed